ಬಂಡೀಪುರ ಅರಣ್ಯದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ವಾಸ್ತವ್ಯ, ಯಾಕೆ ಗೊತ್ತಾ!?

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸೂಪರ್ ಸ್ಟಾರ್  ರಜಿನಿಕಾಂತ್ ವಾಸ್ತವ್ಯ ಹೂಡಿದ್ದಾರೆ. ವನ್ಯಜೀವಿ ಕುರಿತು ಸಾಕ್ಷ್ಯಚಿತ್ರದಲ್ಲಿ ನಟಿಸಲು ತಲೈವಾ ಆಗಮಿಸಿದ್ದು, ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಸಾಕ್ಷ್ಯಚಿತ್ರ ಚಿತ್ರೀಕರಿಸಿದ ಬೇರ್ ಗ್ರೀಲ್ಸ್ ಅವರೇ ರಜಿನಿಕಾಂತ್ ಅವರ ಸಾಕ್ಷ್ಯ ಚಿತ್ರ ಡೈರೆಕ್ಷನ್ ಮಾಡಲಿದ್ದಾರೆ. ಬೆನಿಜಾಯ್ ಏಷ್ಯಾ ಗ್ರೂಪ್​ನ ಸೆವೆನ್ ಟಾರಸ್ ಸ್ಟುಡಿಯೋದಿಂದ ವನ್ಯಜೀವಿ ಸಾಕ್ಷ್ಯಚಿತ್ರ ತಯಾರಾಗುತ್ತಿದ್ದು, ಜನವರಿ 27ರಂದು ಅರ್ಧ ದಿನ ಮಾತ್ರ ಶೂಟಿಂಗ್ ನಡೆಸಿದೆ. ಜನವರಿ 28ರ ಬೆಳಗ್ಗೆ 10 ರಿಂದ ಸಂಜೆ […]

ಬಂಡೀಪುರ ಅರಣ್ಯದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ವಾಸ್ತವ್ಯ, ಯಾಕೆ ಗೊತ್ತಾ!?
ಸಾಧು ಶ್ರೀನಾಥ್​

Updated on: Jan 29, 2020 | 11:59 AM

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸೂಪರ್ ಸ್ಟಾರ್  ರಜಿನಿಕಾಂತ್ ವಾಸ್ತವ್ಯ ಹೂಡಿದ್ದಾರೆ. ವನ್ಯಜೀವಿ ಕುರಿತು ಸಾಕ್ಷ್ಯಚಿತ್ರದಲ್ಲಿ ನಟಿಸಲು ತಲೈವಾ ಆಗಮಿಸಿದ್ದು, ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಸಾಕ್ಷ್ಯಚಿತ್ರ ಚಿತ್ರೀಕರಿಸಿದ ಬೇರ್ ಗ್ರೀಲ್ಸ್ ಅವರೇ ರಜಿನಿಕಾಂತ್ ಅವರ ಸಾಕ್ಷ್ಯ ಚಿತ್ರ ಡೈರೆಕ್ಷನ್ ಮಾಡಲಿದ್ದಾರೆ.

ಬೆನಿಜಾಯ್ ಏಷ್ಯಾ ಗ್ರೂಪ್​ನ ಸೆವೆನ್ ಟಾರಸ್ ಸ್ಟುಡಿಯೋದಿಂದ ವನ್ಯಜೀವಿ ಸಾಕ್ಷ್ಯಚಿತ್ರ ತಯಾರಾಗುತ್ತಿದ್ದು, ಜನವರಿ 27ರಂದು ಅರ್ಧ ದಿನ ಮಾತ್ರ ಶೂಟಿಂಗ್ ನಡೆಸಿದೆ. ಜನವರಿ 28ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಮತ್ತು ಜ.29 ರಂದು ಅರ್ಧ ದಿನ ಶೂಟಿಂಗ್ ನಡೆಸಲಿದೆ. ಇಂದು ಮಧ್ಯಾಹ್ನದ ನಂತರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಹುಲಿ ಸಂರಕ್ಷಿತಾರಣ್ಯದಲ್ಲಿ ಶೂಟಿಂಗ್ ನಡೆಯುತ್ತಿರುವ ಕಾರಣ ಯಾವುದೇ ಕಾರಣಕ್ಕೂ ಶಬ್ದಮಾಲಿನ್ಯ, ವಾಯುಮಾಲಿನ್ಯವಾಗದಂತೆ ಅರಣ್ಯ ಇಲಾಖೆ ಷರತ್ತು ವಿಧಿಸಿದೆ. ಅಲ್ಲದೆ, ಅರಣ್ಯ ಸಂಪತ್ತಿಗೆ ಧಕ್ಕೆಯಾಗದಂತೆ ಹಾಗೂ ಜವಾಬ್ದಾರಿಯುತ ಅರಣ್ಯಾಧಿಕಾರಿಗಳ ಸಮಕ್ಷಮದಲ್ಲಿ ಚಿತ್ರೀಕರಣ ನಡೆಸುವಂತೆ ಸೂಚನೆ ನೀಡಿದೆ.

 

Published On - 10:47 am, Tue, 28 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us