ನಿನ್ನೆ ರಾತ್ರಿ Arrest ಆಗುತ್ತಿದ್ದಂತೆ ನಟಿ ರಾಗಿಣಿ ಇಟ್ಟಿದ್ದ ಬೇಡಿಕೆ ಏನು ಗೊತ್ತಾ?

ಬೆಂಗಳೂರು: ಡ್ರಗ್ಸ್​ ಬಳಕೆ ಬಗ್ಗೆ ಸಿಸಿಬಿ ಪೊಲೀಸರು ನಿನ್ನೆ ನಟಿ ರಾಗಿಣಿಗೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದರು. ಆದ್ರೆ ರಾಗಿಣಿ ಎಲ್ಲದಕ್ಕೂ ಹಾರಿಕೆ ಉತ್ತರ ಕೊಡ್ತಾ ನಂಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದರು. ಆದ್ರೆ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತ ನಡೆಸುತ್ತಲೇ ನಟಿ ರಾಗಿಣಿಗೆ ‘ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇವೆ’ ಎಂದು ಬಿಸಿ ಮುಟ್ಟಿಸಿದ್ದರು. ಇದರಿಂದ ಕಂಗೆಟ್ಟ ರಾಗಿಣಿ ಬೆನ್ನು ನೋವು ನಾಟಕವಾಡುತ್ತಾ.. ರಾತ್ರಿ ಪೊಲೀಸರ ಮುಂದೆ ಹೊಸ ಬೇಡಿಕೆ ಇಟ್ಟಿದ್ದರಂತೆ.. ಇಂದು ರಾತ್ರಿ ಮನೆಗೆ ತೆರಳಿ, ನಾಳೆ ಬೆಳಗ್ಗೆಯೇ […]

ನಿನ್ನೆ ರಾತ್ರಿ Arrest ಆಗುತ್ತಿದ್ದಂತೆ ನಟಿ ರಾಗಿಣಿ ಇಟ್ಟಿದ್ದ ಬೇಡಿಕೆ ಏನು ಗೊತ್ತಾ?
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Sep 05, 2020 | 4:58 PM

ಬೆಂಗಳೂರು: ಡ್ರಗ್ಸ್​ ಬಳಕೆ ಬಗ್ಗೆ ಸಿಸಿಬಿ ಪೊಲೀಸರು ನಿನ್ನೆ ನಟಿ ರಾಗಿಣಿಗೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದರು. ಆದ್ರೆ ರಾಗಿಣಿ ಎಲ್ಲದಕ್ಕೂ ಹಾರಿಕೆ ಉತ್ತರ ಕೊಡ್ತಾ ನಂಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದರು. ಆದ್ರೆ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತ ನಡೆಸುತ್ತಲೇ ನಟಿ ರಾಗಿಣಿಗೆ ‘ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇವೆ’ ಎಂದು ಬಿಸಿ ಮುಟ್ಟಿಸಿದ್ದರು.

ಇದರಿಂದ ಕಂಗೆಟ್ಟ ರಾಗಿಣಿ ಬೆನ್ನು ನೋವು ನಾಟಕವಾಡುತ್ತಾ.. ರಾತ್ರಿ ಪೊಲೀಸರ ಮುಂದೆ ಹೊಸ ಬೇಡಿಕೆ ಇಟ್ಟಿದ್ದರಂತೆ.. ಇಂದು ರಾತ್ರಿ ಮನೆಗೆ ತೆರಳಿ, ನಾಳೆ ಬೆಳಗ್ಗೆಯೇ ವಾಪಸ್ಸು ಬರ್ತಿನಿ ಎಂದು ದುಂಬಾಲು ಬಿದ್ದರಂತೆ. ಪೊಲೀಸರು ರಾಗಿಣಿ ಮಾತಿಗೆ ನಕ್ಕು ಇಲ್ಲಾ ನೀವು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿ ಎಂದು ಹೇಳಿ ವ್ಯವಸ್ಥೆ ಮಾಡಿದರಂತೆ.

ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹಾಜರು ಪಡಿಸಿದ ಸಮಯದಲ್ಲಿಯೂ ತನಗೆ ಬೆನ್ನು ನೋವು ಇದೆ ಎಂದಿದ್ದರಂತೆ ನಟಿ. ಆಮೇಲೆ, ವೈದ್ಯರ ಸಂಪರ್ಕ ಮಾಡಬೇಕು, ರೆಸ್ಟ್ ಬೇಕು ಎಂದೆಲ್ಲ ಪೊಲೀಸರ ಮುಂದೆ ಅಳಲು ತೋಡಿಕೊಂಡರಂತೆ. ಆಗ ಸಿಸಿಬಿ ಪೊಲೀಸರು ವೈದ್ಯರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟರಂತೆ.

ಅರೆಸ್ಟ್ ಆಗುತ್ತಿದ್ದಂತೆ ಬೆನ್ನು ನೋವು ಎಂದು ಹೇಳಿದರೂ.. ಸಿಸಿಬಿ ಹಂತ ಹಂತವಾಗಿ ತನಿಖೆ ಬಿಗಿಗೊಳಿಸಿದೆ. ವೈದ್ಯರ ಮೂಲಕ ರಕ್ತ, ಮೂತ್ರ ಮತ್ತು ಕೂದಲು, ಉಗುರಿನ ಸ್ಯಾಂಪಲ್ಸ್ ಪಡೆಯಲಾಗಿದೆಯಂತೆ. ಸದ್ಯ ರಾಗಿಣಿ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸದ್ಯಕ್ಕೆ ಸಿಸಿಬಿ, ಡ್ರಗ್ಸ್ ಸೇವನೆ ಬಗ್ಗೆ ಎಫ್ಎಸ್ಎಲ್ ಕೇಂದ್ರದಿಂದ ವರದಿ ನಿರೀಕ್ಷೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ