ಸರಿಲೇರು ನೀಕೆವ್ವರು ಟೀಸರ್ ನೋಡಿದ ರಶ್ಮಿಕಾ ಅಭಿಮಾನಿಗಳಿಗೆ ಫುಲ್ ಶಾಕ್

|

Updated on: Nov 25, 2019 | 10:15 AM

ಮಹೇಶ್ ಬಾಬು ನಟನೆಯ ಸರಿಲ್ಲೇರು ನೀಕೆವ್ವರು ಸಿನಿಮಾ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್​​ನಲ್ಲಿ ಈ ಟೀಸರ್ ದೊಡ್ಡ ಹಲ್ ಚಲ್ ಎಬ್ಬಿಸಿದೆ. ಸೈನಿಕನಾಗಿ ಸೂಪರ್​ಸ್ಟಾರ್ ಮಹೇಶ್ ಬಾಬು ಮಿಂಚಿದ್ದಾರೆ. ಆದ್ರೆ ಈ ಟೀಸರ್ ನೋಡಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಮಾತ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಸರಿಲೇರು ನೀಕೆವ್ವರು.’ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುರ ಮೋಸ್ಟ್ ಎಕ್ಸ್​ಪೆಕ್ಟೆಟ್ ಸಿನಿಮಾವಾಗಿದೆ. ಅದ್ರಲ್ಲೂ ಸೈನಿಕನ ಗೆಟಪ್​ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ತಿರೋದು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಮೊನ್ನೆ ರಿಲೀಸ್ ಆದ ಟೀಸರ್​ನಲ್ಲಿ ಯೋಧರ […]

ಸರಿಲೇರು ನೀಕೆವ್ವರು ಟೀಸರ್ ನೋಡಿದ ರಶ್ಮಿಕಾ ಅಭಿಮಾನಿಗಳಿಗೆ ಫುಲ್ ಶಾಕ್
Follow us on

ಮಹೇಶ್ ಬಾಬು ನಟನೆಯ ಸರಿಲ್ಲೇರು ನೀಕೆವ್ವರು ಸಿನಿಮಾ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್​​ನಲ್ಲಿ ಈ ಟೀಸರ್ ದೊಡ್ಡ ಹಲ್ ಚಲ್ ಎಬ್ಬಿಸಿದೆ. ಸೈನಿಕನಾಗಿ ಸೂಪರ್​ಸ್ಟಾರ್ ಮಹೇಶ್ ಬಾಬು ಮಿಂಚಿದ್ದಾರೆ. ಆದ್ರೆ ಈ ಟೀಸರ್ ನೋಡಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಮಾತ್ರ ಬೇಸರ ವ್ಯಕ್ತಪಡಿಸಿದ್ದಾರೆ.

‘ಸರಿಲೇರು ನೀಕೆವ್ವರು.’ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುರ ಮೋಸ್ಟ್ ಎಕ್ಸ್​ಪೆಕ್ಟೆಟ್ ಸಿನಿಮಾವಾಗಿದೆ. ಅದ್ರಲ್ಲೂ ಸೈನಿಕನ ಗೆಟಪ್​ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ತಿರೋದು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಮೊನ್ನೆ ರಿಲೀಸ್ ಆದ ಟೀಸರ್​ನಲ್ಲಿ ಯೋಧರ ಬಗ್ಗೆ ಹೊಡೆದ ಡೈಲಾಗ್​ ಅಭಿಮಾನಿಗಳನ್ನ ಹುಚ್ಚೆಬ್ಬಿಸುವಂತೆ ಮಾಡಿತ್ತು

ಟೀಸರ್​ನಲ್ಲೇನೋ ಮಹೇಶ್ ಬಾಬು, ‘ನೀವು ಯಾರು ನನಗೆ ಗೊತ್ತಿಲ್ಲ.. ನಿಮಗೂ ನನಗೂ ಯಾವ ರಕ್ತ ಸಂಬಂಧನೂ ಇಲ್ಲ. ಆದ್ರೆ, ನಿಮಗೊಸ್ಕರ ನಿಮ್ಮ ಮಕ್ಕಳಿಗೊಸ್ಕರ ಹಗಲು ರಾತ್ರಿ ಅನ್ನದೆ ಹೋರಾಡ್ತಾನೇ ಇದ್ದೀನಿ. ಯಾಕಂದ್ರೆ ನೀವು ನನ್ನ ಜವಾಬ್ದಾರಿ. ಅಂತಾ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಈ ಡೈಲಾಗ್​ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಆದ್ರೆ, ಇದೇ ಡೈಲಾಗ್ ರಶ್ಮಿಕಾ ಅಭಿಮಾನಿಗಳ ಪಾಲಿಗೆ ಉಲ್ಟಾ ಹೊಡೆಯುವಂತಾಗಿದೆ. ರಶ್ಮಿಕಾ ನಿಮಗೆ ಯಾರೆಂದು ಗೊತ್ತಿಲ್ವಾ..? ನಿಮ್ಮ ಚಿತ್ರಕ್ಕೂ ರಶ್ಮಿಕಾಗೂ ಯಾವುದೇ ಸಂಬಂಧವಿಲ್ವಾ..? ಅಂತಾ ಕಿರಿಕ್ ಮಾಡ್ತಿದ್ದಾರೆ.

ಸರಿಲೇರು ನೀಕೆವ್ವರು ಸಿನಿಮಾದ ಟೀಸರ್ ರಶ್ಮಿಕಾ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಯಾಕಂದ್ರೆ, ಒಂದೇ ಒಂದು ಫ್ರೇಮ್​ನಲ್ಲಿ ರಶ್ಮಿಕಾ ಕಾಣಿಸಿಕೊಂಡಿಲ್ಲ. ಟೀಸರ್ ಹೆಸರಿನ ಟೈಟಲ್ ಕಾರ್ಡ್​ನಲ್ಲಿ ರಶ್ಮಿಕಾ ಹೆಸರು ಇರೋದು ಬಿಟ್ರೆ, ಕಿರಿಕ್ ಬೆಡಗಿ ಮತ್ತೆಲ್ಲೂ ಕಾಣ್ಸಲ್ಲ. ಹೀಗಾಗಿ, ಸರಿಲೇರು ನೀಕೆವ್ವರು ಟೀಸರ್ ನೋಡಿ ರಶ್ಮಿಕಾ ಅಭಿಮಾನಿಗಳು ಬೇಸರ ಆಗಿದ್ದಾರೆ.

ಟೀಸರ್ ಸೂಪರ್ ಆಗಿದೆ. ಆದ್ರೆ, ರಶ್ಮಿಕಾ ಮಂದಣ್ಣಳನ್ನು ಮಿಸ್ ಮಾಡಿಕೊಳ್ತಿದ್ದೇವೆ. ಎಲ್ಲಿ ರಶ್ಮಿಕಾ..? ನಮಗೆ ತುಂಬಾ ಬೇಸರವಾಯ್ತು ಎಂದು ರಶ್ಮಿಕಾ ಅಭಿಮಾನಿಗಳು ಕೊರಗು, ನಿರಾಸೆ ವ್ಯಕ್ತಪಡಿಸಿಕೊಂಡಿದ್ದಾರೆ. ಈ ಮೊದ್ಲು ಫಸ್ಟ್​​ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಆಗಲೂ ರಶ್ಮಿಕಾಳ ಒಂದೇ ಒಂದು ಫಸ್ಟ್​ಲುಕ್ ರಿಲೀಸ್ ಮಾಡಿಲ್ಲ ಅನ್ನೋ ಬೇಸರ ಸಿನಿಪ್ರೇಮಿಗಳದ್ದು.

2020ರ ಸಂಕ್ರಾಂತಿಗೆ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಟ್ರೈಲರ್​ನಲ್ಲಾದ್ರೂ ರಶ್ಮಿಕಾ ಕಾಣಿಸಿಕೊಳ್ತಾರಾ? ಇಲ್ಲ, ರಶ್ಮಿಕಾಳದ್ದೇ ಪ್ರತ್ಯೇಕ ಟೀಸರ್ ಬಿಡ್ತಾರಾ..? ಅನ್ನುವುದು ರಶ್ಮಿಕಾ ಅಭಿಮಾನಿಗಳ ಪ್ರಶ್ನೆಯಾಗಿದೆ.

Published On - 6:58 am, Mon, 25 November 19