AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂದಳು ಪೂನಂ ಪಾಂಡೆ

ಪಡ್ಡೆ ಹುಡುಗರ ಕನಸಿನ ಕನ್ಯೆ, ನಟಿ-ರೂಪದರ್ಶಿ ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುದ್ದಿ ಕೇಳಿ ಪಡ್ಡೆ ಹುಡುಗರು ಶ್ಯಾನೆ ಬೇಸರಗೊಂಡಿದ್ದರು. ತಮ್ಮ ಕನಸಿನ ಕನ್ಯೆ ಬಹುಕಾಲದ ಕನಸುಗಳಿಗೆ ತಿಲಾಂಜಲಿ ಹಾಡಿ, ಮತ್ತೊಬ್ಬರ ಪಟ್ಟದ ಅರಸಿಯಾದ್ಳು ಅಂತ ದುಃಖಿಸಿದ್ರು. ಆದರೆ ಮದುವೆಯಾದ ಎರಡೇ ವಾರಕ್ಕೆ ಪೂನಂ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದಾಳೆ. ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂತ […]

ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂದಳು ಪೂನಂ ಪಾಂಡೆ
ಆಯೇಷಾ ಬಾನು
|

Updated on:Sep 24, 2020 | 1:44 PM

Share

ಪಡ್ಡೆ ಹುಡುಗರ ಕನಸಿನ ಕನ್ಯೆ, ನಟಿ-ರೂಪದರ್ಶಿ ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ತಮ್ಮ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುದ್ದಿ ಕೇಳಿ ಪಡ್ಡೆ ಹುಡುಗರು ಶ್ಯಾನೆ ಬೇಸರಗೊಂಡಿದ್ದರು. ತಮ್ಮ ಕನಸಿನ ಕನ್ಯೆ ಬಹುಕಾಲದ ಕನಸುಗಳಿಗೆ ತಿಲಾಂಜಲಿ ಹಾಡಿ, ಮತ್ತೊಬ್ಬರ ಪಟ್ಟದ ಅರಸಿಯಾದ್ಳು ಅಂತ ದುಃಖಿಸಿದ್ರು. ಆದರೆ ಮದುವೆಯಾದ ಎರಡೇ ವಾರಕ್ಕೆ ಪೂನಂ ಗಂಡನ ಜೊತೆ ಕಿರಿಕ್ ಮಾಡಿಕೊಂಡಿದ್ದಾಳೆ. ನಾನು ಮತ್ತೆ ಒಂಟಿ ಹಕ್ಕಿ! ಇನ್ನು ಅವ್ನ ಜೊತೆ ಬಾಳೋಲ್ಲ ಅಂತ ಹಾದಿ ಬದಲಾಯಿಸಿದ್ದಾಳೆ. ಹಾಗಿದ್ರೆ ಆಕೆ ಹೇಳಿದ್ದೇನು ಇಲ್ಲಿದೆ ಓದಿ.. ಅವ್ನ ಜೊತೆ ಬಾಳೋಲ್ಲ: ಪೂನಂ ಪಾಂಡೆ ಸೆಪ್ಟೆಂಬರ್ 10 ರಂದು ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ಸಪ್ತಪದಿ ತುಳಿದ್ರು. 29 ಹರೆಯದ ಪೂನಂ ತಮ್ಮ ಮದುವೆ ಸುದ್ದಿಯನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಮುಂಬೈನ ತಮ್ಮ ನಿವಾಸದಲ್ಲಿ ಕುಟುಂಬಸ್ಥರ ಸಮ್ಮಖದಲ್ಲಿ ಮದುವೆ ಸಮಾರಂಭ ನಡೆದಿತ್ತು. ಹೀಗಾಗಿ ನವ ಜೋಡಿಗಳಿಬ್ಬರೂ ಗೋವಾಗೆ ಹನಿಮೂನ್​ಗೆ ಎಂದು ತೆರಳಿದ್ರು.

ವಿವಾಹ ಬಂಧದಿಂದ ಮುಕ್ತ, ಮುಕ್ತ.. ಇದೇ ವೇಳೆ ಪೂನಂ ಪಾಂಡೆಗೆ ಸಿನಿಮಾದ ಶೂಟಿಂಗ್ ಸಹ ಗೋವಾದಲ್ಲೆ ಇತ್ತು. ಈ ವೇಳೆ ಗಂಡ ಸ್ಯಾಮ್, ಪೂನಂ ಸೆಟ್​ಗೆ ಬಂದು ಅಸಭ್ಯವಾಗಿ ವರ್ತಿಸಿದ. ನನಗೆ ಕಿರುಕುಳ ನೀಡಿ, ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾನೆ ಎಂದು ಸೆಪ್ಟೆಂಬರ್ 21ರಂದು ಪೂನಂ ಪೊಲೀಸರಿಗೆ ದೂರು ನೀಡಿದ್ದಳು.

ಆಗ ಗೋವಾ ಪೊಲೀಸರು ಸ್ಯಾಮ್​ನನ್ನು ಅರೆಸ್ಟ್ ಮಾಡಿ, ಆಮೇಲೆ ಜಾಮೀನು ನೀಡಿದರು. ಇವೆಲ್ಲಾ ಘಟನೆ ಬಳಿಕ ಪೂನಂ ಪಾಂಡೆ ತಮ್ಮ ವಿವಾಹ ಬಂಧನದಿಂದ ಮುಕ್ತರಾಗಲು ಬಯಸಿದ್ದಾರೆ! ಸ್ಯಾಮ್​ ಮತ್ತು ಪೂನಂ ಇಬ್ಬರೂ ಒಬ್ಬರನೊಬ್ಬರು ಪ್ರೀತಿಸಿ ಇಷ್ಟಪಟ್ಟು ಮದುವೆಯಾದವರು. ಆದರೆ ಮದುವೆಯಾದ ಮೇಲೆ ಪ್ರೀತಿ ಕರಗಿದೆ. ಗೋವಾಗೆ ಬಂದ ಮೇಲೆ ಒಂದು ದಿನ ಸ್ಯಾಮ್, ಪೂನಂ ಮೇಲೆ ಹಲ್ಲೆ ನಡೆಸಿದ್ದಾನಂತೆ. ಉಸಿರುಗಟ್ಟಿಸಿ ಸಾಯುವಂತೆ ಮುಖಕ್ಕೆ ಪಂಚ್ ಕೊಟ್ಟಿದ್ದಾನೆ.

ತಲೆ ಕೂದಲನ್ನು ಎಳೆದು ಮಂಚದ ಮೂಲೆಯ ಗೋಡೆಗೆ ಹೊಡೆದಿದ್ದಾನಂತೆ. ಹೇಗೆಂದರೆ ಹಾಗೆ, ಮನ ಬಂದಂತೆ ಥಳಿಸಿದ್ದಾನೆ. ನಂತರ ಹೇಗೂ ಪೂನಂ ಸ್ಯಾಮ್​ನಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಬಂದಿದ್ದಾಳೆ. ಈ ವೇಳೆ ಹೋಟೆಲ್ ಸಿಬ್ಬಂದಿ ಪೊಲೀಸರನ್ನು ಕರೆಸಿ ಸ್ಯಾಮ್​ನನ್ನು ಬಂಧಿಸಿದ್ದಾರೆ. ಪೂನಂ ಸ್ಯಾಮ್ ವಿರುದ್ಧ ದೂರು ದಾಖಲಿಸಿದೆ ಎಂದು ತಮ್ಮ ಮನದಾಳದ ನೋವನ್ನು ಪೂನಂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ: ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ ಲೈಂಗಿಕ ಕಿರುಕಳ ಆರೋಪ: ಪಾಪಾ ಪಾಂಡೆ ಗಂಡನಿಗೆ ಬೇಲ್ ಸಿಕ್ತು

Published On - 12:42 pm, Thu, 24 September 20

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!