AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೇಲರ್ ಮೂಲಕ ಗಮನ ಸೆಳೆದ ‘Mr ಜಾಕ್’; ಡಿಸೆಂಬರ್ 4ಕ್ಕೆ ತಪಸ್ವಿನಿ- ಗುರನಂದನ್ ಸಿನಿಮಾ

ಗುರುನಂದನ್ ಹಾಗೂ ತಪಸ್ವಿನಿ ಪೂಣಚ್ಛ ನಾಯಕ-ನಾಯಕಿಯಾಗಿ ನಟಿಸಿರುವ ಸುಮಂತ್ ನಿರ್ದೇಶನದ ‘MR ಜಾಕ್’ ಚಿತ್ರದ ಟ್ರೇಲರ್ ಬೆಂಗಳೂರಿನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಮಂಡಿಮನೆ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಕೌಟುಂಬಿಕ ಮನರಂಜನಾ ಚಿತ್ರವು ಬರುವ ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಟ್ರೇಲರ್ ಮೂಲಕ ಗಮನ ಸೆಳೆದ ‘Mr ಜಾಕ್’; ಡಿಸೆಂಬರ್ 4ಕ್ಕೆ ತಪಸ್ವಿನಿ- ಗುರನಂದನ್ ಸಿನಿಮಾ
ಮಿಸ್ಟರ್ ಜ್ಯಾಕ್
ರಾಜೇಶ್ ದುಗ್ಗುಮನೆ
|

Updated on: Nov 16, 2026 | 3:13 PM

Share

ನಟಿ ತಪಸ್ವಿನಿ ಪೂಣಚ್ಚ ಅವರು ಸದ್ಯ ‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಖುಷಿ ಮಧ್ಯೆಯೇ ಅವರ ಹೊಸ ಸಿನಿಮಾ ರಿಲೀಸ್​​ಗೆ ರೆಡಿ ಆಗಿದೆ. ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಹಾಗೂ ತಪಸ್ವಿನಿ ಪೂಣಚ್ಛ ಜೋಡಿಯ ಹೊಸ ಸಿನಿಮಾ ‘ಮಿಸ್ಟರ್ ಜಾಕ್’ ಡಿಸೆಂಬರ್ 4ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಗಮನ ಸೆಳೆದಿದೆ.

‘ಮಿಸ್ಟರ್ ಜಾಕ್’ ಚಿತ್ರದಲ್ಲಿ ಒಂದು ಸುಂದರವಾದ ಲವ್​ಸ್ಟೋರಿ ಹಾಗೂ ಸಂಸಾರದ ಕಥೆ ಇದೆ. ಮದುವೆ ಬಳಿಕ ಸಂಬಂಧಗಳಲ್ಲಿ ಯಾವೆಲ್ಲ ತೊಂದರೆ ಎದುರಾಗಬಹುದು, ಅದನ್ನು ಹೇಗೆ ನಿಭಾಯಿಸಬೇಕು ಎಂಬಿತ್ಯಾದಿ ವಿಷಯಗಳ ಮೇಲೆ ‘ಮಿಸ್ಟರ್ ಜಾಕ್’ ಚಿತ್ರ ಬೆಳಕು ಚೆಲ್ಲಲಿದೆ.

‘ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ನನಗೆ ಸಿನಿಮಾ ಮಾಡುವುದು ದೊಡ್ಡ ಕನಸಾಗಿತ್ತು. ಮಂಡಿಮನೆ ಟಾಕೀಸ್ ಹಾಗೂ ಇಡೀ ತಂಡದ ಸಹಕಾರದಿಂದ ಒಂದು ಸದಭಿರುಚಿಯ ಕೌಟುಂಬಿಕ ಚಿತ್ರವನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು ನಿರ್ದೇಶಕ ಸುಮಂತ್. ಗುರುನಂದನ್ ಮಾತನಾಡಿ, ‘ಸ್ನೇಹಿತರ ಸಹಕಾರದೊಂದಿಗೆ ಕುಟುಂಬ ಸಮೇತ ಕುಳಿತು ನೋಡಬಹುದಾದ ಮನರಂಜನಾತ್ಮಕ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ’ ಎಂದರು. ‘ಪ್ರೇಮದ ಊರಲಿ ಚಿತ್ರಕ್ಕೆ ಕೊಟ್ಟಷ್ಟೇ ಪ್ರೀತಿ ಇದಕ್ಕೂ ಸಿಗಲಿ’ ಎಂದರು ನಾಯಕಿ ತಪಸ್ವಿನಿ.

ಇದನ್ನೂ ಓದಿ: ‘ಮಿಸ್ಟರ್ ಜಾಕ್’: ‘ಆರಂಭ ವಸಂತ’ ಹಾಡಿನಲ್ಲಿ ಗಮನ ಸೆಳೆದ ತಪಸ್ವಿನಿ-ಗುರು ನಂದನ್ ಕೆಮಿಸ್ಟ್ರಿ

ಮಂಡಿಮನೆ ಟಾಕೀಸ್ ಲಾಂಛನದಲ್ಲಿ ನಟ ಗುರುನಂದನ್ ಹಾಗೂ ಅವರ ಸ್ನೇಹಿತರು ‘ಮಿಸ್ಟರ್ ಜಾಕ್’ ಚಿತ್ರ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಲಾಂಚ್​​ಗೆ ಮಾಜಿ ಸಚಿವರಾದ ಸಿ.ಟಿ. ರವಿ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ್, ಉದ್ಯಮಿ ಪ್ರಕಾಶ್ ಶೆಟ್ಟಿ ಹಾಗೂ ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ವಿಶೇಷವಾಗಿ ‘ಪ್ರೇಮದ ಊರಲಿ’ ಚಿತ್ರತಂಡದ ಸದಸ್ಯರು ಕೂಡ ಸಮಾರಂಭದಲ್ಲಿ ಭಾಗಿಯಾಗಿ ಸಾಥ್ ನೀಡಿರುವುದು ವಿಶೇಷವಾಗಿತ್ತು.

ಹಿರಿಯ ನಟ ರಂಗಾಯಣ ರಘು ಸೇರಿದಂತೆ ಹಲವು ದಿಗ್ಗಜರು ಚಿತ್ರದ ಯಶಸ್ಸಿಗೆ ಹಾರೈಸಿದ್ದಾರೆ. ಈ ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ, ಶಿವಸೇನ ಛಾಯಾಗ್ರಾಹಣ ಹಾಗೂ ವಿಜಯ್ ರಾಜ್ ಸಂಕಲನವಿದೆ. ಧರ್ಮಣ್ಣ, ಸುಷ್ಮಿತಾ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ಸಿಎಂ ಸೇರಿ ತನ್ನ ಫೋನ್​​ ಕೂಡ ಕದ್ದಾಲಿಕೆ ಆಗುತ್ತವೆ': ಪ್ರಿಯಾಂಕ್​​ ಖರ್ಗೆ
'ಸಿಎಂ ಸೇರಿ ತನ್ನ ಫೋನ್​​ ಕೂಡ ಕದ್ದಾಲಿಕೆ ಆಗುತ್ತವೆ': ಪ್ರಿಯಾಂಕ್​​ ಖರ್ಗೆ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟ
ಭದ್ರಾ ಡ್ಯಾಂನಿಂದ 10 ದಿನ 1500 ಕ್ಯೂಸೆಕ್ ನೀರು ಬಿಡುಗಡೆ
ಭದ್ರಾ ಡ್ಯಾಂನಿಂದ 10 ದಿನ 1500 ಕ್ಯೂಸೆಕ್ ನೀರು ಬಿಡುಗಡೆ
ಮಹಾರಾಣಿ ಪಟ್ಟಕ್ಕೆ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಸ್ಪರ್ಧೆ
ಮಹಾರಾಣಿ ಪಟ್ಟಕ್ಕೆ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಸ್ಪರ್ಧೆ