ಮದುವೆಯಾದರೂ ಕಡಿಮೆಯಾಗಿಲ್ಲ ಬ್ಯೂಟಿ, ಸ್ಯಾರಿಯಲ್ಲಿ ಮೋಡಿ ಮಾಡಿದ ಗ್ಲಾಮರಸ್ ಸಮಂತಾ

|

Updated on: Jan 06, 2020 | 3:12 PM

ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಮಣಿಯರಿಗೆ ತಮ್ಮ ಗ್ಲಾಮರಸ್ ಲುಕ್, ಗೆಟಪ್ ಎಲ್ಲವನ್ನೂ ಮೆಂಟೇನ್ ಮಾಡಿ ಸದಾ ಪೋಜ್ ಕೊಡ್ತಾ ಇರಬೇಕು ಅನ್ನೋ ಕ್ರೇಜ್ ಇದ್ದೇ ಇರುತ್ತೆ. ಅದ್ರಲ್ಲೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಬಣ್ಣದ ಲೋಕದಲ್ಲಿ ತಮಗೆ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದನ್ನ ನಟಿ ಸಮಂತಾ ಪ್ರೂವ್ ಮಾಡಿದ್ದಾರೆ. ಟಾಲಿವುಡ್​ನ ಗ್ಲಾಮರಸ್ ಬೆಡಗಿಯರು ಈಗಲೂ ಡಿಮ್ಯಾಂಡ್ ಉಳಿಸಿಕೊಂಡಿರೋ ನಟಿಮಣಿಯರ ಪಟ್ಟಿ ಮಾಡ್ತಾ ಹೋದ್ರೆ ಆ ಸಾಲಿಗೆ ನಟಿ ಸಮಂತಾ ಸೇರ್ತಾರೆ. ಮದುವೆ ಆಗಿದ್ರೂ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಬೇಡಿಕೆ ಕಡಿಮೆಯಾಗಿಲ್ಲ […]

ಮದುವೆಯಾದರೂ ಕಡಿಮೆಯಾಗಿಲ್ಲ ಬ್ಯೂಟಿ, ಸ್ಯಾರಿಯಲ್ಲಿ ಮೋಡಿ ಮಾಡಿದ ಗ್ಲಾಮರಸ್ ಸಮಂತಾ
Follow us on

ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಮಣಿಯರಿಗೆ ತಮ್ಮ ಗ್ಲಾಮರಸ್ ಲುಕ್, ಗೆಟಪ್ ಎಲ್ಲವನ್ನೂ ಮೆಂಟೇನ್ ಮಾಡಿ ಸದಾ ಪೋಜ್ ಕೊಡ್ತಾ ಇರಬೇಕು ಅನ್ನೋ ಕ್ರೇಜ್ ಇದ್ದೇ ಇರುತ್ತೆ. ಅದ್ರಲ್ಲೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಬಣ್ಣದ ಲೋಕದಲ್ಲಿ ತಮಗೆ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದನ್ನ ನಟಿ ಸಮಂತಾ ಪ್ರೂವ್ ಮಾಡಿದ್ದಾರೆ.

ಟಾಲಿವುಡ್​ನ ಗ್ಲಾಮರಸ್ ಬೆಡಗಿಯರು ಈಗಲೂ ಡಿಮ್ಯಾಂಡ್ ಉಳಿಸಿಕೊಂಡಿರೋ ನಟಿಮಣಿಯರ ಪಟ್ಟಿ ಮಾಡ್ತಾ ಹೋದ್ರೆ ಆ ಸಾಲಿಗೆ ನಟಿ ಸಮಂತಾ ಸೇರ್ತಾರೆ. ಮದುವೆ ಆಗಿದ್ರೂ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದಕ್ಕೆ ಸಮಂತ ಸೀರೆಯಲ್ಲಿ ಫೋಟೋ ಶೂಟ್ ಮಾಡಿ ಕಮಾಲ್ ಮಾಡಿರೋದೇ ಸಾಕ್ಷಿ.

ಸಮಂತಾ ಕೇವಲ ತಮ್ಮ ಗ್ಲಾಮರ್​ನಿಂದ ಮಾತ್ರವಲ್ಲಾ, ವೆರೈಟಿ ಪಾತ್ರಗಳಿಂದ ಇಡೀ ಸಿನಿ ದುನಿಯಾದಲ್ಲೇ ಕ್ರೇಜ್ ಉಳಿಸಿಕೊಂಡಿರೋ ನಟಿ. ಆದ್ರೆ, ನಾಗಚೈತನ್ಯ ಜೊತೆ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಮಂತಾಗೆ ಬೇಡಿಕೆ ಕಡಿಮೆಯಾಯ್ತು ಅನ್ನೋ ಸುದ್ದಿ ಹರಿದಾಡ್ತಿತ್ತು. ಆದ್ರೀಗ, ಸಮಂತಾ ಮಾತ್ರ ಒಂದಿಷ್ಟು ವೆರೈಟಿ ಸಿನಿಮಾಗಳಲ್ಲಿ ನಟಿಸ್ತಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಲೇ, ನನಗಿನ್ನೂ ಬೇಡಿಕೆ ಕಡಿಮೆಯಾಗಿಲ್ಲ. ಯಾವ ಹೀರೋಯಿನ್​ಗಳಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸ್ತಾರೆ.

ಸಮಂತಾ ಕಲರ್​ಫುಲ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿರೋದು ಸಂಚಲನ ಮೂಡಿಸಿದೆ. ಥೇಟ್ ಬಳುಕುವ ಬಳ್ಳಿಯಂತೆ ಪೋಜ್ ಕೊಟ್ಟಿದ್ದಾರೆ, ಈಕೆಯ ಗ್ಲಾಮರಸ್ ಲುಕ್ ನೋಡಿ ಕೆಲ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಮದುವೆ ಆದ ನಂತ್ರ ಈ ರೀತಿ ಪೋಸ್ ಬೇಕಿತ್ತಾ ಅಂತಾ ಮಾತನಾಡಿಕೊಳ್ತಿದ್ದಾರಂತೆ.

ಒಟ್ಟಾರೆ ಸದ್ಯಕ್ಕಂತೂ ಸಮಂತಾ ಗ್ಲಾಮರಸ್ ಲುಕ್… ಗೆಟಪ್ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಹಾಗಾದ್ರೆ, ಸದ್ದಿಲ್ಲದೇ ಸಮಂತಾ ಯಾವುದಾದ್ರೂ ಸಿನಿಮಾದಲ್ಲಿ ಅಭಿನಯಿಸೋಕೆ ಈ ರೀತಿ ಮಾಡಿದ್ದಾರಾ ಅನ್ನೋ ಅನುಮಾನ ಕಾಡ್ತಿದ್ದು, ಇದೆಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕಿದೆ.