‘ತ್ರಿವಿಕ್ರಮ’ನ ಸಾಹಸಕ್ಕೆ ಫೈಟ್​ ಮಾಸ್ಟರ್ಸ್​ ಯಾರ್​ ಯಾರ್​ ಗೊತ್ತಾ..?

'ತ್ರಿವಿಕ್ರಮ’ನ ಸಾಹಸಕ್ಕೆ ಫೈಟ್​ ಮಾಸ್ಟರ್ಸ್​ ಯಾರ್​ ಯಾರ್​ ಗೊತ್ತಾ..?

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಸಿನಿಮಾಗಳಲ್ಲಿ ರವಿಚಂದ್ರನ್​ ಪುತ್ರ ವಿಕ್ರಮ್​ ಅಭಿನಯದ ಚೊಚ್ಚಲ ಚಿತ್ರ ತ್ರಿವಿಕ್ರಮ ಕೂಡ ಒಂದು, ಭರದಿಂದ ಚಿತ್ರದ ಚಿತ್ರೀಕರಣ ಸಾಗಿದ್ದು, ಚಿತ್ರ ಹಲವು ವಿಶೇಷತೆಗಳೊಂದಿಗೆ ಸ್ಯಾಂಡಲ್ವುಡ್​ನ ಗಮನ ಸೆಳೇಯುತ್ತಾ ಇದೆ. ಆದ್ರೆ ಇದೀಗ ಇತರ ಚಿತ್ರರಂಗಗಳು ತ್ರಿವಿಕ್ರಮನ ಚಿತ್ರಿಕರಣದತ್ತ ತಿರುಗಿ ನೋಡುವಂತಹ ವಿಶೇಷತೆಯನ್ನ ಚಿತ್ರತಂಡ ಮಾಡ್ತಾ ಇದೆ. ತ್ರಿವಿಕ್ರಮನ ಸಾಹಸಕ್ಕೆ ದಿಗ್ಗಜ ಫೈಟ್​ ಮಾಸ್ಟರ್​ಗಳ ಸಾಥ್​ ತ್ರಿವಿಕ್ರಮ ಚಿತ್ರ ಪಕ್ಕಾ ಆ್ಯಕ್ಷನ್​ ಓರಿಯೆಂಟ್​ ಸಿನಿಮಾ. ಚಿತ್ರದ ಆ್ಯಕ್ಷನ್ ಸೀನ್​ಗಳನ್ನ ಮತ್ತಷ್ಟು ಅದ್ದೂರಿಯಾಗಿ […]

sadhu srinath

|

Dec 23, 2019 | 12:50 PM

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಸಿನಿಮಾಗಳಲ್ಲಿ ರವಿಚಂದ್ರನ್​ ಪುತ್ರ ವಿಕ್ರಮ್​ ಅಭಿನಯದ ಚೊಚ್ಚಲ ಚಿತ್ರ ತ್ರಿವಿಕ್ರಮ ಕೂಡ ಒಂದು, ಭರದಿಂದ ಚಿತ್ರದ ಚಿತ್ರೀಕರಣ ಸಾಗಿದ್ದು, ಚಿತ್ರ ಹಲವು ವಿಶೇಷತೆಗಳೊಂದಿಗೆ ಸ್ಯಾಂಡಲ್ವುಡ್​ನ ಗಮನ ಸೆಳೇಯುತ್ತಾ ಇದೆ. ಆದ್ರೆ ಇದೀಗ ಇತರ ಚಿತ್ರರಂಗಗಳು ತ್ರಿವಿಕ್ರಮನ ಚಿತ್ರಿಕರಣದತ್ತ ತಿರುಗಿ ನೋಡುವಂತಹ ವಿಶೇಷತೆಯನ್ನ ಚಿತ್ರತಂಡ ಮಾಡ್ತಾ ಇದೆ.

ತ್ರಿವಿಕ್ರಮನ ಸಾಹಸಕ್ಕೆ ದಿಗ್ಗಜ ಫೈಟ್​ ಮಾಸ್ಟರ್​ಗಳ ಸಾಥ್​ ತ್ರಿವಿಕ್ರಮ ಚಿತ್ರ ಪಕ್ಕಾ ಆ್ಯಕ್ಷನ್​ ಓರಿಯೆಂಟ್​ ಸಿನಿಮಾ. ಚಿತ್ರದ ಆ್ಯಕ್ಷನ್ ಸೀನ್​ಗಳನ್ನ ಮತ್ತಷ್ಟು ಅದ್ದೂರಿಯಾಗಿ ತೋರಿಸಲು ಮುಂದಾಗಿರುವ ಚಿತ್ರತಂಡ ಇದಕ್ಕಾಗಿ ದಿಗ್ಗಜ ಫೈಟ್​ ಮಾಸ್ಟರ್​ಗಳನ್ನೇ ಅಖಾಡಕ್ಕೆ ಕರೆಸ್ತಾ ಇದೆ, ಅದು ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ಕು ಪ್ರಖ್ಯಾತ ಫೈಟ್​ ಮಾಸ್ಟರ್ಸ್​ ಚಿತ್ರದ ಸಾಹಸ ದೃಶ್ಯಗಳನ್ನ ಡೈರೆಕ್ಟ್​ ಮಾಡಲಿದ್ದಾರೆ.

1) ಅನ್ಬು-ಅರಿವು ಜೋಡಿ ಮದ್ರಾಸ್​, ಕಬಾಲಿ, ಕೆಜಿಎಫ್​ ನಂತಹ ಸೂಪರ್​ ಹಿಟ್​ ಚಿತ್ರಗಳಿಗೆ ಸಾಹಸ ದೃಶ್ಯಗಳಿಗೆ ಆ್ಯಕ್ಷನ್​ ಕಟ್​ ಹೇಳಿ ಕಾಲಿವುಡ್​, ಟಾಲಿವುಡ್​, ಮಾಲಿವುಡ್​, ಬಾಲಿವುಡ್​ನಲ್ಲಿ ತನ್ನದೆ ಛಾಪು ಮೂಡಿಸಿ, KGF ಚಿತ್ರದ ಸಾಹಸ ನಿರ್ದೇಶನಕ್ಕಾಗಿ ನ್ಯಾಷನಲ್​ ಅವಾರ್ಡ್​ ಪಡೆದ ಅನ್ಬು-ಅರಿವು ಜೋಡಿ ತ್ರಿವಿಕ್ರಮನ ಸಾಹಸದ ಹುಮಸ್ಸನ್ನ ಮತ್ತಷ್ಟು ಹೆಚ್ಚಿಸಲಿದೆ.

2) ವಿಜಯ್​ ಮಾಸ್ಟರ್​ ದಬಾಂಗ್​, ಬಾಡಿಗಾಡ್​, ವಾಂಟೆಡ್, ಮನಂ, ಟೆಂಪರ್​, ಹಿಟ್ಲರ್​, ಬಾಬಾ, ವಿಲ್ಲು, ಪೋಕಿರಿ ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿ, ಬೆಸ್ಟ್​ ಆ್ಯಕ್ಷನ್​ ಕ್ಯಾಟಗರಿಯಲ್ಲಿ ಎರಡು ಬಾರಿ ಫಿಲ್ಮ್​ಫೇರ್​ ಅವಾರ್ಡ್​ ಪಡೆದು, ಸೌತ್​ ಇಂಡಿಯಾ, ಬಾಲಿವುಡ್​ನಲ್ಲಿ ತನ್ನದೆ ಛಾಪು ಮೂಡಿಸಿರುವ ವಿಜಯ್​ ಮಾಸ್ಟರ್​ ತ್ರಿವಿಕ್ರಮ ಚಿತ್ರದ ಕೆಲವು ಪ್ರಮುಖ ಸಾಹಸ ದೃಶ್ಯಗಳಿಗೆ ಕೊರಿಯೋಗ್ರಫಿ ಮಾಡಲಿದ್ದಾರೆ.

3) ರವಿ ವರ್ಮ ಮಫ್ತಿ, ದಿ ವಿಲನ್​, ಮಾಸ್ತಿಗುಡಿ, ಕಿರಿಕ್​ ಪಾರ್ಟಿ, ದೊಡ್ಡಮನೆ ಹುಡುಗ, ವಿರಾಟ್​, ಉಗ್ರಂ, ಗೂಗ್ಲಿ, ರಾಜಾಹುಲಿ, ಬಚ್ಚನ್​, ಅದ್ದೂರಿ ಯಾರೇ ಕೂಗಾಡಲಿ, ಸಂಗೂಳ್ಳಿ ರಾಯಣ್ಣ, ಜಾಕಿ, ಮೈನಾ ಸೇರಿದಂತೆ ಇನ್ನೂ ಅನೇಕ ಸೂಪರ್​ ಹಿಟ್​ ಚಿತ್ರಗಳಿಗೆ ಸಾಹಸ ದೃಶ್ಯಗಳ ನಿರ್ದೇಶನ ಮಾಡಿ ಬಾಲಿವುಡ್​ ಸೇರಿದಂತೆ ಸೌತ್​ ಇಂಡಿಯಾದಲ್ಲಿ ಬೆಸ್ಟ್​ ಸ್ಟಂಟ್​ ಮಾಸ್ಟರ್​ ಎಂದು ಹೆಸರು ಮಾಡಿರೋ ನಮ್ಮ ಕನ್ನಡಿಗ ರವಿ ವರ್ಮ ಕೂಡ ತ್ರಿವಿಕ್ರಮ ಚಿತ್ರದ ಹಲವು ಆಕ್ಷನ್​ ಸೀನ್​ಗಳಿಗೆ ಕೊರಿಯೋಗ್ರಫಿ ಮಾಡಲಿದ್ದಾರೆ.

4) ಜಾಲಿ ಬಾಸ್ಟಿನ್​ ಪ್ರೇಮಲೋಕ, ಪುಟ್ನಂಜ, ಅಣ್ಣಯ್ಯ, ಧಮ್​, ಕ್ರೆಜಿಸ್ಟಾರ್​, ಶೈಲು, ಅರಮನೆ, ಗಾಳಿಪಟ, ಸೇರಿದಂತೆ ನೂರಾರು ಚಿತ್ರಗಳಿಗೆ ಆ್ಯಕ್ಷನ್​ ಸೀನ್​ಗಳಿಗೆ ಕೊರಿಯೋಗ್ರಫಿ ಮಾಡಿರೋ ಜಾಲಿ ಬಾಸ್ಟಿನ್​, ತ್ರಿವಿಕ್ರಮ್ ಚಿತ್ರಕ್ಕೆ​ ಸಾಹಸ ನಿರ್ದೇಶನ ಮಾಡಲಿದ್ದಾರೆ.

ಈ ನಾಲ್ಕು ದಿಗ್ಗಜ ಫೈಟ್ ಮಾಸ್ಟರ್ಸ್​ ತ್ರಿವಿಕ್ರಮ ಚಿತ್ರಕ್ಕೆ ವರ್ಕ್​ ಮಾಡ್ತಾ ಇರೋದ್ರಿಂದ, ಸಹಜವಾಗಿಯೇ ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ, ಚಿತ್ರದ ಆ್ಯಕ್ಷನ್​ ದೃಶ್ಯಗಳು ಹೇಗಿರಲಿವೆ ಅನ್ನೋ ಕುತೂಹಲಕ್ಕೆ ​ಚಿತ್ರ ಬಿಡುಗಡೆಯ ನಂತರವೇ ಉತ್ತರ ಸಿಗಲಿದೆ. Gowri Entertainers ಬ್ಯಾನರ್ ಅಡಿ ನಿರ್ಮಾಣ ಆಗ್ತಿರೋ ಬಹುಕೋಟಿ ವೆಚ್ಚದ ಚಿತ್ರಕ್ಕೆ ಸೋಮಣ್ಣ ಬಂಡವಾಳ ಹಾಕಿದ್ದು, ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada