ಮೈಸೂರು: ಅರಮನೆ ನಗರಿಯಲ್ಲಿ ಈಗ ವಿಶ್ವವಿಖ್ಯಾತ ದಸರಾ ಹಬ್ಬದ ಸಡಗರ. ಈ ನಾಡಹಬ್ಬದ ಶುಭ ಸಂದರ್ಭದಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ನಗರದಲ್ಲಿ ಆರಂಭವಾಗಿದೆ. 15 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.
ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18 ಹಾಗೂ ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸಿದ್ಲಿಂಗು ಮತ್ತು ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಈ ಸಿನಿಮಾಗೆ ಌಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ರಚನೆ ಕೂಡ ವಿಜಯ್ ಪ್ರಸಾದ್ ಅವರದ್ದೇ.
ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಕ್ಯೂಟ್ ಹರಿಪ್ರಿಯಾ. ಅರುಣ್ (ಗೊಂಬೆಗಳ ಲವ್ ಖ್ಯಾತಿ), ನಾಗಭೂಷಣ್, ಕಾರುಣ್ಯಾ ರಾಮ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಪೆಟ್ರೋಮ್ಯಾಕ್ಸ್ಗೆ ನಿರಂಜನ್ ಬಾಬೂರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ಹೊಸ್ಮನೆ ಮೂರ್ತಿಯ ಕಲಾ ನಿರ್ದೇಶನ ಹಾಗೂ ವಿನಯ್ರ (ತುಮಕೂರು) ಸಹ ನಿರ್ದೇಶನ ಈ ಚಿತ್ರಕ್ಕಿದೆ.
Published On - 6:02 pm, Mon, 19 October 20