ಕಳೆದ ವರ್ಷ ಡಿಸೆಂಬರಿನಲ್ಲಿ ಧಾಂ ಧೂಂ ಅಂತಾ ಮದ್ವೆ ಮಾಡಿಕೊಂಡಿದ್ದ ಬಾಲಿವುಡ್ನ ಅಗ್ರ ನಟಿ ಪ್ರಿಯಾಂಕಾ ಚೋಪ್ರಾಗೆ ಈ ಬಾರಿ ಚೊಚ್ಚಲ ಕರ್ವಾ ಚೌತ್. ಅದನ್ನು ಪತಿರಾಯ ನಿಕ್ ಜೋನಸ್ ಜೊತೆ ಅವರು ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದಾರೆ.
ಪ್ರಿಯಾಂಕಾ, ಕರ್ವಾ ಚೌತ್ ಆಚರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಪ್ರಿಯಾಂಕಾ ಕಟ್ಟರ್ ಅಭಿಮಾನಿಗಳು ಒಳಗೊಳಗೇ ಶ್ಯಾನೆ ಅಭಾವ ವೈರಾಗ್ಯ ಅನುಭವಿಸಿದ್ದಾರೆ. ಪ್ರಿಯಾಂಕಾ-ನಿಕ್ ದಂಪತಿಯ ಕರ್ವಾ ಚೌತ್ ಆಚರಣೆಯನ್ನು ಒಮ್ಮೆ ನೀವೂ ನೋಡಿ.
ಅಂದಹಾಗೆ, ಕರ್ವಾ ಚೌತ್ ಆಚರಣೆ ಹಿಂದೂ ಮತ್ತು ಸಿಕ್ ಧರ್ಮದಲ್ಲಿ ವಿವಾಹಿತ ಸ್ತ್ರೀಯರು ಆಚರಿಸುವ ಆಡಂಬರದ ಹಬ್ಬ. ಆ ದಿನದಂದು ಪತಿಯ ಒಳಿತು, ದೀರ್ಘಾಯುಷ್ಯವನ್ನು ಕೋರಿ ವಿವಾಹಿತ ಸ್ತ್ರೀಯರು ಉಪವಾಸವಿರುತ್ತಾರೆ. ಕಡೆಗೆ ಒಂದು ತೊಟ್ಟು ನೀರನ್ನು ಸಹ ಕುಡಿಯುವುದಿಲ್ಲ. ಅಷ್ಟೊಂದು ನಿಷ್ಠೆಯಿಂದ ಕರ್ವಾ ಚೌತ್ ಅನ್ನು ಆಚರಿಸುತ್ತಾರೆ.
Published On - 3:20 pm, Sat, 19 October 19