ಬೆಂಗಳೂರು: ಸ್ಯಾಂಡಲ್ವುಡ್ನ ಸಹ ನಟಿ ದೃಶ್ಯ ಅಲಿಯಾಸ್ ನಿತ್ಯನ್ ವಿರುದ್ಧ ರಿಯಲ್ ಎಸ್ಟೇಟ್ ಉದ್ಯಮಿ ರಾಜೇಶ್ ಹಲ್ಲೆ ಆರೋಪ ಮಾಡಿದ್ದು, ಇಬ್ಬರೂ ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದಾರೆ.
ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ?:
ದೃಶ್ಯ ಬಳಿ ಹಣ ಕೇಳ್ತೀಯಾ ಅಂತ ಪ್ರಶ್ನಿಸಿ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ಬೇಸ್ ಬ್ಯಾಟ್, ಲಾಂಗ್ನಿಂದ ಉದ್ಯಮಿ ರಾಜೇಶ್ ಮೇಲೆ ಹಲ್ಲೆ ನಡೆಸಿದ ಗ್ಯಾಂಗ್ ಹಿಗ್ಗಾಮುಗ್ಗ ಥಳಿಸಿ ರೇಸರ್ನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ತಕ್ಷಣ ರಾಜೇಶ್ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅಯೋಗ್ಯ ಚಿತ್ರದ ಸಹನಟಿ ದೃಶ್ಯ ಮತ್ತು ಆಕೆಯ ತಂದೆ ಮನ್ಮಥ ವಿರುದ್ಧ ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ದೃಶ್ಯ ಮತ್ತು ಆಕೆಯ ತಂದೆ ಮನ್ಮಥ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ನಿತ್ಯನ್ರಿಂದಲೂ ಪ್ರತಿದೂರು:
ಉದ್ಯಮಿ ರಾಜೇಶ್ ಹಾಗೂ ಪ್ರಶಾಂತ್ ವಿರುದ್ಧ ಹೈದ್ರಾಬಾದ್ನ ಬಂಜಾರ ಹಿಲ್ಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ. ರಾಜೇಶ್ ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಧಮ್ಕಿ ಹಾಕಿದ್ದಾನೆ. ಪ್ರಶಾಂತ್ ವಿರುದ್ಧ ಈ ಹಿಂದೆ ಅತ್ಯಾಚಾರ ದೂರು ದಾಖಲಿಸಿದ್ದೆ. ಈ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ರಾಜೀಶ್ ಧಮ್ಕಿ ಹಾಕಿದ್ದಾಗಿ ಸಹನಟಿ ದೃಶ್ಯ ಪ್ರತಿದೂರು ದಾಖಲಿಸಿದ್ದಾಳೆ.
Published On - 3:34 pm, Fri, 15 November 19