ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಕೆಜಿಎಫ್ 2 ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗ್ಲೇ ಚಿತ್ರತಂಡ ಕೂಡ ಅಕ್ಟೋಬರ್ 23 ರಂದು ಕೆಜಿಎಫ್ 2 ರಿಲೀಸ್ ಮಾಡೋದಾಗಿ ಹೇಳಿಕೊಂಡಿದೆ. ಆದ್ರೆ, ಕೊರೊನಾ ಕೆಜಿಎಫ್ 2 ಚಿತ್ರತಂಡ ನಿಗದಿಪಡಿಸಿದ ದಿನದಂದೇ ಸಿನಿಮಾ ಬಿಡುಗಡೆ ಮಾಡೋಕೆ ಬಿಡುತ್ತಾ? ಅನ್ನೋ ಪ್ರಶ್ನೆನೂ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದೇ ಗ್ಯಾಪ್ನಲ್ಲಿ ಹಿಂದೆಂದೂ ನೋಡಿರದ ಕೆಜಿಎಫ್ 2 ಚಿತ್ರದ ಹೊಚ್ಚ ಹೊಸ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಕೊರೊನಾ ಮಹಾಮಾರಿಯಿಂದ ಇಡೀ ಸ್ಯಾಂಡಲ್ವುಡ್ ಸೈಲೆಂಟ್ ಆಗಿದೆ. ಒಂದೆರಡು ಚಿತ್ರತಂಡ ಬಿಟ್ರೆ, ಮತ್ಯಾರೂ ಚಿತ್ರೀಕರಣ ಶುರುಮಾಡಿಲ್ಲ. ಈ ಗ್ಯಾಪ್ನಲ್ಲೇ ಕೆಜಿಎಫ್ 2 ಸಿನಿಮಾ ಸ್ಟೀಲ್ ಹೊರಬಿದ್ದಿರೋದು ಸಿನಿಮಾ ಪ್ರೇಮಿಗಳಲ್ಲಿ ಹೊಸ ಹುರುಪು ಮೂಡಿದೆ. ಕೆಜಿಎಫ್ 2 ಬಿಡುಗಡೆಗೆ ಕಾದುಕೂತಿರೋ ಯಶ್ ಫ್ಯಾನ್ಸ್ಗೆ ಸಿನಿಮಾ ಬಿಡುಗಡೆಯ ಮುನ್ಸೂಚನೆ ಸಿಕ್ಕಂತಾಗಿದೆ.
ಅದೇ ಗಡ್ಡ ಬಿಟ್ಟು.. 80 ದಶಕದ ಕಾಸ್ಟ್ಯೂಮ್ನಲ್ಲಿ ಯಶ್ ಯಾರೊಂದಿಗೋ ಚರ್ಚಿಸುತ್ತಿರೋ ಫೋಟೋ ಇದು. ಕಳೆದ ಕೆಲವು ದಿನಗಳಿಂದ ಕೆಜಿಎಫ್ 2 ಬಗ್ಗೆ ಮಾಹಿತಿನೇ ಇರದೆ ಹೆಣಗಾಡಿದ್ದ ಅಭಿಮಾನಿಗಳು ಈ ಪೋಟೋದಿಂದ ಕೊಂಚ ಸಮಾಧಾನಗೊಂಡಿದ್ದಾರೆ.
ಇನ್ನು ಕೆಜಿಎಫ್ 1ಗಿಂತ ಎರಡನೇ ಚಾಪ್ಟರ್ ಐದು ಪಟ್ಟು ಅದ್ಧೂರಿಯಾಗಿರುತ್ತೆ. ಐದು ಪಟ್ಟು ಆ್ಯಕ್ಷನ್ ಇರುತ್ತೆ ಅಂತ ಚಿತ್ರತಂಡನೇ ಹೇಳಿದೆ. ಇದ್ರೊಂದಿಗೆ ಬಾಲಿವುಡ್ ದಿಗ್ಗಜರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಕೂಡ ನಟಿಸಿದ್ದಾರೆ. ಹೀಗಾಗಿ ಕೆಜಿಎಫ್ 2 ಬಿಡುಗಡೆಗೆ ಕೇವಲ ಕನ್ನಡದಲ್ಲಷ್ಟೇ ಅಲ್ಲ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಪ್ರೇಕ್ಷಕರೂ ಕಾತುರದಿಂದ ಕಾಯ್ತಿದ್ದಾರೆ.
Published On - 5:29 pm, Tue, 21 July 20