ಸೋಷಿಯಲ್ ಮೀಡಿಯಾದಲ್ಲಿ ‘ದಚ್ಚು-ಕಿಚ್ಚ’ ಫ್ಯಾನ್ಸ್ ಡಿಚ್ಚಿ ಡಿಚ್ಚಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಇಬ್ಬರೂ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಆದ್ರೆ ಕಾರಣಾಂತರಗಳಿಂದ ಕೆಲ ವರ್ಷಗಳಿಂದ ಇಬ್ಬರ ನಡುವಿನ ಸ್ನೇಹ ಅಷ್ಟಕಷ್ಟೆ. ಇತ್ತೀಚೆಗೆ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಪೈರಸಿಯಾಗಿತ್ತು. ಇದಕ್ಕೆ ಕಾರಣ ದರ್ಶನ್ ಅಭಿಮಾನಿಗಳು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚನ ಫ್ಯಾನ್ಸ್​ ಮುಗಿಬಿದ್ದಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಸುದೀಪ್ ಹೆಸರು ಬಳಸದೇ ಕೆಲ ಘಟನೆಗಳನ್ನ ಉಲ್ಲೇಖಿಸಿ ಪತ್ರ ಬರೆದಿರುವ ದರ್ಶನ್ […]

ಸೋಷಿಯಲ್ ಮೀಡಿಯಾದಲ್ಲಿ ‘ದಚ್ಚು-ಕಿಚ್ಚ’ ಫ್ಯಾನ್ಸ್ ಡಿಚ್ಚಿ ಡಿಚ್ಚಿ
ಸಾಧು ಶ್ರೀನಾಥ್​

Updated on: Sep 16, 2019 | 7:44 PM

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಇಬ್ಬರೂ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಆದ್ರೆ ಕಾರಣಾಂತರಗಳಿಂದ ಕೆಲ ವರ್ಷಗಳಿಂದ ಇಬ್ಬರ ನಡುವಿನ ಸ್ನೇಹ ಅಷ್ಟಕಷ್ಟೆ. ಇತ್ತೀಚೆಗೆ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಪೈರಸಿಯಾಗಿತ್ತು. ಇದಕ್ಕೆ ಕಾರಣ ದರ್ಶನ್ ಅಭಿಮಾನಿಗಳು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚನ ಫ್ಯಾನ್ಸ್​ ಮುಗಿಬಿದ್ದಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಬಹಿರಂಗವಾಗಿ ಪತ್ರ ಬರೆದಿದ್ದಾರೆ.

ಸುದೀಪ್ ಹೆಸರು ಬಳಸದೇ ಕೆಲ ಘಟನೆಗಳನ್ನ ಉಲ್ಲೇಖಿಸಿ ಪತ್ರ ಬರೆದಿರುವ ದರ್ಶನ್ ಅಭಿಮಾನಿಗಳು, ದರ್ಶನ್ ಹೆಸರು ಬಳಸಿಕೊಂಡು ಬೆಳೆದಿದ್ದೀರಿ, ಈಗ ಪ್ರಚಾರಕ್ಕೂ ಡಿಬಾಸ್ ಹೆಸರು ಬೇಕೇ..? ಎಂದು ಪ್ರಶ್ನಿಸಿದ್ದಾರೆ. ದರ್ಶನ್ ಅಭಿನಯದ ಚಕ್ರವರ್ತಿ, ತಾರಕ್, ಯಜಮಾನ, ಕುರುಕ್ಷೇತ್ರ ಚಿತ್ರಗಳ ಅಪಪ್ರಚಾರ ಆದಾಗ ಫ್ಯಾನ್ಸ್ ಯಾರನ್ನೂ ದೂಷಿಸಲಿಲ್ಲ, ಅಭಿಮಾನಿಗಳನ್ನ ಯುದ್ಧಕ್ಕೆ ಎತ್ತಿ ಕಟ್ಟಲಿಲ್ಲ. ಫ್ಯಾನ್ ವಾರ್ ಪರಿಚಯಿಸಿದ್ದು ನೀವು, ನಿಮ್ಮ ಫ್ಯಾನ್ಸ್ ಎಂದು ಗರಂ ಆಗಿದ್ದಾರೆ.

ನಟ ಗಣೇಶ್​ ಅವರ ಮುಂಗಾರು ಮಳೆ ಬಗ್ಗೆ ಕೆಟ್ಟದಾಗಿ ಮಾತಾಡಿದ್ದೀರಿ. ರಾಜ್​ಕಪ್​ನಲ್ಲಿ ಜಗಳ, ನಟ ಯಶ್ ವಿರುದ್ಧ ಏಕವಚನ ಬಳಕೆ ಮಾಡಿ ಚಿತ್ರರಂಗವನ್ನು 2 ಭಾಗ ಮಾಡಿದ್ದೀರಿ. ನಿಮ್ಮ ಅಭಿಮಾನಿಗಳಿಂದಲೇ ದರ್ಶನ್​ಗೆ ಅವಾಚ್ಯ ಪದಗಳಿಂದ ನಿಂದನೆಯಾಗುತ್ತಿದೆ. ಇದಕ್ಕೆ ನಿಮ್ಮ ಪರೋಕ್ಷ ಬೆಂಬಲ ಇದೆಯೇ? ಎಂದು ಉಲ್ಲೇಖಿಸಿ ದರ್ಶನ್ ಅಭಿಮಾನಿಗಳು ಪತ್ರ ಬರೆದಿದ್ದಾರೆ.

Published On - 7:34 pm, Mon, 16 September 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us