ರಾಜಮೌಳಿಯ RRR ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟನೆ? ಪಾತ್ರ ಯಾವುದು?

|

Updated on: Jan 18, 2020 | 7:14 AM

ಸ್ಯಾಂಡಲ್​ವುಡ್​​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯಕ್ಕಂತೂ ಕನ್ನಡ ಮಾತ್ರವಲ್ಲದೇ ಹಲವು ಪರ ಭಾಷಾ ಸಿನಿಮಾಗಳಲ್ಲಿ ಬ್ಯೂಸಿಯಾಗ್ತಿದ್ದಾರೆ. ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿಯೂ ಸುದೀಪ್​ಗಾಗಿ ವಿಶೇಷ ಪಾತ್ರಗಳನ್ನ ಬರೆದು ನಿರ್ದೇಶಕರು ಕಾಲ್ ಶೀಟ್ ಪಡೆಯುತ್ತಾರೆ. ಆದ್ರೀಗ ಹಿಂದೆ ರಾಜಮೌಳಿ ಸಿನಿಮಾದಲ್ಲಿ ಅಭಿನಯಿಸಿದ್ದ ಸುದೀಪ್ ಪಾತ್ರದ ಬಗ್ಗೆ ಅವರ ಅಭಿಮಾನಿಗಳು ಚರ್ಚೆ ಮಾಡಿದ್ರು. ಈಗ ಮತ್ತೊಮ್ಮೆ ಅದೇ ವಿಷಯ ಚರ್ಚೆಗೆ ಬಂದಿದೆ. ಸುದೀಪ್ ಅಭಿಮಾನಿಗಳನ್ನ ಪಿಧಾ ಮಾಡೋಕೆ ಮೌಳಿ ಪ್ಲಾನ್ : ಬಾಹುಬಲಿಯ ಮಾಂತ್ರಿಕ ರಾಜಮೌಳಿ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳೋದು […]

ರಾಜಮೌಳಿಯ RRR ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟನೆ? ಪಾತ್ರ ಯಾವುದು?
Follow us on

ಸ್ಯಾಂಡಲ್​ವುಡ್​​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯಕ್ಕಂತೂ ಕನ್ನಡ ಮಾತ್ರವಲ್ಲದೇ ಹಲವು ಪರ ಭಾಷಾ ಸಿನಿಮಾಗಳಲ್ಲಿ ಬ್ಯೂಸಿಯಾಗ್ತಿದ್ದಾರೆ. ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿಯೂ ಸುದೀಪ್​ಗಾಗಿ ವಿಶೇಷ ಪಾತ್ರಗಳನ್ನ ಬರೆದು ನಿರ್ದೇಶಕರು ಕಾಲ್ ಶೀಟ್ ಪಡೆಯುತ್ತಾರೆ. ಆದ್ರೀಗ ಹಿಂದೆ ರಾಜಮೌಳಿ ಸಿನಿಮಾದಲ್ಲಿ ಅಭಿನಯಿಸಿದ್ದ ಸುದೀಪ್ ಪಾತ್ರದ ಬಗ್ಗೆ ಅವರ ಅಭಿಮಾನಿಗಳು ಚರ್ಚೆ ಮಾಡಿದ್ರು. ಈಗ ಮತ್ತೊಮ್ಮೆ ಅದೇ ವಿಷಯ ಚರ್ಚೆಗೆ ಬಂದಿದೆ.

ಸುದೀಪ್ ಅಭಿಮಾನಿಗಳನ್ನ ಪಿಧಾ ಮಾಡೋಕೆ ಮೌಳಿ ಪ್ಲಾನ್ :
ಬಾಹುಬಲಿಯ ಮಾಂತ್ರಿಕ ರಾಜಮೌಳಿ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳೋದು ಒಂದು ಕಡೆ ಚಾಲೆಂಜ್ ಆದ್ರೆ ಇನ್ನೊಂದು ಕಡೆ ಸಿನಿಮಾದಲ್ಲಿ ಸ್ಟಾರ್ ನಟರ ಪಾತ್ರ ಹೇಗಿರುತ್ತೆ ಅನ್ನೋದ ಕೂಡ ಸಾಕಷ್ಟು ಭಾರಿ ಚರ್ಚೆಗೆ ಕಾರಣವಾಗಿರುತ್ತೆ. ಅಂದ ಹಾಗೆ ಈಗ ರಾಜಮೌಳಿ ಸಿನಿಮಾ ಹಾಗು ಸುದೀಪ್ ಪಾತ್ರದ ಬಗ್ಗೆ ಮತ್ತೊಂದು ಹೊಸ ಚರ್ಚೆ ಶುರುವಾಗಿದೆ. ಆದ್ರೆ ಈ ಬಾರಿ ಸುದೀಪ್ ಅಭಿಮಾನಿಗಳನ್ನ ಪಿಧಾ ಮಾಡೋಕೆ ಮೌಳಿ ಪ್ಲಾನ್ ಮಾಡಿದ್ದಾರೆ ಅನ್ನೋ ಲೇಟೆಸ್ಟ್ ಸಮಾಚಾರ ಹೊರ ಬಿದ್ದಿದೆ.

ಪೊಲೀಸ್ ಆಫೀಸರ್ ಆಗಿ ಸುದೀಪ್ ಕಮಾಲ್?
ಕಿಚ್ಚ ಸುದೀಪ್, ರಾಜಮೌಳಿಯ ಈಗ ಸಿನಿಮಾದಿಂದಲೂ ಅಭಿನಯಿಸುತ್ತಾ ಬಂದಿದ್ದಾರೆ. ಆದ್ರೆ ಐತಿಹಾಸಿಕ ಸಿನಿಮಾ ಬಾಹುಬಲಿಯಲ್ಲಿ ಅಭಿನಯಿಸಿದಾಗ ಮಾತ್ರ ಸುದೀಪ್ ಅವರ ಅಭಿಮಾನಿಗಳಿಗೆ ರಾಜಮೌಳಿ ನಿರಾಶೆ ಮಾಡಿದ್ರು. ಬಾಹುಬಲಿ ಸಿನಿಮಾದಲ್ಲಿ ಸುದೀಪ್​ ಪಾತ್ರದ ಅವಧಿ ಕಡಿಮೆ ಇತ್ತು. ಹೆಚ್ಚು ಸಮಯ ಸುದೀಪ್ ಸ್ಕ್ರೀನ್ ಮೇಲೆ ರಂಜಿಸಲಿಲ್ಲ. ಹೀಗಾಗಿ ರಾಜಮೌಳಿ ಆಕ್ಷನ್ ಕಟ್ ಹೇಳಿರೋ ಜ್ಯೂ.ಎನ್​ಟಿಆರ್ ಹಾಗು ರಾಮ್ ಚರಣ್ ತೇಜ ನಟಿಸಿರೋ RRR ಸಿನಿಮಾದಲ್ಲಿಯೂ ಸುದೀಪ್ ಅಭಿನಯಿಸ್ತಿದ್ದಾರೆ.

ವಿಶೇಷ ಅಂದ್ರೆ ಈ ಬಾರಿ ಸುದೀಪ್​ಗಾಗಿ ರಾಜಮೌಳಿ ಒಂದು ವಿಶೇಷ ಪಾತ್ರದಲ್ಲಿ ಪರಿಚಯಿಸೋಕೆ ಮುಂದಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸುದೀಪ್ ಪೊಲೀಸ್ ಆಫೀಸರ್ ಆಗಿ ಕಮಾಲ್ ಮಾಡಲಿದ್ದಾರಂತೆ. ಈ ಸುದ್ದಿ ಕೇಳಿರೋ ಅಭಿನಯ ಚಕ್ರವರ್ತಿ ಅಭಿಮಾನಿಗಳು ಸದ್ಯಕ್ಕಂತೂ ಫುಲ್ ಖುಷ್ ಆಗಿದ್ಧಾರೆ. ಇನ್ನು ಆರ್​ಆರ್​ಆರ್ ಸಿನಿಮಾಗಾಗಿ ಕಾದು ಕುಳಿತುಕೊಳ್ಳುವಂತಹ ಕ್ಯೂರಿಯಾಸಿಟಿ ಹೆಚ್ಚು ಮಾಡ್ತಿದೆ ಈ ಸುದ್ದಿ. ಹಾಗಾದ್ರೆ ಆರ್​ಆರ್​ಆರ್​ನಲ್ಲಿ ಸುದೀಪ್ ಹೇಗೆ ಕಮಾಲ್ ಮಾಡ್ತಾರೆ, ಮಾಣಿಕ್ಯನಿಗಾಗಿ ಮೌಳಿ ಕೆತ್ತಿರೋ ಪಾತ್ರ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.