ರಾಗಿಣಿ ದ್ವಿವೇದಿ ಕಸ್ಟಡಿ ಅವಧಿ ಇಂದು ಅಂತ್ಯ: ತುಪ್ಪದ ಬೆಡಗಿಗೆ ಜೈಲಾ? ಮತ್ತೆ ಸಿಸಿಬಿ ಕಸ್ಟಡಿನಾ?

ಬೆಂಗಳೂರು: ಮಾದಕ ದ್ರವ್ಯ ಜಾಲದೊಂದಿಗೆ ಶಾಮೀಲಾದ ಆರೋಪ ಹೊತ್ತು ಪೊಲೀಸ್ ಕಸ್ಟಡಿಯಲ್ಲಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಇಂದು ಜೈಲು ಸೇರ್ತಾರಾ. ರಾಗಿಣಿಗೆ ಕೋರ್ಟ್ ನಲ್ಲಿ ಜಾಮೀನು ಸಿಗೋದು ಸುಲಭಾನಾ ಕಷ್ಟಾನಾ. ಗಂಭೀರ ಪ್ರಕರಣ ಎದುರಿಸ್ತಿರೋ ರಾಗಿಣಿ ಭವಿಷ್ಯ ಏನು. ಅದೆಲ್ಲದಕ್ಕೂ ಒಂದು ಉತ್ತರ ಇವತ್ತು ಸಿಗೋ ಸಾಧ್ಯತೆ ಇದೆ. ಇವತ್ತು ನಟಿ ರಾಗಿಣಿಗೆ ಸಿಗೋದಿಲ್ವಾ ಜಾಮೀನು? ಮಾದಕ ಲೋಕದ ನಂಟು ಆರೋಪದಲ್ಲಿ ಸಿಸಿಬಿ ಕಸ್ಟಡಿಯಲ್ಲಿರೋ ನಟಿ ರಾಗಿಣಿ ದ್ವಿವೇದಿ ಕಸ್ಟಡಿ ಅವಧಿ ಇವತ್ತು ಅಂತ್ಯವಾಗಲಿದೆ. ಇದೇ ವೇಳೆ, […]

ರಾಗಿಣಿ ದ್ವಿವೇದಿ ಕಸ್ಟಡಿ ಅವಧಿ ಇಂದು ಅಂತ್ಯ: ತುಪ್ಪದ ಬೆಡಗಿಗೆ ಜೈಲಾ? ಮತ್ತೆ ಸಿಸಿಬಿ ಕಸ್ಟಡಿನಾ?
Follow us
ಆಯೇಷಾ ಬಾನು
|

Updated on: Sep 07, 2020 | 6:52 AM

ಬೆಂಗಳೂರು: ಮಾದಕ ದ್ರವ್ಯ ಜಾಲದೊಂದಿಗೆ ಶಾಮೀಲಾದ ಆರೋಪ ಹೊತ್ತು ಪೊಲೀಸ್ ಕಸ್ಟಡಿಯಲ್ಲಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಇಂದು ಜೈಲು ಸೇರ್ತಾರಾ. ರಾಗಿಣಿಗೆ ಕೋರ್ಟ್ ನಲ್ಲಿ ಜಾಮೀನು ಸಿಗೋದು ಸುಲಭಾನಾ ಕಷ್ಟಾನಾ. ಗಂಭೀರ ಪ್ರಕರಣ ಎದುರಿಸ್ತಿರೋ ರಾಗಿಣಿ ಭವಿಷ್ಯ ಏನು. ಅದೆಲ್ಲದಕ್ಕೂ ಒಂದು ಉತ್ತರ ಇವತ್ತು ಸಿಗೋ ಸಾಧ್ಯತೆ ಇದೆ.

ಇವತ್ತು ನಟಿ ರಾಗಿಣಿಗೆ ಸಿಗೋದಿಲ್ವಾ ಜಾಮೀನು? ಮಾದಕ ಲೋಕದ ನಂಟು ಆರೋಪದಲ್ಲಿ ಸಿಸಿಬಿ ಕಸ್ಟಡಿಯಲ್ಲಿರೋ ನಟಿ ರಾಗಿಣಿ ದ್ವಿವೇದಿ ಕಸ್ಟಡಿ ಅವಧಿ ಇವತ್ತು ಅಂತ್ಯವಾಗಲಿದೆ. ಇದೇ ವೇಳೆ, ಜಾಮೀನು ಕೋರಿ ರಾಗಿಣಿ ಸಲ್ಲಿಸಿದ್ದ ಅರ್ಜಿಯೂ ಇವತ್ತು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಇವತ್ತು ಬೇಲ್‌ ಸಿಗುತ್ತಾ? ಸಿಗೋದಿಲ್ವಾ ಅನ್ನೋ ಟೆನ್ಷನ್‌ ರಾಗಿಣಿಗೆ ಶುರುವಾಗಿದೆ. ಆದ್ರೆ, ಇವತ್ತು ರಾಗಿಣಿಗೆ ಬಹುತೇಕ ಜಾಮೀನು ನೀಡೋ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ. ಯಾಕಂದ್ರೆ ಕೋರ್ಟ್‌ ರೂಲ್ಸ್ ಅದನ್ನ ಹೇಳ್ತಿದೆ.

ಹೌದು.. ಇದೇ ಮೊದಲ ಬಾರಿಗೆ ಕೋರ್ಟ್‌ ಮುಂದೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ, ಮೊದಲಿಗೆ ಸಿಸಿಬಿ ಪೊಲೀಸರಿಗೆ ಕೋರ್ಟ್‌ ನೋಟಿಸ್‌ ನೀಡಿ, ವಿಚಾರಣೆ ಮುಂದೂಡುವ ಸಾಧ್ಯತೆ ಇದೆ. ಇದ್ರಿಂದ, ರಾಗಿಣಿಗೆ ಜಾಮೀನು ಸಿಗೋದು ಬಹುತೇಕ ಡೌಟ್‌ ಆಗಿದ್ದು, ಮಧ್ಯಂತರ ಜಾಮೀನಿಗೂ ವಕೀಲರು ಮನವಿ ಮಾಡಲಿದ್ದಾರೆ.

ವಿಚಾರಣೆ ಮುಂದೂಡಿದ್ರೆ ರಾಗಿಣಿಗೆ ಮತ್ತೆ ಸಮಸ್ಯೆ! ಇವತ್ತು ನಟಿ ರಾಗಿಣಿಯ ಸಿಸಿಬಿ ಕಸ್ಟಡಿ ಅವಧಿಯೂ ಅಂತ್ಯವಾಗುತ್ತೆ. ಆದ್ರೆ, ಕೋರ್ಟ್‌ ರಾಗಿಣಿ ಸಲ್ಲಿಸಿರೋ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ್ರೆ, ನ್ಯಾಯಾಂಗ ಬಂಧನಕ್ಕೆ ನೀಡಬಹುದು. ಅಥವಾ ಮತ್ತೆ ಸಿಸಿಬಿ ಕಸ್ಟಡಿಗೆ ಕೊಡಬಹುದು. ಈಗಾಗ್ಲೇ, ರಾಗಿಣಿ ತನಿಖೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಸಿಸಿಬಿ ಪೊಲೀಸರೇ ಹೇಳ್ತಿದ್ದಾರೆ. ಹೀಗಾಗಿ, ಮತ್ತಷ್ಟು ವಿಚಾರಣೆ ನಡೆಸಲು ಕಸ್ಟಡಿಗೆ ಕೇಳಿದ್ರೆ, ರಾಗಿಣಿಗೆ ಅದೇ ಸಾಂತ್ವನ ಕೇಂದ್ರದಲ್ಲೇ ಬಂಧಿಯಾಗೋದು ತಪ್ಪಿದ್ದಲ್ಲ.

‘ಬಂಗಾರಿ’ಗೆ ಗಂಡಾಂತರ ತರುತ್ತಾ FIR ಸೆಕ್ಷನ್‌ಗಳು? ಯೆಸ್.. ಡ್ರಗ್ಸ್ ಜಾಲದ ನಂಟಿನಲ್ಲಿ ಸಿಲುಕಿರೋ ರಾಗಿಣಿ ಮೇಲೆ ಸಿಸಿಬಿ ಪೊಲೀಸರು ಹಾಕಿರೋ ಸೆಕ್ಷನ್‌ಗಳು, ಆಕೆಗೆ ಗಂಡಾಂತರ ತರಬಹುದು. ಯಾಕಂದ್ರೆ, ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್‌ಗಳ ಅಡಿ ಕನಿಷ್ಠ 10 ರಿಂದ ಗರಿಷ್ಟ 20 ವರ್ಷ ಕಠಿಣ ಶಿಕ್ಷೆಗೆ ಅವಕಾಶವಿದೆ. ಹಾಗಾದ್ರೆ, ರಾಗಿಣಿ ವಿರುದ್ಧ ದಾಖಲಿಸಿರೋ ಎನ್‌ಡಿಪಿಎಸ್‌ ಸೆಕ್ಷನ್‌ಗಳು ಏನನ್ನ ಹೇಳುತ್ತೆ ಅನ್ನೋದ್ರ ವಿವರ ಇಲ್ಲಿದೆ.

ರಾಗಿಣಿಗೆ ಸೆಕ್ಷನ್ ಸಂಕಟ! NDPS ಸೆಕ್ಷನ್ 21 ತಯಾರಿಸಿದ ಮಾದಕ ವಸ್ತು ಅಥವಾ ದ್ರವ್ಯ ಇಟ್ಟುಕೊಳ್ಳುವುದು, ಮಾರಾಟ, ಖರೀದಿ, ಸಾಗಾಟ ಮಾಡಿದರೆ ಅದು ಅಪರಾಧ NDPS ಸೆಕ್ಷನ್ 21C ಇಂತಹ ಅಕ್ರಮ ಮಾದಕ ವಸ್ತು ಅಥವಾ ದ್ರವ್ಯ ಹೆಚ್ಚಿನ ಪ್ರಮಾಣದಲ್ಲಿದ್ದರೆ ಕನಿಷ್ಟ 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ NDPS ಸೆಕ್ಷನ್ 27 ಅಕ್ರಮವಾಗಿ ಮಾದಕ ವಸ್ತು ಅಥವಾ ದ್ರವ್ಯ ಸಾಗಾಟ, ಹಣಕಾಸು ಹೂಡಿಕೆ, ಅಪರಾಧಿಗಳ ರಕ್ಷಣೆ ಮಾಡಿದರೆ ಕನಿಷ್ಟ 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ NDPS ಸೆಕ್ಷನ್ 27B ಅಕ್ರಮ ಮಾದಕ ದ್ರವ್ಯ ಅಥವಾ ವಸ್ತು ವ್ಯವಹಾರದಿಂದ ಬಂದ ಹಣದಿಂದ ಆಸ್ತಿ, ಸಂಪತ್ತು ಗಳಿಕೆ ಮಾಡುವುದೂ ಅಪರಾಧ. ಇಂತಹ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ.. NDPS ಸೆಕ್ಷನ್ 29 ಅಕ್ರಮ ದ್ರವ್ಯ ಜಾಲದೊಂದಿಗೆ ಸೇರಿ ಅಪರಾಧಿಕ ಒಳಸಂಚು ನಡೆಸುವುದು ಕೂಡಾ ಅಪರಾಧ

ಹೀಗೆ ರಾಗಿಣಿ ವಿರುದ್ಧ ಇಂತಹ ಗಂಭೀರ ಆರೋಪಗಳನ್ನ ಸಿಸಿಬಿ ಪೊಲೀಸರು ಎಫ್‌ಐಆರ್‌ನಲ್ಲಿ ಹೊರಿಸಿದ್ದಾರೆ. ಇದು ರಾಗಿಣಿಗೆ ಮತ್ತು ಸಿಸಿಬಿ ಇಬ್ಬರಿಗೂ ಸವಾಲಾಗಲಿದೆ.

ಸೆಕ್ಷನ್‌ಗಳ ಸವಾಲು! ರಾಗಿಣಿ ವಿರುದ್ಧ ಸಿಸಿಬಿ ಪೊಲೀಸರು ಗಂಭೀರ ಸೆಕ್ಷನ್‌ಗಳನ್ನ ಉಲ್ಲೇಖಿಸಿರೋದ್ರಿಂದ, ಸರ್ಕಾರಿ ಅಭಿಯೋಜಕರ ಆಕ್ಷೇಪಣೆ ಪರಿಗಣಿಸಿಯೇ ಕೋರ್ಟ್ ವಿಚಾರಣೆ ನಡೆಸಬಹುದು. ಆದ್ರೆ, ಈ ಕೇಸ್‌ ಸಿಸಿಬಿ ಪಾಲಿಗೆ ಸುಲಭವಲ್ಲ.. ಕಠಿಣ ಕೇಸ್‌ ಹಾಕಿದಷ್ಟೂ ಸಾಕ್ಷ್ಯ ಒದಗಿಸುವ ಸವಾಲು ಇದೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಆರೋಪ ಸಾಬೀತಾಗುವುದೇ ಅಪರೂಪ.

ಇದೇ ಕಾರಣಕ್ಕೆ, ಸಿಸಿಬಿ ಪೊಲೀಸರಿಗೂ ಇದು ದೊಡ್ಡ ಸವಾಲಾಗಲಿದೆ. ಒಟ್ನಲ್ಲಿ, ಇವತ್ತು ವಿಚಾರಣೆ ಮುಂದೂಡಿದ್ರೂ ರಾಗಿಣಿಗೆ ಸಂಕಷ್ಟ, ಸಿಸಿಬಿ ಕಸ್ಟಡಿಗೆ ಕೊಟ್ರೂ ಸಂಕಷ್ಟ. ಜಾಮೀನು ಸಿಗೋವರೆಗೂ ರಾಗಿಣಿ ಜೈಲು ಸೇರಬೇಕು ಇಲ್ಲಾ ಸಾಂತ್ವನ ಕೇಂದ್ರದಲ್ಲೇ ಬಂಧಿಯಾಗಿ ಕೂರಬೇಕು.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ