ಬೆಂಗಳೂರು: ಕಿರಿಕ್ ಹುಡುಗಿ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಈಗಾಗಲೇ ಬಹುತೇಕ ವಿವಾದಗಳಿಗೆ ಸಿಲುಕಿ ಟ್ರೋಲ್ ಆಗುತ್ತಿರುವ ನಟಿ. ಈಗ ಆ ಟ್ರೋಲ್ಸ್ ಗಳಿಗೆ ಧ್ವನಿ ಎತ್ತಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಆಗ್ತಿರುವ ಕಿರುಕುಳಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಟರ್ಸ್ ಗಳನ್ನ ಸಾಫ್ಟ್ ಟಾರ್ಗೆಟ್ ಮಾಡಲಾಗ್ತಿದೆ. ಪಬ್ಲಿಕ್ ಫೀಗರ್ಸ್ ಅಂದ ಮಾತ್ರಕ್ಕೆ ನಿರ್ದಯವಾಗಿ ಟಾರ್ಗೆಟ್ ಮಾಡಬೇಕು ಎಂದೇನಿಲ್ಲ. ನಾನು ಬ್ಯಾಡ್ ಕಮೆಂಟ್ಸ್ ಹಾಗೂ ಟ್ರೋಲ್ ಗಳನ್ನ ಆದಷ್ಟು ಅವೈಡ್ ಮಾಡುತ್ತಿದ್ದೇನೆ. ನಮ್ಮ ಕೆಲಸದ ಬಗ್ಗೆ ಹೇಳಲು ನಿಮಗೆ ಹಕ್ಕಿದೆ, ಆದರೆ ನಮ್ಮ ಫ್ಯಾಮಿಲಿ ಹಾಗೂ ಪರ್ಸನಲ್ ಲೈಫ್ ಬಗ್ಗೆ ಹೇಳಲು ನಿಮಗೆ ಅಧಿಕಾರವಿಲ್ಲ.
ನನ್ನನ್ನು ನೋಯಿಸುವುದರಲ್ಲಿ ಯಶಸ್ವಿ ಆಗಿದ್ದೀರಿ. ಅದನ್ನು ಮಾಡಲು ನೀವು ಸಮರ್ಥರಾಗಿದ್ದೀರಿ ಎಂದು ಭಾವಿಸಿರಲಿಲ್ಲ. ಇದನ್ನು ಅನುಸರಿಸಬೇಕಾದದ್ದು ನಿಮ್ಮ ಮೇಲಿದೆ ಎಂದು ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಬರೆದು ಟ್ರೋಲಿಗರಿಗೆ ಕ್ಲಾಸ್ ತೆಗೆದುಕೊಂಡದ್ದಾರೆ.
Published On - 12:17 pm, Thu, 7 November 19