ನಟಿ ರಾಗಿಣಿ ಕೊಟ್ಟ ಹೇಳಿಕೆಯಿಂದ ಪೊಲೀಸರಿಗೆ ಶುರುವಾಯ್ತು ಟೆನ್ಷನ್‌!

ನಟಿ ರಾಗಿಣಿ ಕೊಟ್ಟ ಹೇಳಿಕೆಯಿಂದ ಪೊಲೀಸರಿಗೆ ಶುರುವಾಯ್ತು ಟೆನ್ಷನ್‌!

[lazy-load-videos-and-sticky-control id=”qE4XElPN3gY”]

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಗಿಣಿ ದ್ವಿವೇದಿ ಕೊಟ್ಟಿರುವ ಹೇಳಿಕೆಯಿಂದ ಸಿಸಿಬಿಗೆ ತಲೆನೋವಾಗಿದೆ. ಸ್ಯಾಂಡಲ್ ವುಡ್ ನಶೆ ನಂಟಿನ ಜಾಡು ಹಿಡಿದ ಖಾಕಿಗೆ ಟೆನ್ಷನ್ ಶುರುವಾಗಿದೆ.

ಹೌದು ನಟಿ ರಾಗಿಣಿ ದ್ವಿವೇದಿ ಕೊಟ್ಟಿರುವ ಹೇಳಿಕೆಯಿಂದ ಪೊಲೀಸರಿಗೆ ಮಂಡೆ ಬಿಸಿಯಾಗಿದೆ. ತಾನು ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸಿಲ್ಲ ಎಂದು ರಾಗಿಣಿ ಪಟ್ಟು ಹಿಡಿದಿದ್ದಾರೆ. ಆದರೆ ರಾಗಿಣಿ ಡ್ರಗ್ಸ್ ಸೇವನೆಯ ಬಗ್ಗೆ ಅವರ ಆಪ್ತ ರವಿಶಂಕರ್ ಹೇಳಿಕೆ ನೀಡಿದ್ದರು. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ 2ನೇ ಆರೋಪಿಯಾಗಿರುವ ನಟಿ ರಾಗಿಣಿ ದ್ವಿವೇದಿ ಸಿಸಿಬಿ ವಿಚಾರಣೆ ವೇಳೆ ಡ್ರಗ್ಸ್ ಸೇವಿಸಿಲ್ಲ ಎಂದಿದ್ದಾರೆ. ರವಿಶಂಕರ್ ಹೇಳಿಕೆ ಮತ್ತು ರಾಗಿಣಿ ಹೇಳಿಕೆ ಬೇರೆ ಬೇರೆ ಇದೆ.

ಡ್ರಗ್ಸ್ ವಿಚಾರಕ್ಕೂ ತನಗೂ ಸಂಬಂಧವಿಲ್ಲ. ನಾನು ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿ. ನಾನು ಬೆಳೆಯುವುದನ್ನು ಸಹಿಸದವರು ಹಲವರು ಇದ್ದಾರೆ. ಹೀಗಾಗಿ ನನ್ನ ವಿರುದ್ಧ ಈ ರೀತಿ ಆರೋಪ ಕೇಳಿ ಬಂದಿದೆ ಎಂದು ರಾಗಿಣಿ ಈ ವಿಚಾರದಲ್ಲಿ ನನ್ನು ತಪ್ಪಿಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಹಲವರಿಂದ ನನಗೆ ಪಾರ್ಟಿಗೆ ಬರುವಂತೆ ಆಹ್ವಾನ ಬರುತ್ತೆ. ಆ ಪಾರ್ಟಿಗಳಿಗೆ ನಾನು ಹೋಗುವುದು ಸತ್ಯ. ಆದ್ರೆ ಅಲ್ಲಿನ ಡ್ರಗ್ಸ್ ವಿಚಾರಗಳ ಬಗ್ಗೆ ನನಗೇನೂ ಗೊತ್ತಿಲ್ಲ. ಅಲ್ಲಿ ಯಾಱರು ಬಂದಿದ್ದರು ಎಂಬುದೂ ನನಗೆ ಗೊತ್ತಿಲ್ಲ ಎಂದು ಸಿಸಿಬಿ ವಿಚಾರಣೆ ವೇಳೆ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಹೇಳಿಕೆ ನೀಡಿದ್ದಾರೆ.

Published On - 8:34 am, Mon, 7 September 20

Click on your DTH Provider to Add TV9 Kannada