ಪಡ್ಡೆ ಹುಡುಗರ ಕನಸಿನ ಕನ್ಯೆ, ನಟಿ-ರೂಪದರ್ಶಿ ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುದ್ದಿ ಕೇಳಿ ಪಡ್ಡೆ ಹುಡುಗರು ಶ್ಯಾನೆ ಬೇಸರಗೊಂಡಿದ್ದರು. ತಮ್ಮ ಕನಸಿನ ಕನ್ಯೆ ಬಹುಕಾಲದ ಕನಸುಗಳಿಗೆ ತಿಲಾಂಜಲಿ ಹಾಡಿ, ಮತ್ತೊಬ್ಬರ ಪಟ್ಟದ ಅರಸಿಯಾದ್ಳು ಅಂತ ದುಃಖಿಸಿದ್ರು. ಆದರೆ ಮದುವೆಯಾದ ಎರಡೇ ವಾರಕ್ಕೆ ಪೂನಂ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದಾಳೆ. ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂತ ಹಾದಿ ಬದಲಾಯಿಸಿದ್ದಾಳೆ. ಹಾಗಿದ್ರೆ ಆಕೆ ಹೇಳಿದ್ದೇನು ಇಲ್ಲಿದೆ ಓದಿ..
ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ಸಪ್ತಪದಿ ತುಳಿದ್ರು. 29 ಹರೆಯದ ಪೂನಂ ತಮ್ಮ ಮದುವೆ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಮುಂಬೈನ ತಮ್ಮ ನಿವಾಸದಲ್ಲಿ ಕುಟುಂಬಸ್ಥರ ಸಮ್ಮಖದಲ್ಲಿ ಮದುವೆ ಸಮಾರಂಭ ನಡೆದಿತ್ತು. ಹೀಗಾಗಿ ನವ ಜೋಡಿಗಳಿಬ್ಬರೂ ಗೋವಾಗೆ ಹನಿಮೂನ್ಗೆ ಎಂದು ತೆರಳಿದ್ರು.
ವಿವಾಹ ಬಂಧದಿಂದ ಮುಕ್ತ, ಮುಕ್ತ..
ಆಗ ಗೋವಾ ಪೊಲೀಸರು ಸ್ಯಾಮ್ನನ್ನು ಅರೆಸ್ಟ್ ಮಾಡಿ, ಆಮೇಲೆ ಜಾಮೀನು ನೀಡಿದರು. ಇವೆಲ್ಲಾ ಘಟನೆ ಬಳಿಕ ಪೂನಂ ಪಾಂಡೆ ತಮ್ಮ ವಿವಾಹ ಬಂಧನದಿಂದ ಮುಕ್ತರಾಗಲು ಬಯಸಿದ್ದಾರೆ!
ಸ್ಯಾಮ್ ಮತ್ತು ಪೂನಂ ಇಬ್ಬರೂ ಒಬ್ಬರನೊಬ್ಬರು ಪ್ರೀತಿಸಿ ಇಷ್ಟಪಟ್ಟು ಮದುವೆಯಾದವರು. ಆದರೆ ಮದುವೆಯಾದ ಮೇಲೆ ಪ್ರೀತಿ ಕರಗಿದೆ. ಗೋವಾಗೆ ಬಂದ ಮೇಲೆ ಒಂದು ದಿನ ಸ್ಯಾಮ್, ಪೂನಂ ಮೇಲೆ ಹಲ್ಲೆ ನಡೆಸಿದ್ದಾನಂತೆ. ಉಸಿರುಗಟ್ಟಿಸಿ ಸಾಯುವಂತೆ ಮುಖಕ್ಕೆ ಪಂಚ್ ಕೊಟ್ಟಿದ್ದಾನೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ: ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ
ಲೈಂಗಿಕ ಕಿರುಕಳ ಆರೋಪ: ಪಾಪಾ ಪಾಂಡೆ ಗಂಡನಿಗೆ ಬೇಲ್ ಸಿಕ್ತು
Published On - 12:42 pm, Thu, 24 September 20