ಬಾಲಿವುಡ್​ನ ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್​ನಲ್ಲಿ ನೆಗೆಟಿವ್ ರೋಲ್​ನಲ್ಲಿ ಸಮಂತಾ

|

Updated on: Jan 26, 2020 | 9:25 AM

ಸೌತ್ ಸಿನಿ ಇಂಡಸ್ಟ್ರೀಯ ಸ್ಟಾರ್ ನಟಿ ಸಮಂತಾ ಅದೃಷ್ಟವೇ ಸರಿ ಇಲ್ಲ. ಪದೇಪದೆ ಸ್ಯಾಮ್ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸ್ತಿದ್ದಾರೆ. ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಆದಷ್ಟು ದೂರ ಉಳಿದು ಬಿಟ್ಟಿದ್ದಾರೆ. ಸಮಂತಾ. ಟಾಲಿವುಡ್ ಮತ್ತು ಕಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿ. ಸ್ಟಾರ್ ಹೀರೋಯಿನ್​ಗಳ ಸಿನಿಮಾ ಅಂದ್ರೆ ಸಾಕು ಸಮಂತಾ ಹೆಸ್ರು ಮೊದ್ಲು ರೇಸ್​ನಲ್ಲಿರ್ತಿತ್ತು. ಆದ್ರೆ ಮದ್ವೆ ಆದ್ಮೇಲೆ ಸಮಂತಾಗೆ ಇಲ್ಲದಂತಾಗಿದೆ. ಅಂದ್ಹಾಗೇ, ಸಮಂತಾ ಸಿನಿಮಾಗಳಿಲ್ಲದೆ ವೆಬ್ ಸಿರೀಸ್ ಮೊರೆ ಹೋಗಿದ್ದಾರೆ. ಬಾಲಿವುಡ್​ನ ದಿ ಫ್ಯಾಮಿಲಿ ಮ್ಯಾನ್ ಅನ್ನೋ ವೆಬ್ ಸಿರೀಸ್​ನಲ್ಲಿ […]

ಬಾಲಿವುಡ್​ನ ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್​ನಲ್ಲಿ ನೆಗೆಟಿವ್ ರೋಲ್​ನಲ್ಲಿ ಸಮಂತಾ
Follow us on

ಸೌತ್ ಸಿನಿ ಇಂಡಸ್ಟ್ರೀಯ ಸ್ಟಾರ್ ನಟಿ ಸಮಂತಾ ಅದೃಷ್ಟವೇ ಸರಿ ಇಲ್ಲ. ಪದೇಪದೆ ಸ್ಯಾಮ್ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸ್ತಿದ್ದಾರೆ. ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಆದಷ್ಟು ದೂರ ಉಳಿದು ಬಿಟ್ಟಿದ್ದಾರೆ.

ಸಮಂತಾ. ಟಾಲಿವುಡ್ ಮತ್ತು ಕಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿ. ಸ್ಟಾರ್ ಹೀರೋಯಿನ್​ಗಳ ಸಿನಿಮಾ ಅಂದ್ರೆ ಸಾಕು ಸಮಂತಾ ಹೆಸ್ರು ಮೊದ್ಲು ರೇಸ್​ನಲ್ಲಿರ್ತಿತ್ತು. ಆದ್ರೆ ಮದ್ವೆ ಆದ್ಮೇಲೆ ಸಮಂತಾಗೆ ಇಲ್ಲದಂತಾಗಿದೆ.

ಅಂದ್ಹಾಗೇ, ಸಮಂತಾ ಸಿನಿಮಾಗಳಿಲ್ಲದೆ ವೆಬ್ ಸಿರೀಸ್ ಮೊರೆ ಹೋಗಿದ್ದಾರೆ. ಬಾಲಿವುಡ್​ನ ದಿ ಫ್ಯಾಮಿಲಿ ಮ್ಯಾನ್ ಅನ್ನೋ ವೆಬ್ ಸಿರೀಸ್​ನಲ್ಲಿ ನೆಗೆಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದು ಎಲ್ರಿಗೂ ಶಾಕ್ ಕೊಟ್ಟಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕಿರುತೆರೆಗೆ ಕಾಲಿಟ್ಟಿದ್ದಾರೆ.

ಹೌದು, ಸಮಂತಾ ಅಕ್ಕಿನೇನಿ ಕಿರುತೆರೆ ಕಾರ್ಯಕ್ರಮದ ಌಂಕರ್ ಆಗ್ತಿದ್ದಾರೆ. ಇತ್ತೀಚೆಗೆ ಸಮಂತಾ ಅಭಿಮಾನಿಗಳು ಸಿನಿಮಾಗಳನ್ನ ಮಿಸ್ ಮಾಡ್ಕೊಳ್ತಿದ್ದಾರೆ. ಕಿರುತೆರೆ ಮೂಲಕವಾದ್ರೂ ಅಭಿಮಾನಿಗಳನ್ನ ರಂಜಿಸಬಹುದು ಅನ್ನೋ ಯೋಚನೆಯಲ್ಲಿದ್ದಾರಂತೆ. ಈ ಕಾರ್ಯಕ್ರಮದಲ್ಲಿ ಸಮಂತಾ ಹಲವು ತಾರೆಯರನ್ನ ಸಂದರ್ಶನ ಮಾಡಲಿದ್ದಾರಂತೆ.

2017ರಲ್ಲಿ ಸಮಂತಾ ನಾಗಚೈತನ್ಯರನ್ನ ಮದ್ವೆ ಆದ್ರು. ಆದಾದ ಬಳಿಕ ಸಮಂತಾ ಹೀರೋಯಿನ್ ಆಗಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಷ್ಟೇ. 2018ರಲ್ಲಿ ತೆರೆಕಂಡ ರಂಗಸ್ಥಳಂ, ಮಜಿಲಿ, ಓ ಬೇಬಿ, ಯೂ ಟರ್ನ್​ ಮಾತ್ರ ಗಮನ ಸೆಳೆದೆದ್ವು. ಮಿಕ್ಕೆಲ್ಲಾ ಸಿನಿಮಾಗಳಲ್ಲೂ ಸಮಂತಾ ಅತಿಥಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ.

ಒಟ್ನಲ್ಲಿ ಮದ್ವೆ ನಂತ್ರ ಸಿನಿಮಾ ಅವಕಾಶಗಳು ಕಮ್ಮಿ ಆಗಿವೆ ಅಂತಾ ಸಮಂತಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಿರುತೆರೆ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

Published On - 9:23 am, Sun, 26 January 20