AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟಿ ಜೋಶ್ ಹೆಚ್ಚಿಸಲು ಬಂದ ‘ಸೆಲ್ಫಿ ಸರೋಜಾ’; ಕಿರಣ್ ರಾಜ್ ಸಿನಿಮಾದಿಂದ ಹೊಸ ಹಾಡು

ಕಿರಣ್ ರಾಜ್ ಅಭಿನಯದ ಜಾಕಿ 42 ಸಿನಿಮಾದ ಹೊಸ ವರ್ಷದ ಪಾರ್ಟಿ ಹಾಡು ಸೆಲ್ಫಿ ಸರೋಜಾ ಬಿಡುಗಡೆಯಾಗಿದೆ. ಮಮತಾ ಶರ್ಮಾ ಹಾಗೂ ಸಿಂಹ ಧ್ವನಿ ನೀಡಿರುವ ಈ ಹಾಡಿಗೆ ವಿನೋದ್ ಯಜಮನ್ಯ ಸಂಗೀತವಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದೆ.

ಪಾರ್ಟಿ ಜೋಶ್ ಹೆಚ್ಚಿಸಲು ಬಂದ ‘ಸೆಲ್ಫಿ ಸರೋಜಾ’; ಕಿರಣ್ ರಾಜ್ ಸಿನಿಮಾದಿಂದ ಹೊಸ ಹಾಡು
ಸೆಲ್ಫಿ ಸರೋಜಾ
ರಾಜೇಶ್ ದುಗ್ಗುಮನೆ
|

Updated on:Nov 18, 2026 | 10:27 AM

Share

ಮುಖ್ಯಾಂಶಗಳು

  • ‘ಸೆಲ್ಫಿ ಸರೋಜಾ’ ಸಾಂಗ್ ರಿಲೀಸ್
  • ಹೊಸ ವರ್ಷದ ಪಾರ್ಟಿ ಸಂಭ್ರಮಕ್ಕೆ ಸಕ್ಕತ್ ಜೋಶ್
  • ಕಿರಣ್ ರಾಜ್ ಮತ್ತು ಕೃತಿ ವರ್ಮಾ ಜೋಡಿಯ ನೃತ್ಯಕ್ಕೆ ಫಿದಾ ಆದ ಅಭಿಮಾನಿಗಳು

ಹೊಸ ವರ್ಷ ಸಮೀಪಿಸಿದರೆ ಸಾಕು ಪಾರ್ಟಿ ಹಾಡುಗಳು ಸಾಲು ಸಾಲಾಗಿ ಬಿಡುಗಡೆ ಆಗುತ್ತವೆ. ಈ ಹಾಡುಗಳು ಸೆಲೆಬ್ರೇಷನ್ ವೇಳೆ ಬಳಕೆ ಆಗುತ್ತವೆ. ಹೊಸ ವರ್ಷಕ್ಕೆ ಒಂದೂವರೆ ತಿಂಗಳು ಬಾಕಿ ಇರುವಾಗಲೇ ‘ಜಾಕಿ 42’ ಚಿತ್ರದಿಂದ ಹಾಡೊಂದು ಬಿಡುಗಡೆ ಆಗಿದೆ. ‘ಸೆಲ್ಫಿ ಸರೋಜಾ’ ಎಂಬುದು ಹಾಡಿನ ಹೆಸರು. ಈ ಹಾಡು ಸಖತ್ ಜೋಶ್ ತುಂಬಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಂಗ್ ಗಮನ ಸೆಳೆಯುತ್ತಿದೆ.

‘ಜಾಕಿ 42’ ಚಿತ್ರಕ್ಕೆ ಕಿರಣ್ ರಾಜ್ ಹೀರೋ ಆದರೆ, ಹೃತಿಕಾ ಶ್ರೀನಿವಾಸ್ ನಾಯಕಿ. ದೀಪಕ್ ರೈ ಪಣಜೆ, ಬಾಲಾ ರಾಜ್ವಾಡಿ, ಯಶ್ ಶೆಟ್ಟಿ, ರಾಜೇಂದ್ರ ಕಾರಂತ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾದ ‘ಸೆಲ್ಫಿ ಸರೋಜಾ’ ಹಾಡಿಗೆ ಕೃತಿ ವರ್ಮ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಭೂಷಣ್ ಮಾಸ್ಟರ್ ಕೊರಿಯೋಗ್ರಫಿ ಇದೆ. ಈ ಹಾಡು ಸಾಕಷ್ಟು ಗಮನ ಸೆಳೆಯುತ್ತಿದೆ. ‘ಜಾಕಿ 42’ ಚಿತ್ರಕ್ಕೆ ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಕಿರಣ್ ರಾಜ್ ಹಾಗೂ ಗುರುತೇಜ್ ಕಾಂಬಿನೇಷನ್​ ಅಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಸಿನಿಮಾಗಾಗಿ ಸಾಕಷ್ಟು ಅಧ್ಯಯನ ನಡೆಸಿರುವ ಇವರು, ಹೊಸ ರೀತಿಯಲ್ಲಿ ಸಿನಿಮಾನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ನಾಯಕ ಕಿರಣ್ ರಾಜ್ ಮಾತನಾಡಿ, ‘ಬಣ್ಣದ ಲೋಕದ ಕೆಲಸ ಎಂದು ಬಂದಾಗ ನಾನು ನೂರಕ್ಕೆ ನೂರರಷ್ಟು ಕೊಡುತ್ತೇನೆ. ಯಾವುದರಲ್ಲೂ ರಾಜಿ ಆಗುವುದೇ ಇಲ್ಲ. ಸೋತಾಗ ಬೇರೆಯವರನ್ನು ದೂಷಿಸುವುದಿಲ್ಲ. ನಾನು ಪ್ರಯತ್ನ ಮುಂದುವರಿಸುತ್ತಿದ್ದೇನೆ. ಕಲ್ಲಿಗೆ ಏಟು ಬಿದ್ದು ಶಿಲೆ ಆಗಬೇಕು ಎಂಬುದು ನನ್ನ ಬಯಕೆ. ಒಮ್ಮೆಯಾದರೂ ಶಿಲೆಯಾಗಬೇಕು’ ಎಂದರು ಅವರು.

ಇದನ್ನೂ ಓದಿ: ಈ ರೀತಿ ಮಾಡೋಕೂ ಧೈರ್ಯ ಬೇಕು; ಕಿರಣ್ ರಾಜ್ ಏನು ಮಾಡಿದ್ರು ನೋಡಿ

‘ಸೆಲ್ಫಿ ಸರೋಜಾ’ ಹಾಡಿನಲ್ಲಿ ಕಿರಣ್ ರಾಜ್, ಕೃತಿ ವರ್ಮ ಜೊತೆ ಭೂಷಣ್ ಕೂಡ ಹೆಜ್ಜೆ ಹಾಕಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ ಅನುಭವ ಅವರಿಗೆ ಇದೆ. ಈ ಹಾಡು ಉತ್ತಮ ಪಾರ್ಟಿ ಸಾಂಗ್ ಆಗಲಿದೆ ಎಂದು ತಂಡ ಅಭಿಪ್ರಾಯಪಟ್ಟಿದೆ.

ಈ ಸಿನಿಮಾದ ಗೀತೆಗೆ ಮಮತಾ ಶರ್ಮಾ ಮತ್ತು ಸಿಂಹ ಧ್ವನಿ ನೀಡಿದ್ದು, ವಿನೋದ್ ಯಜಮನ್ಯ ಸಂಗೀತ ಹಾಗೂ ನಾಗಾರ್ಜುನ್ ಶರ್ಮಾ ಸಾಹಿತ್ಯ ಒದಗಿಸಿದ್ದಾರೆ. ಗುರುತೇಜ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಭಾರತಿ ಸತ್ಯನಾರಾಯಣ್ ನಿರ್ಮಾಪಕರಾಗಿದ್ದಾರೆ. ಕಿರಣ್ ರಾಜ್, ಹೃತಿಕಾ ಶ್ರೀನಿವಾಸ್ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಈ ಚಿತ್ರದ ಹಾಡಿಗೆ ಭೂಷಣ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಡಿಸೆಂಬರ್ 18ಕ್ಕೆ ಸಿನಿಮಾ ತೆರೆಗೆ ಬರುತ್ತಿದ್ದು, ಏಕಾಂತ್ ಮೀಡಿಯಾ ಪ್ರೆಸೆಂಟೆ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:23 am, Wed, 18 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
ಫಿಲಿಪೈನ್ಸ್ ಭೇಟಿ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
‘ಶಂಕರಾಭರಣ’ ಬಸ್ ಸಿಕ್ಕ ಬಳಿಕ ಶೈನ್ ಶೆಟ್ಟಿ ಬದುಕಿನಲ್ಲಿ ಚಮತ್ಕಾರ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಯಲ್ಲಮ್ಮ ದೇಗುಲದ ಗೋಡೆ ಮೇಲೆ ಅಶ್ಲೀಲ ಚಿಹ್ನೆ ಬಿಡಿಸಿ ವಿಕೃತಿ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಶಿವಣ್ಣನ ಜೊತೆ ಶಬರಿಮಲೆಗೆ ಹೋದ ಘಟನೆ ನೆನಪಿಸಿಕೊಂಡ ಪ್ರೇಮ್ ಪುತ್ರಿ ಅಮೃತಾ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!
ದೇವಸ್ಥಾನದೊಳಗೆ ಹೋಗದಂತೆ ನಿಖಿಲ್​​ಗೆ​​ ಅಡ್ಡಿ: ಕ್ಷಮೆಯಾಚಿಸಿದ ಕೈ ಮುಖಂಡ!