ನಟ ಆಹುತಿ ರಾಜಶೇಖರ್​ಗೆ ಕೊರೊನಾ ಸೋಂಕು, ತಾರಾ ಪತ್ನಿಯೂ ಗಂಭೀರ

ಹೈದರಾಬಾದ್: ಆಹುತಿ, ಅಂಕುಶಂ ಅಂತಹ ಸಿನಿಮಾಗಳಲ್ಲಿ ಅತ್ಯದ್ಭುತವಾಗಿ ನಟಿಸಿದ ಡಾ. ವಿ. ರಾಜಶೇಖರ್​ಗೆ ಇತ್ತೀಚೆಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ. 54 ವರ್ಷದ ಡಾ. ರಾಜಶೇಖರ್ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆತಂಕದ ವಿಚಾರವೆಂದರೆ ಅವರ ತಾರಾ ಪತ್ನಿ ಜೀವಿತಾಗೂ ಕೊರೊನಾ ತಗುಲಿದೆ. ಅದಕ್ಕೂ ಮುನ್ನ.. ತಾರಾ ದಂಪತಿಯ ಇಬ್ಬರು ಪುತ್ರಿಯರಿಗೂ ಕೊರೊನಾ ಸೋಂಕು ತಗುಲಿ, ಅವರಿಬ್ಬರೂ ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಆದರೆ ರಾಜಶೇಖರ್ ಮತ್ತು ಜೀವಿತಾ ಮಾತ್ರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ ಗಂಭೀರ […]

ನಟ ಆಹುತಿ ರಾಜಶೇಖರ್​ಗೆ ಕೊರೊನಾ ಸೋಂಕು, ತಾರಾ ಪತ್ನಿಯೂ ಗಂಭೀರ
Follow us
ಸಾಧು ಶ್ರೀನಾಥ್​
|

Updated on:Oct 22, 2020 | 6:42 PM

ಹೈದರಾಬಾದ್: ಆಹುತಿ, ಅಂಕುಶಂ ಅಂತಹ ಸಿನಿಮಾಗಳಲ್ಲಿ ಅತ್ಯದ್ಭುತವಾಗಿ ನಟಿಸಿದ ಡಾ. ವಿ. ರಾಜಶೇಖರ್​ಗೆ ಇತ್ತೀಚೆಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ. 54 ವರ್ಷದ ಡಾ. ರಾಜಶೇಖರ್ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆತಂಕದ ವಿಚಾರವೆಂದರೆ ಅವರ ತಾರಾ ಪತ್ನಿ ಜೀವಿತಾಗೂ ಕೊರೊನಾ ತಗುಲಿದೆ.

ಅದಕ್ಕೂ ಮುನ್ನ.. ತಾರಾ ದಂಪತಿಯ ಇಬ್ಬರು ಪುತ್ರಿಯರಿಗೂ ಕೊರೊನಾ ಸೋಂಕು ತಗುಲಿ, ಅವರಿಬ್ಬರೂ ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಆದರೆ ರಾಜಶೇಖರ್ ಮತ್ತು ಜೀವಿತಾ ಮಾತ್ರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ.

ತಮಿಳುನಾಡಿನ ಪೊಲೀಸ್ ಅಧಿಕಾರಿಯ ಪುತ್ರ ಡಾ. ರಾಜಶೇಖರ್ ವರದರಾಜನ್ ಮೂಲತಃ ವೈದ್ಯರಾಗಿದ್ದು, 30 ವರ್ಷಕ್ಕೂ ಹೆಚ್ಚು ಕಾಲದಿಂದ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತಲಂಬ್ರಾಲು, ಶೃತಿಲಯಲು, ಆಹುತಿ, ಅಂಕುಶಂ, ಮಗಾಡು, ಅಲ್ಲರಿ ಪ್ರಿಯುಡು, ಅನ್ನ, ಸೂರ್ಯುಡು, ಶಿವಯ್ಯ, ಮನಸುನ್ನ ಮಾರಾಜು, ಮಾ ನ್ನಯ್ಯ, ಎವಡೈತೆ ನಾಕೇಂಟಿ ಮತ್ತು ಗೋರಿಂಟಾಕು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

Published On - 5:35 pm, Thu, 22 October 20