Drugs ಡೀಲ್​ ಪ್ರಕರಣ: A2 ರಾಗಿಣಿ ವಿರುದ್ಧ ಯಾವೆಲ್ಲ ಕೇಸ್​ಗಳು ದಾಖಲಾಗಿವೆ ಗೊತ್ತಾ?

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಗಿಣಿ ವಿರುದ್ಧ ಅಪರಾಧ ಮತ್ತು ಒಳಸಂಚು ಅಡಿಯಲ್ಲಿ ಕೇಸ್​ ದಾಖಲಾಗಿದೆ. ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ CCB ಎಸಿಪಿ ಗೌತಮ್​ರಿಂದ FIR ದಾಖಲಾಗಿದೆ. NDPS ಕಾಯ್ದೆಯ 21, 21c, 27A, 27B, 29 ಸೆಕ್ಷನ್​ಗಳು ಹಾಗೂ IPC ಸೆಕ್ಷನ್​120b ಅಡಿಯಲ್ಲಿ ನಟಿ ರಾಗಿಣಿ ವಿರುದ್ಧ ಪ್ರಕರಣ ದಾಖಲಾಗಿದೆ. ರಾಗಿಣಿ ವಿರುದ್ಧ ಕಠಿಣ ಸೆಕ್ಷನ್​ಗಳನ್ನ ದಾಖಲಿಸಿರುವ ಪೊಲೀಸರು ಅವುಗಳ ವಿವಿರ ಹೀಗಿದೆ. 1. NDPS ಸೆಕ್ಷನ್​ 21: […]

Drugs ಡೀಲ್​ ಪ್ರಕರಣ: A2 ರಾಗಿಣಿ ವಿರುದ್ಧ ಯಾವೆಲ್ಲ ಕೇಸ್​ಗಳು ದಾಖಲಾಗಿವೆ ಗೊತ್ತಾ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Sep 05, 2020 | 12:09 PM

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಗಿಣಿ ವಿರುದ್ಧ ಅಪರಾಧ ಮತ್ತು ಒಳಸಂಚು ಅಡಿಯಲ್ಲಿ ಕೇಸ್​ ದಾಖಲಾಗಿದೆ. ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ CCB ಎಸಿಪಿ ಗೌತಮ್​ರಿಂದ FIR ದಾಖಲಾಗಿದೆ. NDPS ಕಾಯ್ದೆಯ 21, 21c, 27A, 27B, 29 ಸೆಕ್ಷನ್​ಗಳು ಹಾಗೂ IPC ಸೆಕ್ಷನ್​120b ಅಡಿಯಲ್ಲಿ ನಟಿ ರಾಗಿಣಿ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಗಿಣಿ ವಿರುದ್ಧ ಕಠಿಣ ಸೆಕ್ಷನ್​ಗಳನ್ನ ದಾಖಲಿಸಿರುವ ಪೊಲೀಸರು ಅವುಗಳ ವಿವಿರ ಹೀಗಿದೆ. 1. NDPS ಸೆಕ್ಷನ್​ 21: ತಯಾರಿಸಿದ ಡ್ರಗ್ಸ್ ಹೊಂದುವುದು, ಮಾರಾಟ, ಖರೀದಿ, ಸಾಗಾಣೆ ಮಾಡಿದರೆ ಅಪರಾಧ 2. NDPS ಸೆಕ್ಷನ್ 21 C: ಇಂತಹ ಅಕ್ರಮ ಡ್ರಗ್ಸ್ ವಾಣಿಜ್ಯ ಪ್ರಮಾಣದ್ದಾದರೆ 10 ರಿಂದ 20 ವರ್ಷಗಳವರೆಗೆ ಸೆರೆವಾಸ.. 3. NDPS ಸೆಕ್ಷನ್ 27: ಅಕ್ರಮವಾಗಿ ಡ್ರಗ್ಸ್ ಸಾಗಣೆ, ಹಣಕಾಸು ತೊಡಗಿಸುವುದು, ಅಪರಾಧಿಗಳ ರಕ್ಷಣೆಯಲ್ಲಿ ತೊಡಗಿದರೆ 10 ರಿಂದ 20 ವರ್ಷಗಳವರೆಗೆ ಸೆರೆವಾಸ 4. NDPS ಸೆಕ್ಷನ್ 27 B: ಅಕ್ರಮ ಡ್ರಗ್ಸ್ ವ್ಯವಹಾರದಿಂದ ಬಂದ ಹಣದಿಂದ ಆಸ್ತಿ ಹೊಂದಿದರೆ 10 ವರ್ಷಗಳವರೆಗೆ ಜೈಲು 5. NDPS ಸೆಕ್ಷನ್ 29: ಅಪರಾಧಿಕ ಒಳಸಂಚು 6. IPC 120 b: ಒಳಸಂಚು

Published On - 12:02 pm, Sat, 5 September 20