ಬೆಂಗಳೂರು: ಅಕಾಲಿಕ ಮೃತ್ಯವಿಗೀಡಾದ ಸ್ಯಾಂಡಲ್ವುಡ್ ನಾಯಕ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ಸರ್ಜಾ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇಂದು ನಗರದ KR ರಸ್ತೆಯ ಅಕ್ಷ ಆಸ್ಪತ್ರೆಯಲ್ಲಿ ನಟಿ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಚಿಕ್ಕಪ್ಪನ ತೋಳಿನಲ್ಲಿ ಕಂದಾ ನಾನು..
ಇನ್ನು ಇತ್ತ ಸರ್ಜಾ ಕುಟುಂಬದಲ್ಲಿ ಸಂತೋಷ ಸಂಭ್ರಮ ರಾರಾಜಿಸುತ್ತಿದೆ. ಅಣ್ಣ ಚಿರಂಜೀವಿ ಸರ್ಜಾ.. ಜೂನಿಯರ್ ಚಿರು ರೂಪದಲ್ಲಿ ಬಂದೇಬರುತ್ತಾನೆ ಎಂದು ಇಡೀ ಸರ್ಜಾ ಕುಟುಂಬ ಅಪಾರ ನಿರೀಕ್ಷೆಯೊಂದಿಗೆ ಕಾದುಕುಳಿತಿತ್ತು.
ಧ್ರುವ ಸರ್ಜಾ ಹಾಗು ಪತ್ನಿ ಪ್ರೇರಣಾ ಹಾಗೂ ಚಿರು ತಾಯಿ ಅಮ್ಮಾಜಿ ಮೂರು ದಿನದಿಂದ ಮಗುವಿನ ನಿರೀಕ್ಷೆಯಲ್ಲಿ ಆಸ್ಪತ್ರೆಯಲ್ಲೇ ಇದ್ದರು. ಧ್ರುವ ಸರ್ಜಾ ಅಂತೂ ಅಣ್ಣನನ್ನೇ ಎತ್ತಿ ಮುದ್ದಾಡಿದಂತೆ ಮಗುವಿನ ಲಾಲನೆಯಲ್ಲಿದ್ದಾರೆ. ಆಸ್ಪತ್ರೆ ಮುಂದೆ ಜಮಾಯಿಸಿರುವ ಚಿರು ಫ್ಯಾನ್ಸ್ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಇಂದು ಚಿರಂಜೀವಿ ಸರ್ಜಾ ಮತ್ತು ಮೇಘನಾ ಜೋಡಿಯ ಎಂಗೇಜ್ಮೆಂಟ್ ಡೇ ಕೂಡ ಆಗಿದೆ. 2018ರ ಮೇ 2ರಂದು ಚಿರಂಜೀವಿ ಸರ್ಜಾ ಮತ್ತು ಮೇಘನಾ ವಿವಾಹ ನಡೆದಿತ್ತು. 39 ವರ್ಷದ ಚಿರಂಜೀವಿ ಸರ್ಜಾ ಜೂನ್ 7ರಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು.
ಇದನ್ನೂ ಓದಿ: ಈ ಚಿತ್ರಗಳು ಕೇವಲ ಚಿರು ಅಭಿಮಾನಿಗಳಿಗೆ ಮಾತ್ರ.. ಮಗುವಿನ ಹೆಸರು ಜೂ. ಚಿರು ಅಂತೆ! Photos ಇವೆ
Published On - 11:12 am, Thu, 22 October 20