ಇಂದ್ರಜಿತ್‌‌ ಡ್ರಗ್ಸ್‌ ಹೇಳಿಕೆ ಠುಸ್ ಪಟಾಕಿಯಾ, ಬಿಟ್ಟಿದ್ದೆಲ್ಲಾ ಬುರುಡೆ? ಏನಂತಿವೆ CCB ಮೂಲ?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಎಗ್ಗಿಲ್ಲದೇ ಉಪಯೋಗಿಸಲಾಗ್ತಿದೆ ಡ್ರಗ್ಸ್‌ ಎನ್ನುವ ನಿರ್ದೇಶಕ ಮತ್ತು ಹಿರಿಯ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಹೇಳಿಕೆ ಠುಸ್‌ ಪಟಾಕಿಯಾ? ಹಾಗಂತ ಹೇಳುತ್ತಿವೆ ತನಿಖೆ ನಡೆಸುತ್ತಿರುವ CCB ಮೂಲಗಳು! ಯಾಕಂದ್ರೆ ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಇಂದ್ರಜಿತ್‌ ಲಂಕೇಶ್‌, ಯಾವುದೇ ಸೂಕ್ತ ದಾಖಲಾತಿಗಳನ್ನು ನೀಡಿಲ್ವಂತೆ. ಸಿಸಿಬಿಗೆ ಪೂರ್ಣ ಪ್ರಮಾಣದ ಮಾಹಿತಿ ನೀಡದೇ ಕೇವಲ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೀಗಾಗಿರಬಹುದು, ಹಾಗಾಗಿರಬಹುದು ಎಂದು ಮಾಹಿತಿ ನೀಡಿದ್ದಾರಂತೆ. ಅನುಮಾನಗಳನ್ನಷ್ಟೇ ವ್ಯಕ್ತಪಡಿಸಿದ್ದಾರಂತೆ ಲಂಕೇಶ್​ ಪುತ್ರ ತಮ್ಮ […]

ಇಂದ್ರಜಿತ್‌‌ ಡ್ರಗ್ಸ್‌ ಹೇಳಿಕೆ ಠುಸ್ ಪಟಾಕಿಯಾ, ಬಿಟ್ಟಿದ್ದೆಲ್ಲಾ ಬುರುಡೆ? ಏನಂತಿವೆ CCB ಮೂಲ?
Edited By:

Updated on: Sep 01, 2020 | 5:01 PM

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಎಗ್ಗಿಲ್ಲದೇ ಉಪಯೋಗಿಸಲಾಗ್ತಿದೆ ಡ್ರಗ್ಸ್‌ ಎನ್ನುವ ನಿರ್ದೇಶಕ ಮತ್ತು ಹಿರಿಯ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಹೇಳಿಕೆ ಠುಸ್‌ ಪಟಾಕಿಯಾ? ಹಾಗಂತ ಹೇಳುತ್ತಿವೆ ತನಿಖೆ ನಡೆಸುತ್ತಿರುವ CCB ಮೂಲಗಳು!

ಯಾಕಂದ್ರೆ ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಇಂದ್ರಜಿತ್‌ ಲಂಕೇಶ್‌, ಯಾವುದೇ ಸೂಕ್ತ ದಾಖಲಾತಿಗಳನ್ನು ನೀಡಿಲ್ವಂತೆ. ಸಿಸಿಬಿಗೆ ಪೂರ್ಣ ಪ್ರಮಾಣದ ಮಾಹಿತಿ ನೀಡದೇ ಕೇವಲ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೀಗಾಗಿರಬಹುದು, ಹಾಗಾಗಿರಬಹುದು ಎಂದು ಮಾಹಿತಿ ನೀಡಿದ್ದಾರಂತೆ.

ಅನುಮಾನಗಳನ್ನಷ್ಟೇ ವ್ಯಕ್ತಪಡಿಸಿದ್ದಾರಂತೆ ಲಂಕೇಶ್​ ಪುತ್ರ
ತಮ್ಮ ಹೇಳಿಕೆಗೆ ಪೂರಕ ಎನ್ನುವಂತೆ ಈ ಹಿಂದೆ ಸೆಲೆಬ್ರಿಟಿಗಳ ಕಾರು ಅಪಘಾತಗಳನ್ನು ಉಲ್ಲೇಖಿಸಿರುವ ಇಂದ್ರಜಿತ್‌, ಕಾರು ಅಪಘಾತದ ಹಿಂದೆ ಡ್ರಗ್ಸ್​ ಕಾರಣವಾಗಿರಬಹುದು. ಕೆಲವೊಂದು ಪಾರ್ಟಿಗಳಲ್ಲಿ ನಡೆದ ಗಲಾಟೆಗಳೂ ಕೂಡಾ ಡ್ರಗ್​ ಸೇವನೆಯಿಂದಾಗಿರಬಹುದು ಎಂದು ಹತ್ತು ಹಲವು ಅನುಮಾನಗಳನ್ನಷ್ಟೇ ವ್ಯಕ್ತಪಡಿಸಿದ್ದಾರಂತೆ ಲಂಕೇಶ್​ ಪುತ್ರ.

ಕೆಲವೊಂದು ನಟ ನಟಿಯರ ಬಗ್ಗೆ ಪ್ರಸ್ತಾಪಿಸಿ ಅವರಿಗೆ ಡ್ರಗ್​ ನಂಟು ಇರಬಹುದು ಎಂಬ ಅನುಮಾನವನ್ನ ಅಧಿಕಾರಿಗಳ ಜತೆಗೆ ಹಂಚಿಕೊಂಡಿದ್ದಾರಂತೆ. ಆದ್ರೆ ನಿಖರವಾಗಿ ಇಂತಹವರೇ ಎಂದು ಎಲ್ಲೂ ಹೇಳಿಕೆ ನೀಡಿಲ್ಲವಂತೆ. ಆದ್ರೆ ಕೆಲವೊಂದು ಪ್ರಮುಖ ಘಟನೆಗಳನ್ನ ಆಧಾರವಾಗಿ ಅನುಮಾನವನ್ನ ವ್ಯಕ್ತಪಡಿಸಿದ್ದು, ಆದ್ರೆ ಆ ಅನುಮಾನಗಳಿಗೆ ಯಾವುದೇ ರೀತಿಯ ಸಾಕ್ಷ್ಯವನ್ನು ಸಿಸಿಬಿಗೆ ಒದಗಿಸಿಲ್ಲವೆಂದು ತಿಳಿದು ಬಂದಿದೆ.

ಚೆಂಡು ಈಗ ಮತ್ತೇ ಇಂದ್ರಜಿತ್‌ ಲಂಕೇಶ್‌ ಅಂಗಳಕ್ಕೆ
ಹೀಗಾಗಿ ಇಂದ್ರಜಿತ್‌ ಲಂಕೇಶ್‌ರ ಈ ಅನುಮಾನವನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಲು ಅಸಾಧ್ಯ. ಹೀಗಾಗಿ ಮತ್ತೊಮ್ಮೆ ಇಂದ್ರಜಿತ್‌ ಲಂಕೇಶ್​ಗೆ ಅವಕಾಶ ನೀಡಿರುವ ಸಿಸಿಬಿ ಅಧಿಕಾರಿಗಳು, ನಿಮ್ಮಲ್ಲಿ ಸಾಕ್ಷ್ಯಗಳು ಇದ್ರೆ ತಂದು ಕೊಡಿ ಎಂದು ಅವರಿಗೆ ಸೂಚನೆ ನೀಡಿದ್ದಾರೆಂದು ತಿಿಳಿದು ಬಂದಿದೆ.

ಹೀಗಾಗಿ ಚೆಂಡು ಈಗ ಮತ್ತೇ ಇಂದ್ರಜಿತ್‌ ಲಂಕೇಶ್‌ ಅಂಗಳದಲ್ಲಿದ್ದು, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.