ಬೆಂಗಳೂರು: ಕನ್ನಡದ ಡಿಂಪಲ್ ಕ್ವೀನ್ಗೆ ಡಿಮ್ಯಾಂಡೋ, ಡಿಮ್ಯಾಂಡು. ಸ್ಯಾಂಡಲ್ವುಡ್ ಲಕ್ಕಿ ಕ್ವೀನ್ ನಟಿ ರಚಿತಾರಾಮ್ ತಮ್ಮ ಅದೃಷ್ಟವನ್ನ ಟಾಲಿವುಡ್ನಲ್ಲಿ ಪರೀಕ್ಷೆ ಮಾಡ್ತಿದ್ದಾರೆ. ರಚ್ಚು ಈಗ ಪರಭಾಷೆ ಸಿನಿಮಾಗಳಿಗೂ ಬಣ್ಣ ಹಚ್ಚೋಕೆ ಸಿದ್ದವಾಗಿದ್ದು, ಸದ್ಯ ತೆಲುಗು ಸಿನಿಮಾದಲ್ಲಿ ರಚಿತಾ ಕಾಣಿಸಿಕೊಳ್ತಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ವುಡ್ನ ಅದೃಷ್ಟ ದೇವತೆ. ಯಾಕಂದ್ರೆ ರಚ್ಚು ಮಾಡಿರೋ ಸಿನಿಮಾಗಳು ಸೋತ ಉದಾಹರಣೆಗಳೇ ಕಡಿಮೆ. ಈಕೆ ಲಕ್ಕಿ ಗರ್ಲ್ ಅಂತಲೇ ಅದೆಷ್ಟೋ ಸ್ಟಾರ್ ನಟರು, ನಿರ್ದೇಶಕರು ಈಕೆಯ ಕಾಲ್ಶೀಟ್ಗಾಗಿ ಬೇಡಿಕೆ ಇಟ್ಟಿದ್ದೂ ಇದೆ. ಇಷ್ಟು ದಿನ ಕನ್ನಡದಲ್ಲಿ ಮಾತ್ರ ಮೋಡಿ ಮಾಡಿದ್ದ ರಚ್ಚು, ಈಗ ಪರ ಭಾಷೆಗಳಲ್ಲೂ ತಮ್ಮ ಅದೃಷ್ಟವನ್ನ ತೆಗೆದುಕೊಂಡು ಹೋಗ್ತಿದ್ದಾರೆ.
ಬುಲ್ ಬುಲ್ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ಗೆ ಎಂಟ್ರಿಕೊಟ್ಟ ನಟಿ ರಚಿತಾ ರಾಮ್, ಈಗ ಸ್ಯಾಂಡಲ್ವುಡ್ನ ಟಾಪ್ ನಟಿ. ಜೊತೆಗೆ ರಚ್ಚು ಇದ್ರೆ ಸಿನಿಮಾ ಗೆಲ್ಲೋದು ಪಕ್ಕಾ ಅನ್ನೋ ನಂಬಿಕೆ ಇದೆ. ಸದ್ಯ ರಚಿತಾರಾಮ್ಗೆ ಟಾಲಿವುಡ್ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳು ರಚಿತಾಳನ್ನ ಅರಸಿ ಬರ್ತಿವೆ. ಅದ್ರಲ್ಲಿ, ಸದ್ಯಕ್ಕೆ ಮೆಗಾ ಕುಟುಂಬದ ಕುಡಿಯೊಂದಿಗೆ ರಚ್ಚು ಅಭಿನಯಿಸ್ತಿರೋ ಸುದ್ದಿ ರಿವೀಲ್ ಆಗಿದೆ.
ಮೆಘಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಹೊಸ ಸಿನಿಮಾ ಸೂಪರ್ ಮಚ್ಚಿ ಸಿನಿಮಾದಲ್ಲಿ ರಚ್ಚು ಕಲ್ಯಾಣ್ ದೇವ್ ಜೊತೆಗೆ ಬಣ್ಣ ಹಚ್ತಿದ್ದಾರೆ. ಇದು ಕಲ್ಯಾಣ್ ದೇವ್ ಅಭಿನಯದ ಎರಡನೇ ಸಿನಿಮಾ. ವಿಜೇತ ಸಿನಿಮಾ ಮೂಲಕ ಕಲ್ಯಾಣ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಆದ್ರೆ, ಅಷ್ಟೇನೂ ಸಕ್ಸಸ್ ಕಾಣಲಿಲ್ಲ. ಈಗ ರಚ್ಚು ಜೊತೆಗೆ ಲಕ್ ಟೆಸ್ಟ್ ಮಾಡ್ತಿದ್ದಾರೆ.
ಇದೊಂದೇ ಸಿನಿಮಾ ಅಲ್ಲ. ನಂದಮುರಿ ಬಾಲಕೃಷ್ಣ ಜೊತೆಗೂ ರಚಿತಾರಾಮ್ ಸಿನಿಮಾ ಮಾಡಲಿದ್ದಾರಂತೆ. ಜೊತೆಗೆ ಟಾಲಿವುಡ್ನಿಂದ ಇನ್ನಷ್ಟು ಆಫರ್ಸ್ಗಳು ರಚ್ಚು ಲಿಸ್ಟ್ನಲ್ಲಿವೆ. ಸದ್ಯಕ್ಕೆ ನವೆಂಬರ್ 22ರಿಂದ ಸೂಪರ್ ಮಚ್ಚಿ ಸಿನಿಮಾದಲ್ಲಿ ರಚ್ಚು ಬ್ಯೂಸಿಯಾಗಲಿದ್ದಾರೆ.
Published On - 8:13 am, Mon, 18 November 19