AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್ 2: ಯಶ್ ಮತ್ತೊಂದು ಲುಕ್ ರಿವೀಲ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ಕೆಜಿಎಫ್ 2 ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗ್ಲೇ ಚಿತ್ರತಂಡ ಕೂಡ ಅಕ್ಟೋಬರ್ 23 ರಂದು ಕೆಜಿಎಫ್ 2 ರಿಲೀಸ್ ಮಾಡೋದಾಗಿ ಹೇಳಿಕೊಂಡಿದೆ. ಆದ್ರೆ, ಕೊರೊನಾ ಕೆಜಿಎಫ್ 2 ಚಿತ್ರತಂಡ ನಿಗದಿಪಡಿಸಿದ ದಿನದಂದೇ ಸಿನಿಮಾ ಬಿಡುಗಡೆ ಮಾಡೋಕೆ ಬಿಡುತ್ತಾ? ಅನ್ನೋ ಪ್ರಶ್ನೆನೂ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದೇ ಗ್ಯಾಪ್​ನಲ್ಲಿ ಹಿಂದೆಂದೂ ನೋಡಿರದ ಕೆಜಿಎಫ್ 2 ಚಿತ್ರದ ಹೊಚ್ಚ ಹೊಸ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಕೊರೊನಾ ಮಹಾಮಾರಿಯಿಂದ ಇಡೀ ಸ್ಯಾಂಡಲ್​ವುಡ್ […]

ಕೆಜಿಎಫ್ 2: ಯಶ್ ಮತ್ತೊಂದು ಲುಕ್ ರಿವೀಲ್
ಸಾಧು ಶ್ರೀನಾಥ್​
| Edited By: |

Updated on:Jul 22, 2020 | 7:54 PM

Share

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ಕೆಜಿಎಫ್ 2 ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗ್ಲೇ ಚಿತ್ರತಂಡ ಕೂಡ ಅಕ್ಟೋಬರ್ 23 ರಂದು ಕೆಜಿಎಫ್ 2 ರಿಲೀಸ್ ಮಾಡೋದಾಗಿ ಹೇಳಿಕೊಂಡಿದೆ. ಆದ್ರೆ, ಕೊರೊನಾ ಕೆಜಿಎಫ್ 2 ಚಿತ್ರತಂಡ ನಿಗದಿಪಡಿಸಿದ ದಿನದಂದೇ ಸಿನಿಮಾ ಬಿಡುಗಡೆ ಮಾಡೋಕೆ ಬಿಡುತ್ತಾ? ಅನ್ನೋ ಪ್ರಶ್ನೆನೂ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದೇ ಗ್ಯಾಪ್​ನಲ್ಲಿ ಹಿಂದೆಂದೂ ನೋಡಿರದ ಕೆಜಿಎಫ್ 2 ಚಿತ್ರದ ಹೊಚ್ಚ ಹೊಸ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಕೊರೊನಾ ಮಹಾಮಾರಿಯಿಂದ ಇಡೀ ಸ್ಯಾಂಡಲ್​ವುಡ್ ಸೈಲೆಂಟ್ ಆಗಿದೆ. ಒಂದೆರಡು ಚಿತ್ರತಂಡ ಬಿಟ್ರೆ, ಮತ್ಯಾರೂ ಚಿತ್ರೀಕರಣ ಶುರುಮಾಡಿಲ್ಲ. ಈ ಗ್ಯಾಪ್​ನಲ್ಲೇ ಕೆಜಿಎಫ್ 2 ಸಿನಿಮಾ ಸ್ಟೀಲ್ ಹೊರಬಿದ್ದಿರೋದು ಸಿನಿಮಾ ಪ್ರೇಮಿಗಳಲ್ಲಿ ಹೊಸ ಹುರುಪು ಮೂಡಿದೆ. ಕೆಜಿಎಫ್ 2 ಬಿಡುಗಡೆಗೆ ಕಾದುಕೂತಿರೋ ಯಶ್ ಫ್ಯಾನ್ಸ್​ಗೆ ಸಿನಿಮಾ ಬಿಡುಗಡೆಯ ಮುನ್ಸೂಚನೆ ಸಿಕ್ಕಂತಾಗಿದೆ.

ಅದೇ ಗಡ್ಡ ಬಿಟ್ಟು.. 80 ದಶಕದ ಕಾಸ್ಟ್ಯೂಮ್​ನಲ್ಲಿ ಯಶ್ ಯಾರೊಂದಿಗೋ ಚರ್ಚಿಸುತ್ತಿರೋ ಫೋಟೋ ಇದು. ಕಳೆದ ಕೆಲವು ದಿನಗಳಿಂದ ಕೆಜಿಎಫ್ 2 ಬಗ್ಗೆ ಮಾಹಿತಿನೇ ಇರದೆ ಹೆಣಗಾಡಿದ್ದ ಅಭಿಮಾನಿಗಳು ಈ ಪೋಟೋದಿಂದ ಕೊಂಚ ಸಮಾಧಾನಗೊಂಡಿದ್ದಾರೆ.

ಇನ್ನು ಕೆಜಿಎಫ್ 1ಗಿಂತ ಎರಡನೇ ಚಾಪ್ಟರ್ ಐದು ಪಟ್ಟು ಅದ್ಧೂರಿಯಾಗಿರುತ್ತೆ. ಐದು ಪಟ್ಟು ಆ್ಯಕ್ಷನ್ ಇರುತ್ತೆ ಅಂತ ಚಿತ್ರತಂಡನೇ ಹೇಳಿದೆ. ಇದ್ರೊಂದಿಗೆ ಬಾಲಿವುಡ್ ದಿಗ್ಗಜರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಕೂಡ ನಟಿಸಿದ್ದಾರೆ. ಹೀಗಾಗಿ ಕೆಜಿಎಫ್ 2 ಬಿಡುಗಡೆಗೆ ಕೇವಲ ಕನ್ನಡದಲ್ಲಷ್ಟೇ ಅಲ್ಲ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಪ್ರೇಕ್ಷಕರೂ ಕಾತುರದಿಂದ ಕಾಯ್ತಿದ್ದಾರೆ.

Published On - 5:29 pm, Tue, 21 July 20

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ