ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್​ಗೆ ಮತ್ತೆ ಲವ್‌ ಆಗಿದ್ಯಂತೆ!

|

Updated on: Nov 28, 2019 | 8:06 AM

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಮತ್ತೆ ಲವ್‌ ಆಗಿದ್ಯಂತೆ. ಇಂಥಾದ್ದೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ. ಬಣ್ಣದ ಬದುಕಿನಲ್ಲಿ ಜೊತೆಯಾಟದ ಈ ಜೋಡಿ. ನಿಜಜೀವನದಲ್ಲೂ ಒಂದಾಗಿ ಮಾದರಿಯಾಗಿದೆ. ಈ ಮುದ್ದಾದ ಜೋಡಿಗೆ ಎರಡು ಮುದ್ದು ಮುದ್ದಾದ ಮಕ್ಕಳಿವೆ. ಆದ್ರೂ ರಾಧಿಕಾ ಪಂಡಿತ್‌ ಮತ್ತೆ ಲವ್‌ನಲ್ಲಿ ಬಿದ್ದಿದ್ದಾರಂತೆ. ರಾಧಿಕಾ ಪಂಡಿತ್‌ಗೆ ಮತ್ತೆ ಲವ್ವಾಗಿರೋದು ಯಾರ ಮೇಲೆ ಗೊತ್ತಾ. ಅದು ಬೇರಾರೂ ಅಲ್ಲ ತನ್ನ […]

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್​ಗೆ ಮತ್ತೆ ಲವ್‌ ಆಗಿದ್ಯಂತೆ!
Follow us on

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಮತ್ತೆ ಲವ್‌ ಆಗಿದ್ಯಂತೆ. ಇಂಥಾದ್ದೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ. ಬಣ್ಣದ ಬದುಕಿನಲ್ಲಿ ಜೊತೆಯಾಟದ ಈ ಜೋಡಿ. ನಿಜಜೀವನದಲ್ಲೂ ಒಂದಾಗಿ ಮಾದರಿಯಾಗಿದೆ. ಈ ಮುದ್ದಾದ ಜೋಡಿಗೆ ಎರಡು ಮುದ್ದು ಮುದ್ದಾದ ಮಕ್ಕಳಿವೆ. ಆದ್ರೂ ರಾಧಿಕಾ ಪಂಡಿತ್‌ ಮತ್ತೆ ಲವ್‌ನಲ್ಲಿ ಬಿದ್ದಿದ್ದಾರಂತೆ.

ರಾಧಿಕಾ ಪಂಡಿತ್‌ಗೆ ಮತ್ತೆ ಲವ್ವಾಗಿರೋದು ಯಾರ ಮೇಲೆ ಗೊತ್ತಾ. ಅದು ಬೇರಾರೂ ಅಲ್ಲ ತನ್ನ ಪತಿ ರಾಕಿ ಬಾಯ್ ಮೇಲೆ. ಇದಕ್ಕೆ ಕಾರಣ ರಾಕಿಂಗ್‌ ಸ್ಟಾರ್‌ ಯಶ್ ಹೊಸ ಏರ್‌ ಸ್ಟೈಲ್‌. ಸ್ಯಾಂಡಲ್‌ವುಡ್‌ನ ಸ್ಟೈಲಿಶ್‌ ಸ್ಟಾರ್‌ ಯಶ್‌ ತಮ್ಮ ಸ್ಟೈಲ್‌ ಜೊತೆಗೆ ಹೇರ್‌ ಸ್ಟೈಲ್‌ನಿಂದಲೂ ಹೆಚ್ಚು ಗಮನ ಸೆಳೆಯುತ್ತಾರೆ. ಸದ್ಯ ತಮ್ಮ ಹೇರ್‌ ಸ್ಟೈಲ್‌ ಸೀಕ್ರೆಟ್‌ ರಿವೀಲ್ ಮಾಡಿರೋ ಯಶ್‌, ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನ ಅಪ್‌ಲೋಡ್‌ ಮಾಡಿದ್ದಾರೆ.

ಯಶ್‌ರ ಈ ಹೊಸ ಹೇರ್‌ ಸ್ಟೈಲ್‌ ಹಿಂದಿರೋ ಕೈಚಳಕ ಯಾರದ್ದು ಅನ್ನೋದನ್ನ ರಿವೀಲ್‌ ಮಾಡಿದ್ದಾರೆ. ಡಿಸೈನರ್‌ ಸಾನಿಯಾ ಸರ್ದಾರಿಯಾ ಅದ್ಭುತವಾದ ಹೇರ್‌ ಸ್ಟೈಲಿಸ್ಟ್ ಅಂತ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಯಶ್‌ ಹಂಚಿಕೊಂಡಿರೋ ಫೋಟೋಗಳು ಸಿಕ್ಕಾಪಟ್ಟೆ ಸ್ಟೈಲಿಶ್‌ ಆಗಿವೆ.

ಹಾಗಾಗಿ ಆ ಫೋಟೋಗಳಿಗೆ ರಾಧಿಕಾ ಕಮೆಂಟ್‌ ಮಾಡಿದ್ದು, ನಾನು ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತ ಕಾಮೆಂಟ್‌ ಮಾಡಿದ್ದಾರೆ. ಯಶ್‌ ಫೋಟೋ ಜೊತೆಗೆ ರಾಧಿಕಾ ಪಂಡಿತ್‌ ಕಾಮೆಂಟ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಫುಲ್‌ ವೈರಲ್ ಆಗಿವೆ.

Published On - 8:05 am, Thu, 28 November 19