ಬೆಂಗಳೂರು: ಡ್ರಗ್ಸ್ ಬಳಕೆ ಬಗ್ಗೆ ಸಿಸಿಬಿ ಪೊಲೀಸರು ನಿನ್ನೆ ನಟಿ ರಾಗಿಣಿಗೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದರು. ಆದ್ರೆ ರಾಗಿಣಿ ಎಲ್ಲದಕ್ಕೂ ಹಾರಿಕೆ ಉತ್ತರ ಕೊಡ್ತಾ ನಂಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದರು. ಆದ್ರೆ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತ ನಡೆಸುತ್ತಲೇ ನಟಿ ರಾಗಿಣಿಗೆ ‘ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇವೆ’ ಎಂದು ಬಿಸಿ ಮುಟ್ಟಿಸಿದ್ದರು.
ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹಾಜರು ಪಡಿಸಿದ ಸಮಯದಲ್ಲಿಯೂ ತನಗೆ ಬೆನ್ನು ನೋವು ಇದೆ ಎಂದಿದ್ದರಂತೆ ನಟಿ. ಆಮೇಲೆ, ವೈದ್ಯರ ಸಂಪರ್ಕ ಮಾಡಬೇಕು, ರೆಸ್ಟ್ ಬೇಕು ಎಂದೆಲ್ಲ ಪೊಲೀಸರ ಮುಂದೆ ಅಳಲು ತೋಡಿಕೊಂಡರಂತೆ. ಆಗ ಸಿಸಿಬಿ ಪೊಲೀಸರು ವೈದ್ಯರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟರಂತೆ.
ಅರೆಸ್ಟ್ ಆಗುತ್ತಿದ್ದಂತೆ ಬೆನ್ನು ನೋವು ಎಂದು ಹೇಳಿದರೂ.. ಸಿಸಿಬಿ ಹಂತ ಹಂತವಾಗಿ ತನಿಖೆ ಬಿಗಿಗೊಳಿಸಿದೆ. ವೈದ್ಯರ ಮೂಲಕ ರಕ್ತ, ಮೂತ್ರ ಮತ್ತು ಕೂದಲು, ಉಗುರಿನ ಸ್ಯಾಂಪಲ್ಸ್ ಪಡೆಯಲಾಗಿದೆಯಂತೆ. ಸದ್ಯ ರಾಗಿಣಿ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸದ್ಯಕ್ಕೆ ಸಿಸಿಬಿ, ಡ್ರಗ್ಸ್ ಸೇವನೆ ಬಗ್ಗೆ ಎಫ್ಎಸ್ಎಲ್ ಕೇಂದ್ರದಿಂದ ವರದಿ ನಿರೀಕ್ಷೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.