‘ಧುರಂಧರ್ 2’ ಪೋಸ್ಟರ್​ಗೆ ಯಶ್ ಸಿನಿಮಾ ಸ್ಫೂರ್ತಿ? ಟ್ರೆಂಡ್ ಸೆಟ್ಟರ್ ಆದ ರಾಕಿಭಾಯ್

‘ಧುರಂಧರ್ 2’ ಚಿತ್ರದ ಹೊಸ ಪೋಸ್ಟರ್ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಸ್ಫೂರ್ತಿಯಿಂದ ಸಿದ್ಧವಾಗಿದೆ ಎಂಬ ಮಾತು ಕೇಳಿ ಬಂದಿದೆ. ಇದರಿಂದ ಯಶ್ ಟ್ರೆಂಡ್ ಸೆಟ್ಟರ್ ಆಗಿದ್ದು, ‘ಧುರಂಧರ್ 2’ ಟ್ರೆಂಡ್ ಫಾಲೋವರ್ ಆಗಿದೆ ಎಂಬ ಚರ್ಚೆ ಶುರುವಾಗಿದೆ. ಕೆಜಿಎಫ್‌ನ ಕೆಂಪು ಥೀಮ್ ಅನ್ನು ಧುರಂಧರ್ 2 ಸಹ ಅಳವಡಿಸಿಕೊಂಡಿದೆ.

‘ಧುರಂಧರ್ 2’ ಪೋಸ್ಟರ್​ಗೆ ಯಶ್ ಸಿನಿಮಾ ಸ್ಫೂರ್ತಿ? ಟ್ರೆಂಡ್ ಸೆಟ್ಟರ್ ಆದ ರಾಕಿಭಾಯ್
ಯಶ್-ರಣವೀರ್

Updated on: Feb 04, 2026 | 7:03 AM

ಈಗ ಎಲ್ಲೆಲ್ಲೂ ‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ‘ಟಾಕ್ಸಿಕ್’ ಸಿನಿಮಾ (Toxic Movie) ಪರ ವಹಿಸಿಕೊಂಡು ಬಂದರೆ ಇನ್ನೂ ಕೆಲವರು ‘ಧರುಂಧರ್ 2’ ಚಿತ್ರದ ಪರವಾಗಿ ಮಾತನಾಡುತ್ತಿದ್ದಾರೆ. ಹೀಗಿರುವಾಗಲೇ ‘ಧುರಂಧರ್ 2’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಚಿತ್ರದಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

‘ಕೆಜಿಎಫ್’ ಹಾಗೂ ‘ಕೆಜಿಎಫ್ ಚಾಪ್ಟರ್ 1’ ಚಿತ್ರದಲ್ಲಿ ರಕ್ತದ ಹೊಳೆ ಹರಿದಿದೆ. ಇದನ್ನು ಸೂಚ್ಯವಾಗಿ ತೋರಿಸಲು ಕೆಜಿಎಫ್ ಪೋಸ್ಟರ್​​​ನಲ್ಲಿ ರಕ್ತದ ಬಣ್ಣದ ಬ್ಯಾಕ್​ಗ್ರೌಂಡ್ ನೀಡಲಾಗಿತ್ತು. ಸಿನಿಮಾದ ಕಥೆಗೆ ಪೋಸ್ಟರ್ ಸರಿಯಾಗಿ ಹೊಂದಿಕೆ ಆಗಿತ್ತು. ಈಗ ‘ಧುರಂಧರ್ 2’ ಕೂಡ ಇದನ್ನು ಫಾಲೋ ಮಾಡಿದೆ. ‘ಧುಂಧರ್ 2’ ಚಿತ್ರದಲ್ಲಿ ರಿವೇಂಜ್ ಇರುವುದರಿಂದ, ಈ ಪೋಸ್ಟರ್​​​ ಕೂಡ ಕೆಂಪು ಬಣ್ಣದಲ್ಲೇ ಬಂದಿದೆ. ಇದು ಚರ್ಚೆಯ ಕೇಂದ್ರಬಿಂದು ಆಗಿದೆ. ಯಶ್ ಅವರನ್ನು ಅನೇಕರು ಟ್ರೆಂಡ್ ಸೆಟ್ಟರ್ ಎಂದು ಕರೆದಿದ್ದಾರೆ. ‘ಧುರಂಧರ್ 2’ ಚಿತ್ರವನ್ನು ಟ್ರೆಂಡ್ ಫಾಲೋವರ್ ಎಂದು ಕರೆಯಲಾಗಿದೆ.

ಸಿನಿಮಾ ವಿಷಯದಲ್ಲಿ ಯಶ್ ಅವರು ತಮ್ಮನ್ನು ತಾವು ಟ್ರೆಂಡ್ ಸೆಟ್ಟರ್ ಆಗಿ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ‘ಕೆಜಿಎಫ್’ ರೀತಿಯ ಗ್ಯಾಂಗ್​​ಸ್ಟರ್ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿರಲಿಲ್ಲ. ಈ ಕಾರಣದಿಂದಲೇ ಆ ಸಿನಿಮಾ ಸೂಪರ್ ಹಿಟ್ ಆಯಿತು. ‘ಕೆಜಿಎಫ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ‘ಕೆಜಿಎಫ್’ ಶೈಲಿಯನ್ನು ಅನುಸರಿಸಿ ಅನೇಕ ಸಿನಿಮಾಗಳು ಬಂದವು. ‘ಕೆಜಿಎಫ್’ ಚಿತ್ರದ ಕಥೆಯ ಪ್ಯಾಟರ್ನ್​​ನ ‘ಪುಷ್ಪ’ದವರೂ ಫಾಲೋ ಮಾಡಿದ್ದಾರೆ ಎಂಬ ಮಾತು ಕೂಡ ಇದೆ.

ಇದನ್ನೂ ಓದಿ: ‘ಧುರಂಧರ್ 2’ ಟೀಸರ್ ನೋಡಿದವರಿಗೆ ಭಾರೀ ನಿರಾಸೆ; ರಿಲೀಸ್ ದಿನಾಂಕವೂ ರಿವೀಲ್

‘ಧುರಂಧರ್ 2’ ಚಿತ್ರದ ಟೀಸರ್ ಫೆಬ್ರವರಿ 3ರಂದು ರಿಲೀಸ್ ಆಯಿತು. ಈ ಟೀಸರ್ ಅಷ್ಟಾಗಿ ಗಮನ ಸೆಳೆದಿಲ್ಲ. ‘ಧುರಂಧರ್’ ಸಿನಿಮಾ ಕೊನೆಯಲ್ಲಿ ಬರೋ ಎಂಡ್ ಕಾರ್ಡ್​​ ಅನ್ನೇ ಟೀಸರ್ ಮಾಡಿ ಬಿಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Wed, 4 February 26

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us