ಕೊರೊನಾ ಹೊಡೆತದಿಂದಾಗಿ ಬಹುತೇಕ ಸ್ಟಾರ್ಗಳು ತಮ್ಮ ಮನೆಯನ್ನೇ ಜಿಮ್ ಮಾಡಿಕೊಂಡಿದ್ದಾರೆ. ಮನೆಯಲ್ಲೇ ವರ್ಕೌಟ್ ಮಾಡ್ತಿದ್ದಾರೆ. ಅದೇ ರೀತಿ ಲಾಕ್ಡೌನ್ ಎಫೆಕ್ಟ್ನಿಂದ ಮನೆಯಲ್ಲೇ ಇರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತಮ್ಮ ಹೆಚ್ಚು ಸಮಯವನ್ನು ವರ್ಕೌಟ್ ಮಾಡುವುದರಲ್ಲಿ ಕಳೆಯುತ್ತಿದ್ದಾರೆ.
ಅಭಿಮಾನಿ ದೇವರುಗಳಿಗೆ ಸ್ಫೂರ್ತಿ!
ಪುನೀತ್ ತಾವು ದೇಹ ಹುರಿಗೊಳಿಸುವ ವಿಡಿಯೋಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಸ್ಟ್ ಮಾಡುತ್ತಿರುತ್ತಾರೆ. ಇಂದು ಕೂಡ ಅವರು ವರ್ಕೌಟ್ ಮಾಡುವ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪವರ್ ಸ್ಟಾರ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ.. ಪವರ್ ಸ್ಟಾರ್ ಅಪ್ಪು ಅವರಂತೆ ನಾವೂ ವರ್ಕೌಟ್ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ!
Workout of the day pic.twitter.com/P61ZCieZFw
— Puneeth Rajkumar (@PuneethRajkumar) June 3, 2020
Published On - 2:29 pm, Wed, 3 June 20