ಪರ್ಫೆಕ್ಟ್​ ಶೇಪ್​ಗಾಗಿ ಈ ಕಾಲಿವುಡ್​ ನಟಿ ಏನೆಲ್ಲ ಕಸರತ್ತು ಮಾಡ್ತಾರೆ ಗೊತ್ತಾ?

ಈಕೆ ಕಾಲಿವುಡ್ ನಟಿ ಐಶ್ವರ್ಯ ರಾಜೇಶ್. ತನ್ನ ಅದ್ಭುತ ಅಭಿನಯದ ಮೂಲಕವೇ ಸೌತ್ ಸಿನಿರಂಗದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ ನಟಿ. ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಂಡ ಕಾಕಾ ಮುತೈ ಚಿತ್ರದಲ್ಲಿ ಮಿಂಚಿದ ಬೆಡಗಿ. ಈಕೆಯ ನಟನೆ ನೋಡಿ ಮೆಚ್ಚಿದ ಪ್ರೇಕ್ಷಕ ಇವರ ಫಿಟ್ನೆಸ್​ಗೂ ಫಿದಾ ಆಗಿದ್ದಾರೆ. ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಫಿಟ್​ ಮಾಡಿಕೊಳ್ಳುವ ಐಶ್ವರ್ಯ ಅವರ ಫಿಟ್ನೆಸ್​ ಗುಟ್ಟು ಅವರು ಫಾಲೋ ಮಾಡುವ ವರ್ಕೌಟ್ ಅಂತೆ. ಬ್ಯೂಟಿಫುಲ್ ಐಶ್ವರ್ಯ ವಾರದಲ್ಲಿ ಮೂರು ದಿನ ಮಿಸ್​ ಮಾಡದೇ […]

ಪರ್ಫೆಕ್ಟ್​ ಶೇಪ್​ಗಾಗಿ ಈ ಕಾಲಿವುಡ್​ ನಟಿ ಏನೆಲ್ಲ ಕಸರತ್ತು ಮಾಡ್ತಾರೆ ಗೊತ್ತಾ?
ಸಾಧು ಶ್ರೀನಾಥ್​

Updated on: Oct 18, 2019 | 6:19 PM

ಈಕೆ ಕಾಲಿವುಡ್ ನಟಿ ಐಶ್ವರ್ಯ ರಾಜೇಶ್. ತನ್ನ ಅದ್ಭುತ ಅಭಿನಯದ ಮೂಲಕವೇ ಸೌತ್ ಸಿನಿರಂಗದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ ನಟಿ. ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಂಡ ಕಾಕಾ ಮುತೈ ಚಿತ್ರದಲ್ಲಿ ಮಿಂಚಿದ ಬೆಡಗಿ. ಈಕೆಯ ನಟನೆ ನೋಡಿ ಮೆಚ್ಚಿದ ಪ್ರೇಕ್ಷಕ ಇವರ ಫಿಟ್ನೆಸ್​ಗೂ ಫಿದಾ ಆಗಿದ್ದಾರೆ. ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಫಿಟ್​ ಮಾಡಿಕೊಳ್ಳುವ ಐಶ್ವರ್ಯ ಅವರ ಫಿಟ್ನೆಸ್​ ಗುಟ್ಟು ಅವರು ಫಾಲೋ ಮಾಡುವ ವರ್ಕೌಟ್ ಅಂತೆ.

ಬ್ಯೂಟಿಫುಲ್ ಐಶ್ವರ್ಯ ವಾರದಲ್ಲಿ ಮೂರು ದಿನ ಮಿಸ್​ ಮಾಡದೇ ಒಂದು ಗಂಟೆಗಳ ಕಾಲ ಜಿಮ್ ವರ್ಕೌಟ್ ಮಾಡ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಜಿಮ್​ನಲ್ಲಿ ಯಾವ ಎಕ್ಸ್​ಸೈಜ್​ಗೂ ಸ್ಟ್ರಿಕ್ಟಾಗಿ ಟೈಮ್ ಫಿಕ್ಸ್​ ಮಾಡಿಲ್ವಂತೆ ಈ ಚೆಲುವೆ. ಇವರು ಜಿಮ್​ನಲ್ಲಿ ವೇಟ್​ ಟ್ರೇನಿಂಗ್ ಮತ್ತು ಫಂಕ್ಷನಲ್ ಟ್ರೇನಿಂಗ್ ಎಕ್ಸ್​ಸೈಜ್​ಗಳ ಕಡೆ ಹೆಚ್ಚು ಗಮನ ಹರಿಸ್ತಾರಂತೆ. ಅದರಲ್ಲಿ ಸ್ಕ್ವಾಟ್, ಡೆಡ್​ ಲಿಫ್ಟ್, ಪುಶ್ಯಪ್ಸ್​, ಡಂಬೆಲ್ಸ್​, ಲೋವರ್ ಬಾಡಿ ಮತ್ತು ಅಪ್ಪರ್ ಬಾಡಿ ವ್ಯಾಯಾಮಗಳು ಇರುತ್ತೆ. ಈ ಎಲ್ಲಾ ಎಕ್ಸ್​ಸೈಜ್​ಗಳು ಕ್ಯಾಲೋರಿ ಬರ್ನ್​ ಮಾಡಿ ಹೆಲ್ತಿ ಫಿಟ್ನೆಸ್​ ಕಾಪಾಡಲು ಸಹಕಾರಿಯಾಗುತ್ತೆ ಅಂತಾರೆ ಫಿಟ್ನೆಸ್ ಪ್ರೀಕ್ ಐಶ್ವರ್ಯ.

ಇನ್ನು ಇವರ ಫಿಟ್ ಆ್ಯಂಡ್ ಫೈನ್ ​ ಬಾಡಿಯ ಇನ್ನೊಂದು ಗುಟ್ಟು ಸ್ವಿಮ್ಮಿಂಗ್. ನಿತ್ಯ ಸ್ವಿಮ್ಮಿಂಗ್ ಫ್ಲೆಕ್ಸಿಬಲ್ ಬಾಡಿ ಮತ್ತು ಪರ್ಫೆಕ್ಟ್​ ಶೇಪ್​ಗೆ ಸಹಕಾರಿ ಆಗುತ್ತೆ ಅನ್ನೋದು ಇವರ ಮಾತು.

Published On - 8:18 am, Fri, 18 October 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us