ಗುಪ್ತ್ ಗುಪ್ತ್ ರೆಸಾರ್ಟ್ ಪಾರ್ಟಿಯಲ್ಲಿ.. ಡ್ರಗ್ಸ್ ಸೇವನೆ -ಫೋಟೋ ಬಿಚ್ಚಿಡ್ತು ರಾಗಿಣಿ ರಹಸ್ಯ!
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ಕುರಿತು ದಿನದಿಂದ ದಿನಕ್ಕೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. CCB ವಿಚಾರಣೆ ವೇಳೆ ನಟಿ ರಾಗಿಣಿ ಆಪ್ತ ರವಿಶಂಕರ್ ಮತ್ತುಷ್ಟು ಮಾಹಿತಿ ಹೊರಹಾಕಿದ್ದಾನೆ. ಲಾಕ್ಡೌನ್ ವೇಳೆ ನಡೆದಿದ್ದ ಗೌಪ್ಯ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ನಟಿ ರಾಗಿಣಿ ದ್ವಿವೇದಿ, ಆಕೆಯ ಆಪ್ತ ರವಿಶಂಕರ್ ಜೊತೆ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ. ರಾಗಿಣಿ MDMA ಡ್ರಗ್ಸ್ ಸೇವಿಸಿದ್ದ ಬಗ್ಗೆ ರವಿಶಂಕರ್ ಮಾಹಿತಿ ಕೊಟ್ಟಿದ್ದಾನೆ. ಜೊತೆಗೆ, ಪಾರ್ಟಿಯಲ್ಲಿ ಕೇವಲ 25 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದ್ದು […]
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ಕುರಿತು ದಿನದಿಂದ ದಿನಕ್ಕೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. CCB ವಿಚಾರಣೆ ವೇಳೆ ನಟಿ ರಾಗಿಣಿ ಆಪ್ತ ರವಿಶಂಕರ್ ಮತ್ತುಷ್ಟು ಮಾಹಿತಿ ಹೊರಹಾಕಿದ್ದಾನೆ.
ಲಾಕ್ಡೌನ್ ವೇಳೆ ನಡೆದಿದ್ದ ಗೌಪ್ಯ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ನಟಿ ರಾಗಿಣಿ ದ್ವಿವೇದಿ, ಆಕೆಯ ಆಪ್ತ ರವಿಶಂಕರ್ ಜೊತೆ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ. ರಾಗಿಣಿ MDMA ಡ್ರಗ್ಸ್ ಸೇವಿಸಿದ್ದ ಬಗ್ಗೆ ರವಿಶಂಕರ್ ಮಾಹಿತಿ ಕೊಟ್ಟಿದ್ದಾನೆ. ಜೊತೆಗೆ, ಪಾರ್ಟಿಯಲ್ಲಿ ಕೇವಲ 25 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದ್ದು ಆಹ್ವಾನಿತ 25 ಮಂದಿಯಲ್ಲಿ ಸ್ಟಾರ್ಗಳು, ಉದ್ಯಮಿಗಳು, ಟೆಕ್ಕಿಗಳು ಹಾಗೂ ಡ್ರಗ್ ಪೆಡ್ಲರ್ಸ್ಗಳು ಭಾಗಿಯಾಗಿದ್ದರಂತೆ.
ಈ ಗೌಪ್ಯ ಪಾರ್ಟಿ ಯಲಹಂಕ ಹೊರವಲಯದಲ್ಲಿರುವ ಲೇ ರೋಮ ಗಾರ್ಡೇನಿಯಾ ರೆಸಾರ್ಟ್ನಲ್ಲಿ ನಡೆದಿತ್ತು ಎಂದು ರವಿಶಂಕರ್ CCB ಅಧಿಕಾರಿಗಳಿಗೆ ತಿಳಿಸಿದ್ದಾನೆ. ರೆಸಾರ್ಟ್ನಲ್ಲಿ ಯಾವುದೇ ಸಿಸಿಟಿವಿ ಇರಲಿಲ್ಲ. ಜೊತೆಗೆ ಪಾರ್ಟಿ ಮಧ್ಯೆ ಫೋಟೊ, ವಿಡಿಯೋ ಮಾಡುವಂತಿರಲಿಲ್ಲ ಎಂಬ ಕಂಡೀಷನ್ ಹಾಕಲಾಗಿತ್ತು ಎಂದೂ ಸಹ ರವಿಶಂಕರ್ ತಿಳಿಸಿದ್ದಾನೆ.
ಅನುಮತಿ ಇಲ್ಲದಿದ್ದರೂ ಫೋಟೋ ಮಾಡಿ ತಗಲಾಕೊಂಡರು! ಪಾರ್ಟಿ ವೇಳೆ ಮೊಬೈಲ್ ಬಳಕೆಗೆ ಅನುಮತಿ ಇಲ್ಲದಿದ್ದರೂ, ರವಿಶಂಕರ್ ಕೆಲ ಫೋಟೋ ತೆಗೆದಿದ್ದನಂತೆ. ಬಳಿಕ ಆ ಫೋಟೊಗಳನ್ನು ಡಿಲಿಟ್ ಮಾಡಿದ್ದನಂತೆ. ಆದರೆ, ರಾಗಿಣಿ ಡ್ರಗ್ಸ್ ಸೇವನೆ ಬಗ್ಗೆ ರವಿಶಂಕರ್ನ ಮೊಬೈಲ್ ರಿಟ್ರೀವ್ ಮಾಡಿದ ವೇಳೆ ಇವೆಲ್ಲಾ ಮಹತ್ವದ ಸಾಕ್ಷ್ಯ ತನ್ನಿಂತಾನೇ ದೊರೆತಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ವಿರುದ್ಧ ಕಾಟನ್ಪೇಟೆ ಠಾಣೆಯಲ್ಲಿ FIR ದಾಖಲಾಗಿದೆ. ಇದಲ್ಲದೆ, ನಿನ್ನೆ ಪಾರ್ಟಿ ನಡೆದಿದ್ದ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಅಧಿಕಾರಿಗಳು ಮತ್ತಷ್ಟು ಸಾಕ್ಷ್ಯಗಳನ್ನ ಕಲೆಹಾಕಿದ್ದಾರೆ.
Published On - 10:41 am, Sat, 5 September 20