‘ತ್ರಿವಿಕ್ರಮ’ನ ಸಾಹಸಕ್ಕೆ ಫೈಟ್​ ಮಾಸ್ಟರ್ಸ್​ ಯಾರ್​ ಯಾರ್​ ಗೊತ್ತಾ..?

|

Updated on: Dec 23, 2019 | 12:50 PM

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಸಿನಿಮಾಗಳಲ್ಲಿ ರವಿಚಂದ್ರನ್​ ಪುತ್ರ ವಿಕ್ರಮ್​ ಅಭಿನಯದ ಚೊಚ್ಚಲ ಚಿತ್ರ ತ್ರಿವಿಕ್ರಮ ಕೂಡ ಒಂದು, ಭರದಿಂದ ಚಿತ್ರದ ಚಿತ್ರೀಕರಣ ಸಾಗಿದ್ದು, ಚಿತ್ರ ಹಲವು ವಿಶೇಷತೆಗಳೊಂದಿಗೆ ಸ್ಯಾಂಡಲ್ವುಡ್​ನ ಗಮನ ಸೆಳೇಯುತ್ತಾ ಇದೆ. ಆದ್ರೆ ಇದೀಗ ಇತರ ಚಿತ್ರರಂಗಗಳು ತ್ರಿವಿಕ್ರಮನ ಚಿತ್ರಿಕರಣದತ್ತ ತಿರುಗಿ ನೋಡುವಂತಹ ವಿಶೇಷತೆಯನ್ನ ಚಿತ್ರತಂಡ ಮಾಡ್ತಾ ಇದೆ. ತ್ರಿವಿಕ್ರಮನ ಸಾಹಸಕ್ಕೆ ದಿಗ್ಗಜ ಫೈಟ್​ ಮಾಸ್ಟರ್​ಗಳ ಸಾಥ್​ ತ್ರಿವಿಕ್ರಮ ಚಿತ್ರ ಪಕ್ಕಾ ಆ್ಯಕ್ಷನ್​ ಓರಿಯೆಂಟ್​ ಸಿನಿಮಾ. ಚಿತ್ರದ ಆ್ಯಕ್ಷನ್ ಸೀನ್​ಗಳನ್ನ ಮತ್ತಷ್ಟು ಅದ್ದೂರಿಯಾಗಿ […]

ತ್ರಿವಿಕ್ರಮ’ನ ಸಾಹಸಕ್ಕೆ ಫೈಟ್​ ಮಾಸ್ಟರ್ಸ್​ ಯಾರ್​ ಯಾರ್​ ಗೊತ್ತಾ..?
Follow us on

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಸಿನಿಮಾಗಳಲ್ಲಿ ರವಿಚಂದ್ರನ್​ ಪುತ್ರ ವಿಕ್ರಮ್​ ಅಭಿನಯದ ಚೊಚ್ಚಲ ಚಿತ್ರ ತ್ರಿವಿಕ್ರಮ ಕೂಡ ಒಂದು, ಭರದಿಂದ ಚಿತ್ರದ ಚಿತ್ರೀಕರಣ ಸಾಗಿದ್ದು, ಚಿತ್ರ ಹಲವು ವಿಶೇಷತೆಗಳೊಂದಿಗೆ ಸ್ಯಾಂಡಲ್ವುಡ್​ನ ಗಮನ ಸೆಳೇಯುತ್ತಾ ಇದೆ. ಆದ್ರೆ ಇದೀಗ ಇತರ ಚಿತ್ರರಂಗಗಳು ತ್ರಿವಿಕ್ರಮನ ಚಿತ್ರಿಕರಣದತ್ತ ತಿರುಗಿ ನೋಡುವಂತಹ ವಿಶೇಷತೆಯನ್ನ ಚಿತ್ರತಂಡ ಮಾಡ್ತಾ ಇದೆ.

ತ್ರಿವಿಕ್ರಮನ ಸಾಹಸಕ್ಕೆ ದಿಗ್ಗಜ ಫೈಟ್​ ಮಾಸ್ಟರ್​ಗಳ ಸಾಥ್​
ತ್ರಿವಿಕ್ರಮ ಚಿತ್ರ ಪಕ್ಕಾ ಆ್ಯಕ್ಷನ್​ ಓರಿಯೆಂಟ್​ ಸಿನಿಮಾ. ಚಿತ್ರದ ಆ್ಯಕ್ಷನ್ ಸೀನ್​ಗಳನ್ನ ಮತ್ತಷ್ಟು ಅದ್ದೂರಿಯಾಗಿ ತೋರಿಸಲು ಮುಂದಾಗಿರುವ ಚಿತ್ರತಂಡ ಇದಕ್ಕಾಗಿ ದಿಗ್ಗಜ ಫೈಟ್​ ಮಾಸ್ಟರ್​ಗಳನ್ನೇ ಅಖಾಡಕ್ಕೆ ಕರೆಸ್ತಾ ಇದೆ, ಅದು ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ಕು ಪ್ರಖ್ಯಾತ ಫೈಟ್​ ಮಾಸ್ಟರ್ಸ್​ ಚಿತ್ರದ ಸಾಹಸ ದೃಶ್ಯಗಳನ್ನ ಡೈರೆಕ್ಟ್​ ಮಾಡಲಿದ್ದಾರೆ.

1) ಅನ್ಬು-ಅರಿವು ಜೋಡಿ
ಮದ್ರಾಸ್​, ಕಬಾಲಿ, ಕೆಜಿಎಫ್​ ನಂತಹ ಸೂಪರ್​ ಹಿಟ್​ ಚಿತ್ರಗಳಿಗೆ ಸಾಹಸ ದೃಶ್ಯಗಳಿಗೆ ಆ್ಯಕ್ಷನ್​ ಕಟ್​ ಹೇಳಿ ಕಾಲಿವುಡ್​, ಟಾಲಿವುಡ್​, ಮಾಲಿವುಡ್​, ಬಾಲಿವುಡ್​ನಲ್ಲಿ ತನ್ನದೆ ಛಾಪು ಮೂಡಿಸಿ, KGF ಚಿತ್ರದ ಸಾಹಸ ನಿರ್ದೇಶನಕ್ಕಾಗಿ ನ್ಯಾಷನಲ್​ ಅವಾರ್ಡ್​ ಪಡೆದ ಅನ್ಬು-ಅರಿವು ಜೋಡಿ ತ್ರಿವಿಕ್ರಮನ ಸಾಹಸದ ಹುಮಸ್ಸನ್ನ ಮತ್ತಷ್ಟು ಹೆಚ್ಚಿಸಲಿದೆ.

2) ವಿಜಯ್​ ಮಾಸ್ಟರ್​

ದಬಾಂಗ್​, ಬಾಡಿಗಾಡ್​, ವಾಂಟೆಡ್, ಮನಂ, ಟೆಂಪರ್​, ಹಿಟ್ಲರ್​, ಬಾಬಾ, ವಿಲ್ಲು, ಪೋಕಿರಿ ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿ, ಬೆಸ್ಟ್​ ಆ್ಯಕ್ಷನ್​ ಕ್ಯಾಟಗರಿಯಲ್ಲಿ ಎರಡು ಬಾರಿ ಫಿಲ್ಮ್​ಫೇರ್​ ಅವಾರ್ಡ್​ ಪಡೆದು, ಸೌತ್​ ಇಂಡಿಯಾ, ಬಾಲಿವುಡ್​ನಲ್ಲಿ ತನ್ನದೆ ಛಾಪು ಮೂಡಿಸಿರುವ ವಿಜಯ್​ ಮಾಸ್ಟರ್​ ತ್ರಿವಿಕ್ರಮ ಚಿತ್ರದ ಕೆಲವು ಪ್ರಮುಖ ಸಾಹಸ ದೃಶ್ಯಗಳಿಗೆ ಕೊರಿಯೋಗ್ರಫಿ ಮಾಡಲಿದ್ದಾರೆ.

3) ರವಿ ವರ್ಮ
ಮಫ್ತಿ, ದಿ ವಿಲನ್​, ಮಾಸ್ತಿಗುಡಿ, ಕಿರಿಕ್​ ಪಾರ್ಟಿ, ದೊಡ್ಡಮನೆ ಹುಡುಗ, ವಿರಾಟ್​, ಉಗ್ರಂ, ಗೂಗ್ಲಿ, ರಾಜಾಹುಲಿ, ಬಚ್ಚನ್​, ಅದ್ದೂರಿ ಯಾರೇ ಕೂಗಾಡಲಿ, ಸಂಗೂಳ್ಳಿ ರಾಯಣ್ಣ, ಜಾಕಿ, ಮೈನಾ ಸೇರಿದಂತೆ ಇನ್ನೂ ಅನೇಕ ಸೂಪರ್​ ಹಿಟ್​ ಚಿತ್ರಗಳಿಗೆ ಸಾಹಸ ದೃಶ್ಯಗಳ ನಿರ್ದೇಶನ ಮಾಡಿ ಬಾಲಿವುಡ್​ ಸೇರಿದಂತೆ ಸೌತ್​ ಇಂಡಿಯಾದಲ್ಲಿ ಬೆಸ್ಟ್​ ಸ್ಟಂಟ್​ ಮಾಸ್ಟರ್​ ಎಂದು ಹೆಸರು ಮಾಡಿರೋ ನಮ್ಮ ಕನ್ನಡಿಗ ರವಿ ವರ್ಮ ಕೂಡ ತ್ರಿವಿಕ್ರಮ ಚಿತ್ರದ ಹಲವು ಆಕ್ಷನ್​ ಸೀನ್​ಗಳಿಗೆ ಕೊರಿಯೋಗ್ರಫಿ ಮಾಡಲಿದ್ದಾರೆ.

4) ಜಾಲಿ ಬಾಸ್ಟಿನ್​
ಪ್ರೇಮಲೋಕ, ಪುಟ್ನಂಜ, ಅಣ್ಣಯ್ಯ, ಧಮ್​, ಕ್ರೆಜಿಸ್ಟಾರ್​, ಶೈಲು, ಅರಮನೆ, ಗಾಳಿಪಟ, ಸೇರಿದಂತೆ ನೂರಾರು ಚಿತ್ರಗಳಿಗೆ ಆ್ಯಕ್ಷನ್​ ಸೀನ್​ಗಳಿಗೆ ಕೊರಿಯೋಗ್ರಫಿ ಮಾಡಿರೋ ಜಾಲಿ ಬಾಸ್ಟಿನ್​, ತ್ರಿವಿಕ್ರಮ್ ಚಿತ್ರಕ್ಕೆ​ ಸಾಹಸ ನಿರ್ದೇಶನ ಮಾಡಲಿದ್ದಾರೆ.

ಈ ನಾಲ್ಕು ದಿಗ್ಗಜ ಫೈಟ್ ಮಾಸ್ಟರ್ಸ್​ ತ್ರಿವಿಕ್ರಮ ಚಿತ್ರಕ್ಕೆ ವರ್ಕ್​ ಮಾಡ್ತಾ ಇರೋದ್ರಿಂದ, ಸಹಜವಾಗಿಯೇ ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ, ಚಿತ್ರದ ಆ್ಯಕ್ಷನ್​ ದೃಶ್ಯಗಳು ಹೇಗಿರಲಿವೆ ಅನ್ನೋ ಕುತೂಹಲಕ್ಕೆ ​ಚಿತ್ರ ಬಿಡುಗಡೆಯ ನಂತರವೇ ಉತ್ತರ ಸಿಗಲಿದೆ. Gowri Entertainers ಬ್ಯಾನರ್ ಅಡಿ ನಿರ್ಮಾಣ ಆಗ್ತಿರೋ ಬಹುಕೋಟಿ ವೆಚ್ಚದ ಚಿತ್ರಕ್ಕೆ ಸೋಮಣ್ಣ ಬಂಡವಾಳ ಹಾಕಿದ್ದು, ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ.

Published On - 12:49 pm, Mon, 23 December 19