ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಬಗ್ಗೆ CCB ಅಧಿಕಾರಿಗಳು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ಸ್ಪೆಕ್ಟರ್ ಮೊಹಮ್ಮದ್ ಸಿರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು ಈ ವೇಳೆ ಇನ್ಸ್ಪೆಕ್ಟರ್ ಅಂಜುಮಾಲಾ ನಾಯಕ್ ಸಹ ಇರಲಿದ್ದಾರೆ ಎಂದು ತಿಳಿದುಬಂದಿದೆ.
ರಾಗಿಣಿ ಹೆಸರಿನಲ್ಲಿರುವ ಆಸ್ತಿ ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ CCB ಅಧಿಕಾರಿಗಳಿಗೆ ನಟಿ KPLನ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಸಹ ಮಾಲೀಕತ್ವ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ, KPL ತಂಡಕ್ಕೆ ಬಂಡವಾಳ ಹೂಡಿರುವ ಬಗ್ಗೆ ಸಹ ತಿಳಿದುಬಂದಿದೆ. ಹೀಗಾಗಿ, ಬಂಡವಾಳ ಮೂಲದ ಬಗ್ಗೆ CCB ಯಿಂದ ಮಾಹಿತಿ ಸಂಗ್ರಹವಾಗುತ್ತಿದೆ ಎಂದು ಹೇಳಲಾಗಿದೆ.
ಈ ಹಿಂದೆ, KPL ಬಳ್ಳಾರಿ ಟಸ್ಕರ್ಸ್ ತಂಡದ ಹಲವು ಆಟಗಾರರನ್ನು ಮ್ಯಾಚ್ಫಿಕ್ಸಿಂಗ್ ಪ್ರಕರಣದಲ್ಲಿ CCB ಅಧಿಕಾರಿಗಳು ಬಂಧಿಸಿದ್ದರು. ಹಾಗಾಗಿ, ಮ್ಯಾಚ್ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಆ ಕೇಸ್ನ ತನಿಖಾಧಿಕಾರಿಗಳು ರಾಗಿಣಿಯವರನ್ನು ಪ್ರಶ್ನೆಮಾಡುವ ಸಾಧ್ಯತೆ ಸಹ ಇದೆ ಎಂದು ತಿಳಿದುಬಂದಿದೆ.