ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ನ ಹಠಾತ್ ನಿಧನದ ಬಳಿಕ ದೇಶಾದ್ಯಂತ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದ ಬಾಲಿವುಡ್ನ ಕರಾಳಮುಖ ಈಗ ನಿಧಾನವಾಗಿ ಹೊರಬರುತ್ತಿದೆ. ಇದೀಗ ದಕ್ಷಿಣ ಸಿನಿರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸಮೀರಾ ರೆಡ್ಡಿ ಕೂಡ ಬಾಲಿವುಡ್ನಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ನ ಹಲವಾರು ಚಿತ್ರಗಳ ಆಡಿಷನ್ಗೆ ಹೋದ ವೇಳೆ ಈ ಕೃಷ್ಣಸುಂದರಿಗೆ ನೀನು ತುಂಬಾ ಕಪ್ಪಗಿದ್ದೀಯಾ ಅಥವಾ ನೀನು ತುಂಬಾ ಉದ್ದ ಇದ್ದೀಯಾ ಎಂದು ಹೇಳಿ ರಿಜೆಕ್ಟ್ ಮಾಡುತ್ತಿದ್ದರಂತೆ. ಕೆಲು ಸಲ ನೀನು ತುಂಬಾ ದಪ್ಪಗಿದ್ದೀಯಾ ಎಂದು ಸಹ ಹೇಳಿದ್ದುಂಟಂತೆ. ಪ್ರತಿ ಬಾರಿ ಇಂಥ ಸಬೂಬುಗಳನ್ನು ಕೇಳಿ ರೋಸುಹೋದ ಸಮೀರಾಗೆ ನಾನು ಯಾಕಾದ್ರೂ ಇಲ್ಲಿ ಬಂದೆ ಅಂತಾ ಸಹ ಅನ್ನಿಸಿದ್ದು ಉಂಟು.
ಈ ನೋವಿನ ಸಂಗತಿಗಳನ್ನು ಹಂಚಿಕೊಂಡ ನಟಿ ಇದು ತಾರತಮ್ಯವಲ್ಲ. ಆದರೆ, ಈ ಸಿನಿಮಾ ರಂಗದಲ್ಲಿ ನಟಿಸಲು ನಟಿಯರು ಹೀಗೇ ಕಾಣಬೇಕೆಂಬ ಅಲಿಖಿತ ನಿಯಮ ಇದೆ ಅಂತಾ ನನಗೆ ಭಾಸವಾಯಿತು ಎಂದು ಹೇಳಿದ್ದಾರೆ.
Published On - 7:39 pm, Mon, 24 August 20