ಕೊರೊನಾ ಸಂಕಷ್ಟದಲ್ಲಿ ಮನೆಗೆಲಸದ ಮಹಿಳೆಗೆ ರಾಧಿಕಾ ಏನು ಮಾಡಿದರು ನೋಡಿ

|

Updated on: Jul 03, 2020 | 10:10 AM

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ಲಾಕ್​ಡೌನ್ ಅವಧಿಯಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡ್ತಾನೇ ಇರ್ತಾರೆ. ತಮ್ಮಿಬ್ಬರ ಮಕ್ಕಳ ಆರೈಕೆಯಲ್ಲಿ ಫುಲ್ ಬಿಜಿ ಇದ್ರೂ ಹೊಸ ರೆಸಿಪಿಗಳನ್ನು ಪ್ರಯತ್ನಿಸುತ್ತಿರುತ್ತಾರೆ. ಯಶ್ ಬರ್ತೆಡೆಗೆ ಸ್ವತಃ ಅವರೇ ಕೇಕ್ ತಯಾರಿಸಿದ್ದರು. ಮಗಳಿಗೆ 18 ತಿಂಗಳು ತುಂಬಿದಾಗ ಮಾವಿನ ಹಣ್ಣಿನಿಂದ ಚೀಸ್‌ ಕೇಕ್ ಮಾಡಿದ್ದರು. ಈ ರೀತಿ ಒಂದಲ್ಲ ಒಂದು ಹೊಸ ಪ್ರಯತ್ನಗಳನ್ನು ಮಾಡುತ್ತ ವಿಶೇಷ ದಿನಗಳಲ್ಲಿ ಕೇಕ್ ತಯಾರಿಸುತ್ತಾರೆ. ಅದೇ ರೀತಿ ರಾಧಿಕಾ ಪಂಡಿತ್ ವಿಶೇಷ ವ್ಯಕ್ತಿಗಾಗಿ ಅವರ […]

ಕೊರೊನಾ ಸಂಕಷ್ಟದಲ್ಲಿ ಮನೆಗೆಲಸದ ಮಹಿಳೆಗೆ ರಾಧಿಕಾ ಏನು ಮಾಡಿದರು ನೋಡಿ
Follow us on

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ಲಾಕ್​ಡೌನ್ ಅವಧಿಯಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡ್ತಾನೇ ಇರ್ತಾರೆ. ತಮ್ಮಿಬ್ಬರ ಮಕ್ಕಳ ಆರೈಕೆಯಲ್ಲಿ ಫುಲ್ ಬಿಜಿ ಇದ್ರೂ ಹೊಸ ರೆಸಿಪಿಗಳನ್ನು ಪ್ರಯತ್ನಿಸುತ್ತಿರುತ್ತಾರೆ. ಯಶ್ ಬರ್ತೆಡೆಗೆ ಸ್ವತಃ ಅವರೇ ಕೇಕ್ ತಯಾರಿಸಿದ್ದರು.

ಮಗಳಿಗೆ 18 ತಿಂಗಳು ತುಂಬಿದಾಗ ಮಾವಿನ ಹಣ್ಣಿನಿಂದ ಚೀಸ್‌ ಕೇಕ್ ಮಾಡಿದ್ದರು. ಈ ರೀತಿ ಒಂದಲ್ಲ ಒಂದು ಹೊಸ ಪ್ರಯತ್ನಗಳನ್ನು ಮಾಡುತ್ತ ವಿಶೇಷ ದಿನಗಳಲ್ಲಿ ಕೇಕ್ ತಯಾರಿಸುತ್ತಾರೆ. ಅದೇ ರೀತಿ ರಾಧಿಕಾ ಪಂಡಿತ್ ವಿಶೇಷ ವ್ಯಕ್ತಿಗಾಗಿ ಅವರ ಜನ್ಮದಿನದಂದು ಕೇಸ್ ತಯಾರಿಸಿದ್ದಾರೆ.

ಜೊತೆಗೆ ರಾಧಿಕಾ ಪಂಡಿತ್ ಅವರ ಪ್ರೀತಿಗೆ ಪಾತ್ರರಾದ ತಮ್ಮ ಮನೆಗೆಲಸದ ಗೀತಾ ಎಂಬುವವರನ್ನು ಪರಿಚಯ ಮಾಡಿಸಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೂನ್ ಎರಡರಂದು ಗೀತಾರ ಜನ್ಮದಿನ ಹೀಗಾಗಿ ಅಂದು ಅವರಿಗಾಗಿ ರಾಧಿಕಾ ಪಂಡಿತ್ ಕೇಕ್ ತಯಾರಿಸಿ ಶುಭಾಸಯ ಕೂರಿದ್ದಾರೆ. ಕೇಕ್ ಮತ್ತು ಗೀತಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇವರು ಗೀತಾ.. ಕಳೆದ ಎಂಟು ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತ, ನಮ್ಮೆನ್ನೆಲ್ಲ ಆರೈಕೆ ಮಾಡಿದ್ದಾರೆ. ಅವರೀಗ ನಮ್ಮ ಕುಟುಂಬದವರೇ ಆಗಿಬಿಟ್ಟಿದ್ದಾರೆ. ನಮ್ಮನ್ನು ತುಂಬ ಚೆನ್ನಾಗಿ ನೋಡಿಕೊಂಡಿದ್ದಾರೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಅವರನ್ನು ತುಸು ಹೆಚ್ಚೇ ಜಾಗರೂಕತೆಯಿಂದ ನಾವು ನೋಡಿಕೊಳ್ಳಬೇಕು. ಅದರಲ್ಲಿಯೂ ಈ ಸಂದರ್ಭದಲ್ಲಿ ಅವರ ಬಗ್ಗೆ ನಿರ್ಲಕ್ಷ್ಯ ತೋರಿಸುವುದು ಅಥವಾ ಮರೆಯಬಾರದು. ಅವರು ಬಹಳ ಮೌಲ್ಯಯುತ ವ್ಯಕ್ತಿಗಳು’ ಎಂದು ರಾಧಿಕಾ ಬರೆದುಕೊಂಡಿದ್ದಾರೆ.