ಭರ್ಜರಿ ಓಪನಿಂಗ್ ಪಡೆದ ಪೈಲ್ವಾನ್; ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

| Updated By: Team Veegam

Updated on: Sep 17, 2019 | 5:15 PM

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿದಂತೆ 5 ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸೆಪ್ಟಂಬರ್ 12ರಂದು ಸುಮಾರು 4ಸಾವಿರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ತೆರೆಕಂಡಿರುವ ಪೈಲ್ವಾನ್ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮುಂಜಾನೆಯಿಂದಲೇ ಪೈಲ್ವಾನ್​ ಸಿನಿಮಾ ರಿಲೀಸ್ ಆಗಿದೆ. ಪೈಲ್ವಾನ್​ ಸಿನಿಮಾದ ಕನ್ನಡ ಅವತರಣಿಕೆ ಬಿಡುಗಡೆಯಾದ ಮೊದಲ ದಿನವೇ 10 ಕೋಟಿ ರೂ. ಗಳಿಸಿದೆ ಎನ್ನಲಾಗುತ್ತಿದೆ. ಆದ್ರೆ […]

ಭರ್ಜರಿ ಓಪನಿಂಗ್ ಪಡೆದ ಪೈಲ್ವಾನ್; ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
Follow us on

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿದಂತೆ 5 ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸೆಪ್ಟಂಬರ್ 12ರಂದು ಸುಮಾರು 4ಸಾವಿರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ತೆರೆಕಂಡಿರುವ ಪೈಲ್ವಾನ್ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಬೆಂಗಳೂರು ಸೇರಿದಂತೆ ಹಲವೆಡೆ ಮುಂಜಾನೆಯಿಂದಲೇ ಪೈಲ್ವಾನ್​ ಸಿನಿಮಾ ರಿಲೀಸ್ ಆಗಿದೆ. ಪೈಲ್ವಾನ್​ ಸಿನಿಮಾದ ಕನ್ನಡ ಅವತರಣಿಕೆ ಬಿಡುಗಡೆಯಾದ ಮೊದಲ ದಿನವೇ 10 ಕೋಟಿ ರೂ. ಗಳಿಸಿದೆ ಎನ್ನಲಾಗುತ್ತಿದೆ. ಆದ್ರೆ ಸುದೀಪ್-ಶಿವರಾಜ್ ಕುಮಾರ್ ಅಭಿನಯದ ‘ವಿಲನ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಮುರಿಯುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಮೊದಲ ದಿನದ ಕಲೆಕ್ಷನ್ ಬಗ್ಗೆ ನಿರ್ಮಾಪಕರು ಅಥವಾ ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಲ್ಲ. ಪೈಲ್ವಾನ್ ಸಿನಿಮಾದ ಬಗ್ಗೆ ಸುದೀಪ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ವಾರಾಂತ್ಯದ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹೆಬ್ಬುಲಿ ಚಿತ್ರದ ನಂತರ ನಿರ್ದೇಶಕ ಎಸ್​.ಕೃಷ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಚಿತ್ರ ಇದಾಗಿದೆ. ಬಾಲಿವುಡ್​ನ ಸುನಿಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಕಾಂಕ್ಷ ಸಿಂಗ್ ಸುದೀಪ್​ಗೆ ನಾಯಕಿಯಾಗಿ ನಟಿಸಿದ್ದರೆ, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.

Published On - 4:47 pm, Fri, 13 September 19