‘ಪ್ರದೋಷ್ ಅರ್ಧ ಸಾಕ್ಷಿ ನುಡಿದಿದ್ದಾನೆ’: ವಿಚಾರಣೆ ಬಳಿಕ ದರ್ಶನ್ ಪರ ಲಾಯರ್ ಹೇಳಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚುರುಕುಗೊಂಡಿದೆ. ಮಾಫಿಸಾಕ್ಷಿಯಾಗಿ ಪ್ರದೋಷ್ ಅವರ ಹೇಳಿಕೆಯನ್ನು ದಾಖಲು ಮಾಡಲಾಗುತ್ತಿದೆ. ಇಂದು (ಸೆಪ್ಟೆಂಬರ್ 28) ನಡೆದ ವಿಚಾರಣೆ ಬಗ್ಗೆ ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚುರುಕುಗೊಂಡಿದೆ. ಮಾಫಿಸಾಕ್ಷಿಯಾಗಿ ಪ್ರದೋಷ್ ರಾವ್ ಅವರ ಹೇಳಿಕೆಯನ್ನು ದಾಖಲು ಮಾಡಲಾಗುತ್ತಿದೆ. ಇಂದು (ಸೆಪ್ಟೆಂಬರ್ 28) ನಡೆದ ವಿಚಾರಣೆ ಬಗ್ಗೆ ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಸುಪ್ರೀಂ ಕೋರ್ಟ್ನಲ್ಲಿ ಎಸ್ಎಲ್ಪಿ ಹಾಕಿದ್ದೇವೆ. ಅದರ ಆದೇಶ ಬರುವ ತನಕ ಅವಕಾಶ ಕೊಡಿ ಅಂತ ಕೆಳನ್ಯಾಯಾಲಯದಲ್ಲಿ ಮನವಿ ಮಾಡಿದ್ವಿ. ಆದರೆ ಅವರು ಒಪ್ಪಿಲ್ಲ. ಇಂದು ಪ್ರದೋಷ್ನ ಮುಖ್ಯ ವಿಚಾರಣೆ ಆರಂಭ ಆಗಿದೆ. ಅವನು ಸಾಕ್ಷಿ ಹೇಳಿದ್ದಾನೆ. ಈಗ ಅರ್ಧ ಸಾಕ್ಷಿ ಆಗಿದೆ. ನಾಳೆ ಮುಂದುವರಿದ ಸಾಕ್ಷಿ ನುಡಿಯುತ್ತಾನೆ. ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಪರವಾಗಿ ಆದೇಶ ಬಂದರೆ ಅದು ಪರಿಣಾಮ ಬೀರುತ್ತದೆ’ ಎಂದು ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಹೇಳಿದ್ದಾರೆ. ಖಂಡಿತವಾಗಿ ತಾವು ದರ್ಶನ್ ಅವರಿಗೆ ಗೆಲುವು ಕೊಡಿಸುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
