Kichcha 46: ಸುದೀಪ್ ಮನೆಯಲ್ಲಿರೋ ಹೋಮ್ ಥಿಯೇಟರ್ ಹೆಬ್ಬಾಗಿಲು ಹೇಗಿದೆ ನೋಡಿ

ಕಿಚ್ಚ ಸುದೀಪ್ ಅವರು ಇತ್ತೀಗೆ ‘Kichcha46’ ಘೋಷಣೆ ಮಾಡಿದರು. ಈ ಚಿತ್ರವನ್ನು ಕಲೈಪುಲಿ ಎಸ್​. ಧಾನು ಅವರು ಬಂಡವಾಳ ಹೂಡಲಿದ್ದಾರೆ. ಸುದೀಪ್ ಮನೆಯಲ್ಲಿಇದರ ಕೆಲಸ ನಡೆಯುತ್ತಿದೆ.

Kichcha 46: ಸುದೀಪ್ ಮನೆಯಲ್ಲಿರೋ ಹೋಮ್ ಥಿಯೇಟರ್ ಹೆಬ್ಬಾಗಿಲು ಹೇಗಿದೆ ನೋಡಿ
ಸುದೀಪ್

Updated on: Jun 07, 2023 | 11:11 AM

‘ವಿಕ್ರಾಂತ್ ರೋಣ’ ಚಿತ್ರ ತೆರೆಕಂಡ ನಂತರ ಸುದೀಪ್ (Sudeep) ಅವರು ದೀರ್ಘ ಗ್ಯಾಪ್ ತೆಗೆದುಕೊಂಡರು. ಈಗ ಸುದೀಪ್ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ಸುದೀಪ್ ನಟನೆಯ ‘Kichcha46’ ಚಿತ್ರದ ಬಗ್ಗೆ ಒಂದಾದರ ಮೇಲೆ ಒಂದರಂತೆ ಅಪ್​​ಡೇಟ್ ಸಿಗುತ್ತಲೇ ಇದೆ. ಸದ್ಯ ಟೀಸರ್ ಲಾಂಚ್ ಮಾಡಲು ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇದರ ಕೆಲಸ ಸುದೀಪ್​ ಮನೆಯಲ್ಲೇ ನಡೆಯುತ್ತಿದೆ ಎನ್ನಲಾಗಿದೆ. ಈಗ ಸುದೀಪ್ ಹೋಮ್ ಥಿಯೇಟರ್ ಬಾಗಿಲ ಫೋಟೋ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರು ಇತ್ತೀಗೆ ‘Kichcha46’ ಘೋಷಣೆ ಮಾಡಿದರು. ಈ ಚಿತ್ರವನ್ನು ಕಲೈಪುಲಿ ಎಸ್​. ಧಾನು ಅವರು ಬಂಡವಾಳ ಹೂಡಲಿದ್ದಾರೆ. ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಅವರ ಮಾಲೀಕತ್ವದ ‘ವಿ ಕ್ರಿಯೇಷನ್ಸ್​’ ಸಂಸ್ಥೆಗೆ ಇದೆ.  ಈ ಚಿತ್ರದ ಟೈಟಲ್ ಇನ್ನು ಕೆಲವೇ ದಿನಗಳಲ್ಲಿ ಅನೌನ್ಸ್ ಆಗೋ ಸಾಧ್ಯತೆ ಇದೆ. ಸುದೀಪ್ ಮನೆಯಲ್ಲಿ ಕೆಲಸಗಳು ನಡೆಯುತ್ತಿವೆ.

ವೀರಕಪುತ್ರ ಶ್ರೀನಿವಾಸ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸುದೀಪ್ ಹೋಮ್​ ಥಿಯೇಟರ್​ ಬಾಗಿಲ ಫೋಟೋ ಅನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ‘ನಿನ್ನೆ ರಾತ್ರಿ ಚಿಕ್ಕೆಜಮಾನರನ್ನು ಭೇಟಿ ಆದೆ. ಮನೆಯಲ್ಲಿ  #kichcha46 ಸಿನಿಮಾಗಾಗಿ ಹತ್ತಾರು ಜನ ಒಂದು ತಂಡವಾಗಿ ಕೆಲಸ ಮಾಡುತ್ತಿರುವುದನ್ನು ನೋಡಿದೆ. ಆ ದೃಶ್ಯ ಕಂಡ ಮೇಲೆ ಮುಂದಿನವಾರ ಘೋಷಣೆ ಆಗುತ್ತಿರುವ ಆ ಸಿನೆಮಾ ಬಗ್ಗೆ ನಿರೀಕ್ಷೆಗಳು ನೂರ್ಮಡಿಯಾದವು. ಅಂದ ಹಾಗೆ ಇದು ಅವರ ಹೋಮ್ ಥೀಯೇಟರ್​​ನ ಬಾಗಿಲು, ಹೇಗಿದೆ ಸಿಂಹದ್ವಾರ’ ಎಂದು ಅವರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: 2018 Movie: ‘ಈ ಮಲಯಾಳಂ ಸಿನಿಮಾ ಕನ್ನಡಿಗರ ಹೃದಯ ಗೆದ್ದಿದೆ’: ‘2018’ ಚಿತ್ರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ

ಇತ್ತೀಚೆಗೆ ‘ಕಿಚ್ಚ 46’ ಚಿತ್ರಕ್ಕೆ ನಾಯಕಿ ಯಾರು ಅನ್ನೋ ಬಗ್ಗೆ ಸುದ್ದಿ ಹರಿದಾಡಿತ್ತು. ಪಂಜಾಬಿ ನಾಯಕಿ ಸಿಮ್ರನ್ ಕೌರ್ ಅವರು ಕಿಚ್ಚನಿಗೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನವು ಸುದ್ದಿ ಹರಿದಾಡಿತ್ತು. ಪಂಜಾಬಿ, ಹಿಂದಿ ಚಿತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:40 am, Wed, 7 June 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us