ಕನ್ನಡತಿ ಕೈಬಿಟ್ಟು, ಅಮೆರಿಕಾ ಉದ್ಯಮಿಯ ಪುತ್ರಿ ಕೈಹಿಡಿಯಲಿದ್ದಾರೆ ಪ್ರಭಾಸ್
ಟಾಲಿವುಡ್ ಸ್ಟಾರ್ ಪ್ರಭಾಸ್ ಅಂದಾಕ್ಷಣ ಮೊದಲು ನೆನಪಾಗೋದು ಅವರು ಮದುವೆ ಸುದ್ದಿ. ಅಷ್ಟರ ಮಟ್ಟಿಗೆ ಪ್ರಭಾಸ್ ಮದುವೆ ವಿಚಾರ ಜಗಜ್ಜಾಹೀರಾಗಿದೆ. ಆದ್ರೀಗ ಮತ್ತೆ ಡಾರ್ಲಿಂಗ್ ವಿವಾಹದ ಬಗ್ಗೆ ಹೊಸ ಸುದ್ದಿ ಹರಿದಾಡ್ತಿದೆ. ಈ ಬಾರಿ ಪ್ರಭಾಸ್ ಹಸೆಮಣೆ ಏರೋದು ಪಕ್ಕಾ ಅಂತಿದೆ ಟಾಲಿವುಡ್. ಪ್ರಭಾಸ್. ಟಾಲಿವುಡ್‌ನ ಸ್ಟಾರ್ ನಟ. ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ಸ್ಟಾರ್. ಎಷ್ಟೇ ಹಿಟ್ ಸಿನಿಮಾಗಳನ್ನ ಕೊಟ್ರು, ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸ್ತಿದ್ದರು ಪ್ರಭಾಸ್ ಅಭಿಮಾನಿಗಳನ್ನ ಕಾಡ್ತಿರೋದು ಒಂದೇ ಪ್ರಶ್ನೆ. ಡಾರ್ಲಿಂಗ್ ಮದುವೆ ಆಗೋದು ಯಾವಾಗ […]
ಟಾಲಿವುಡ್ ಸ್ಟಾರ್ ಪ್ರಭಾಸ್ ಅಂದಾಕ್ಷಣ ಮೊದಲು ನೆನಪಾಗೋದು ಅವರು ಮದುವೆ ಸುದ್ದಿ. ಅಷ್ಟರ ಮಟ್ಟಿಗೆ ಪ್ರಭಾಸ್ ಮದುವೆ ವಿಚಾರ ಜಗಜ್ಜಾಹೀರಾಗಿದೆ. ಆದ್ರೀಗ ಮತ್ತೆ ಡಾರ್ಲಿಂಗ್ ವಿವಾಹದ ಬಗ್ಗೆ ಹೊಸ ಸುದ್ದಿ ಹರಿದಾಡ್ತಿದೆ. ಈ ಬಾರಿ ಪ್ರಭಾಸ್ ಹಸೆಮಣೆ ಏರೋದು ಪಕ್ಕಾ ಅಂತಿದೆ ಟಾಲಿವುಡ್.
ಪ್ರಭಾಸ್. ಟಾಲಿವುಡ್‌ನ ಸ್ಟಾರ್ ನಟ. ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ಸ್ಟಾರ್. ಎಷ್ಟೇ ಹಿಟ್ ಸಿನಿಮಾಗಳನ್ನ ಕೊಟ್ರು, ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸ್ತಿದ್ದರು ಪ್ರಭಾಸ್ ಅಭಿಮಾನಿಗಳನ್ನ ಕಾಡ್ತಿರೋದು ಒಂದೇ ಪ್ರಶ್ನೆ. ಡಾರ್ಲಿಂಗ್ ಮದುವೆ ಆಗೋದು ಯಾವಾಗ ಅನ್ನೋದು.
ಬಾಹುಬಲಿ ಸೀಕ್ವೆಲ್‌ನಲ್ಲಿ ಬ್ಯುಸಿ ಇದ್ದ ಪ್ರಭಾಸ್, ಬಾಹುಬಲಿ ನಂತ್ರ ಮದುವೆ ಆಗ್ತಾರೆ ಅಂತ ಹೇಳಲಾಗಿತ್ತು.. ಆದ್ರೆ ಬಾಹುಬಲಿ ತೆರೆಕಂಡು, ಸಾಹೋ ಸಿನಿಮಾ ರಿಲೀಸ್ ಆದ್ರು ಪ್ರಭಾಸ್ ಮದುವೆ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರ ಬರಲೇ ಇಲ್ಲ. ಜೊತೆಗೆ ಅನುಷ್ಕಾ ಶೆಟ್ಟಿ ಸೇರಿದಂತೆ, ಒಂದುಷ್ಟು ಹೆಸ್ರುಗಳು ಪ್ರಭಾಸ್ ಜೊತೆಗೆ ತಳಕು ಹಾಕಿಕೊಂಡಿದ್ವು. ಆದ್ರೆ ಅದ್ಯಾವುದು ನಿಜವಾಗಲೇ ಇಲ್ಲ.
ಆದ್ರೀಗ ಪ್ರಭಾಸ್ ಮದುವೆ ಬಗ್ಗೆ ಮತ್ತೊಂದು ಸುದ್ದಿ ಟಾಲಿವುಡ್ನಲ್ಲಿ ಹರಿದಾಡ್ತಿದೆ.. ಇದು ಕೇವಲ ಗಾಳಿ ಸುದ್ದಿ ಅಲ್ಲ ಅಂತಲೂ ಹೇಳಲಾಗ್ತಿದೆ. ಈ ವರ್ಷದ ಅಂತ್ಯದಲ್ಲಿ ಅಂದ್ರೆ ಡಿಸೆಂಬರ್ 31ರಂದು ಪ್ರಭಾಸ್ ತಮ್ಮ ಮದುವೆ ಸುದ್ದಿಯನ್ನ ಅಧಿಕೃತವಾಗಿ ಪ್ರಕಟಿಸಲಿದ್ದಾರಂತೆ. ಇದ್ರೊಂದಿಗೆ ಪ್ರಭಾಸ್ ಅಮೆರಿಕ ಮೂಲದ ಉದ್ಯಮಿಯೊಬ್ಬರ ಮಗಳನ್ನ ಪ್ರಭಾಸ್ ಪ್ರೀತಿಸುತ್ತಿದ್ದು, ಅವ್ರನ್ನೇ ಮದುವೆ ಆಗಲಿದ್ದಾರೆ ಅಂತಲೂ ಹೇಳಲಾಗ್ತಿದೆ.
ಡಿಸೆಂಬರ್ 31 ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಕೂಡ ಸಿಕ್ಕಿದೆ.. 2020 ಜನವರಿ1 ರಿಂದ ಪ್ರಭಾಸ್ ತಮ್ಮ ಹೊಸ ಸಿನಿಮಾ ಜಾನ್ ಶೂಟಿಂಗ್‌ನಲ್ಲಿ ಭಾಗಿ ಆಗಲಿದ್ದಾರಂತೆ. ಹಾಗಾಗಿ ಈ ವರ್ಷದ ಕೊನೆಯ ದಿನ ತಮ್ಮ ಮದುವೆ ಸುದ್ದಿಯನ್ನ ಪ್ರಕಟಿಸೋ ಯೋಚನೆಯಲ್ಲಿದ್ದಾರಂತೆ.
ಒಟ್ನಲ್ಲಿ ಇದು ನಿಜವಾ..? ನಿಜನೇ ಆದ್ರೆ ಪ್ರಭಾಸ್ ಕೈ ಹಿಡಿಯೋ ಆ ಬೆಡಗಿ ಯಾರು ಅನ್ನೋದಕ್ಕೆ ಸದ್ಯದಲ್ಲೇ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಕುತೂಹಲ ಹುಟ್ಟು ಹಾಕಿರೋ ಈ ಸುದ್ದಿ ಪ್ರಭಾಸ್ ಅಭಿಮಾನಿಗಳನ್ನ ಡಿಸೆಂಬರ್ 31ರ ತನಕ ಕಾಯುವಂತೆ ಮಾಡಿದೆ.
Published On - 2:37 pm, Sun, 22 December 19