AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಲ್ಮ್​ ಚೇಂಬರ್​ಗೆ ಚಿರು ಪತ್ನಿ ಮೇಘನಾ ರಾಜ್​ ದೂರು

ಬೆಂಗಳೂರು: ಡ್ರಗ್ಸ್ ವಿಚಾರವಾಗಿ ತನ್ನ ಪತಿ ಚಿರಂಜೀವಿ ಸರ್ಜಾ ಹೆಸರು ಬಳಸಿದ್ದು ಬೇಸರವಾಗಿದೆ ಎಂದು ನಟಿ ಮೇಘನಾ ರಾಜ್ ಅವರು ಫಿಲ್ಮ್​ ಚೇಂಬರ್​ಗೆ ದೂರು ಸಲ್ಲಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಅಂತಾ ಫಿಲ್ಮ್ ಚೇಂಬರ್​ಗೆ ಚಿರು ಪತ್ನಿ ಮೇಘನಾ ರಾಜ್ ಆಗ್ರಹಿಸಿದ್ದಾರೆ. ಸ್ಯಾಂಡಲ್​ವುಡ್​ಗೆ ಡ್ರಗ್​ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿ ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಇತ್ತೀಚೆಗೆ ಅಗಲಿದ್ದ ಯುವನಟ ಚಿರಂಜೀವಿ ಸರ್ಜಾರ ಕುರಿತು ಈ ವಿಚಾರವಾಗಿ ಮಾತನಾಡಿದ್ದರು. ‘ಇಂದ್ರಜಿತ್ […]

ಫಿಲ್ಮ್​ ಚೇಂಬರ್​ಗೆ ಚಿರು ಪತ್ನಿ ಮೇಘನಾ ರಾಜ್​ ದೂರು
KUSHAL V
|

Updated on:Sep 05, 2020 | 4:02 PM

Share

ಬೆಂಗಳೂರು: ಡ್ರಗ್ಸ್ ವಿಚಾರವಾಗಿ ತನ್ನ ಪತಿ ಚಿರಂಜೀವಿ ಸರ್ಜಾ ಹೆಸರು ಬಳಸಿದ್ದು ಬೇಸರವಾಗಿದೆ ಎಂದು ನಟಿ ಮೇಘನಾ ರಾಜ್ ಅವರು ಫಿಲ್ಮ್​ ಚೇಂಬರ್​ಗೆ ದೂರು ಸಲ್ಲಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಅಂತಾ ಫಿಲ್ಮ್ ಚೇಂಬರ್​ಗೆ ಚಿರು ಪತ್ನಿ ಮೇಘನಾ ರಾಜ್ ಆಗ್ರಹಿಸಿದ್ದಾರೆ.

ಸ್ಯಾಂಡಲ್​ವುಡ್​ಗೆ ಡ್ರಗ್​ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿ ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಇತ್ತೀಚೆಗೆ ಅಗಲಿದ್ದ ಯುವನಟ ಚಿರಂಜೀವಿ ಸರ್ಜಾರ ಕುರಿತು ಈ ವಿಚಾರವಾಗಿ ಮಾತನಾಡಿದ್ದರು.

‘ಇಂದ್ರಜಿತ್ ಸಾರ್ವಜನಿಕವಾಗಿ ಕ್ಷಮೆ ಕೇಳಲಿ’ ಇಂದ್ರಜಿತ್ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ವಾಣಿಜ್ಯ ಮಂಡಳಿಗೆ ಪತ್ರ ಬರೆದ ಮೇಘನಾ ರಾಜ್ ತಮ್ಮ ಸಂಸ್ಥೆ ಮೇಘನಾ ಸಿನಿಮಾಸ್​ ವತಿಯಿಂದ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ನನ್ನ ಪತಿ ತೀರಿಕೊಂಡು ಮೂರು ತಿಂಗಳು ಕಳೆದಿಲ್ಲ. ಆಗಲೇ ಪತಿಯ ಮೇಲೆ ಇಲ್ಲಸಲ್ಲದ ಆರೋಪ ಹೇರಲಾಗ್ತಿದೆ ಅಂತಾ ಮೇಘನಾ ಆರೋಪಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನೋವಾಗಿದೆ. ಗರ್ಭವತಿ ಆಗಿರುವ ನಾನು ಮಾನಸಿಕವಾಗಿ ಕುಗ್ಗಿದ್ದೇನೆ. ಇಂತಹ ಬೆಳವಣಿಗೆಯಿಂದ ಬೇಸರವಾಗಿದೆ. ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ಕುಟುಂಬಕ್ಕೆ ಬೇಸರವಾಗಿದೆ. ಹಾಗಾಗಿ, ಇಂದ್ರಜಿತ್ ಲಂಕೇಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಮೇಘನಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಚಾರವಾಗಿ ದೂರು ಸ್ವೀಕರಿಸಿದ ಫಿಲ್ಮ್​ ಚೇಂಬರ್​ ಇದೀಗ ಇಂದ್ರಜಿತ್ ಲಂಕೇಶ್ ಸಂಪರ್ಕಿಸಲಿದೆ ಎಂದು ತಿಳಿದುಬಂದಿದೆ. ಮೇಘನಾ ಬರೆದಿರುವ ಪತ್ರವನ್ನು ಲಗತ್ತಿಸಲಿರುವ ವಾಣಿಜ್ಯ ಮಂಡಳಿ ನಿರ್ದೇಶಕ ಇಂದ್ರಜಿತ್​ ಲಂಕೇಶ್ ಕ್ಷಮೆ ಕೇಳುವಂತೆ ಒತ್ತಾಯಿಸಲಿದೆ ಎಂದು ತಿಳಿದುಬಂದಿದೆ.

ಫಿಲ್ಮ್​ ಚೇಂಬರ್​ಗೆ ತಮ್ಮ ವಿರುದ್ಧ ಮೇಘನಾ ರಾಜ್​ ದೂರು ನೀಡಿರುವ ಹಿನ್ನೆಲೆಯಲ್ಲಿ ಇಂದು ಸಂಜೆ 4.30ಕ್ಕೆ ಫಿಲ್ಮ್​ ಚೇಂಬರ್​ಗೆ ಇಂದ್ರಜಿತ್ ಲಂಕೇಶ್​ ಭೇಟಿಕೊಡಲಿದ್ದಾರೆ. ಫಿಲ್ಮ್ ಚೇಂಬರ್ ಸದಸ್ಯರ ಜೊತೆ ಇಂದ್ರಜಿತ್ ಲಂಕೇಶ್ ಚರ್ಚೆ ನಡೆಸಲಿದ್ದಾರೆ. ಈ ನಡುವೆ ಟಿವಿ9 ಜೊತೆ ಮಾತನಾಡಿದ ಇಂದ್ರಜಿತ್​ ಸ್ಯಾಂಡಲ್​ವುಡ್​ನಲ್ಲಿರೊ ಡ್ರಗ್ ಮಾಫಿಯಾ ಬಗ್ಗೆ ನನಗೆ ತಿಳಿದ ಅಭಿಪ್ರಾಯ ಹೇಳಿದ್ದೇನೆ. ಚಿರು ವಿಚಾರಕ್ಕೆ ವಿಷಾದ ವ್ಯಕ್ತಪಡಿಸ್ತೇನೆ ಎಂದು ಹೇಳಿದರು.

ಜೊತೆಗೆ, ನಟಿಯರ ಹೆಸರು ಮಾತ್ರ ‌ಬರ್ತಿದೆ. ಆದರೆ, ನಟರ ಹೆಸರು ಬರುತ್ತಿಲ್ಲ ಎಂಬ ಮಾತಿಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ ಎಂದು ಇಂದ್ರಜಿತ್​ ಪ್ರತಿಕ್ರಿಯಿಸಿದ್ದಾರೆ.

Published On - 3:26 pm, Sat, 5 September 20