ನೋಟಿಸ್​ ನೀಡಲು CCB ಅಧಿಕಾರಿಗಳ ಕೈಗೆ ಸಿಗ್ತಿಲ್ವಾ ಌಂಕರ್​ ಅನುಶ್ರೀ?

ಬೆಂಗಳೂರು: ಮಂಗಳೂರಲ್ಲಿ ಡ್ಯಾನ್ಯರ್ ಕಂ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಌಂಕರ್ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್​ ಜಾರಿಯಾಗಿದೆ. ಹೀಗಾಗಿ, ಇಂದು WhatsApp ಮೂಲಕ ಌಂಕರ್ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿಮಾಡಿರುವ ಜೊತೆಗೆ ಅಧಿಕಾರಿಗಳ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ. 4-5 ಸಿಸಿಬಿ ಪೊಲೀಸರ ತಂಡವು ಅನುಶ್ರೀ ನಿವಾಸಕ್ಕೆ ಆಗಮಿಸಿತು. ಆದರೆ, ಮನೆಯಲ್ಲಿ ಅನುಶ್ರೀ ಸಿಗದ ಕಾರಣ ಬೆಂಗಳೂರಿನ ಅನುಶ್ರೀ ಕಚೇರಿಯತ್ತ ಸಿಸಿಬಿ ತಂಡವು ತೆರಳಿದೆ. ‘ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್​ […]

ನೋಟಿಸ್​ ನೀಡಲು CCB ಅಧಿಕಾರಿಗಳ ಕೈಗೆ ಸಿಗ್ತಿಲ್ವಾ ಌಂಕರ್​ ಅನುಶ್ರೀ?
KUSHAL V

| Edited By: sadhu srinath

Sep 24, 2020 | 4:19 PM

ಬೆಂಗಳೂರು: ಮಂಗಳೂರಲ್ಲಿ ಡ್ಯಾನ್ಯರ್ ಕಂ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಌಂಕರ್ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್​ ಜಾರಿಯಾಗಿದೆ.

ಹೀಗಾಗಿ, ಇಂದು WhatsApp ಮೂಲಕ ಌಂಕರ್ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿಮಾಡಿರುವ ಜೊತೆಗೆ ಅಧಿಕಾರಿಗಳ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ.

4-5 ಸಿಸಿಬಿ ಪೊಲೀಸರ ತಂಡವು ಅನುಶ್ರೀ ನಿವಾಸಕ್ಕೆ ಆಗಮಿಸಿತು. ಆದರೆ, ಮನೆಯಲ್ಲಿ ಅನುಶ್ರೀ ಸಿಗದ ಕಾರಣ ಬೆಂಗಳೂರಿನ ಅನುಶ್ರೀ ಕಚೇರಿಯತ್ತ ಸಿಸಿಬಿ ತಂಡವು ತೆರಳಿದೆ.

‘ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್​ ಬಂದಿಲ್ಲ’ ಈ ನಡುವೆ ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್​ ಬಂದಿಲ್ಲ ಎಂದು ಟಿವಿ 9ಗೆ ಌಂಕರ್​ ಅನುಶ್ರೀ ಪ್ರತಿಕ್ರಿಯಿಸಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ನಮ್ಮ ಮನೆಗೆ ಯಾರೂ ಬಂದಿಲ್ಲ. ಪ್ರತೀಕ್ ಶೆಟ್ಟಿ ಮತ್ತು ಕಿಶೋರ್​ ಇಬ್ಬರೂ ನನಗೆ ಪರಿಚಯ. ನಾನು ಇವರ ಯಾವುದೇ ಪಾರ್ಟಿಗಳಿಗೆ ಹೋಗಿರಲಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ, ನನಗೆ ಯಾವುದೇ ಆತಂಕವಿಲ್ಲ. ಎಂದು ಅನುಶ್ರೀ ಹೇಳಿದ್ದಾರೆ.

ಪ್ರತೀಕ್ ಶೆಟ್ಟಿ ಮತ್ತು ಕಿಶೋರ್​ಗೆ ಕಾಲ್ ಮಾಡಿ ವರ್ಷಗಳೇ ಆಗಿವೆ. ಕಳೆದ 2-3 ವರ್ಷಗಳಿಂದ ನಾನು ಅವರನ್ನು ಭೇಟಿಯಾಗಿಲ್ಲ. ಪ್ರತೀಕ್ ಶೆಟ್ಟಿ ಮತ್ತು ಕಿಶೋರ್ ವ್ಯವಹಾರಗಳ ಬಗ್ಗೆ ಮಾಹಿತಿ ಇಲ್ಲ. ಸಿಸಿಬಿ ನೋಟಿಸ್​ ಸಿಕ್ಕ ಕೂಡಲೇ ವಿಚಾರಣೆಗೆ ಹಾಜರಾಗ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada