ಬೆಂಗಾಳಿ ಬ್ಯೂಟಿ ಪ್ರಿಯಾಂಕಾ ಉಪೇಂದ್ರ ಹೊಸ ಚಿತ್ರಕ್ಕಾಗಿ ಈ ಕಸರತ್ತು

|

Updated on: Nov 12, 2019 | 2:25 PM

ಪ್ರಿಯಾಂಕಾ ಉಪೇಂದ್ರ ಕನ್ನಡದ ಸೆನ್ಸೆಷನಲ್ ನಟಿ. ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟ ತಾರೆ. ಚಂದನವನದ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡ ಬೆಂಗಾಳಿ ಬ್ಯೂಟಿ. ಮನ ಅರಳಿಸೋ ಹೂವೇ ಹೂವೇ ಹಾಡಿಗೆ ಹೆಜ್ಜೆ ಹಾಕಿದ ಚೆಲುವೆ. ಪ್ರಿಯಾಂಕಾ ಉಪೇಂದ್ರ ಒಬ್ಬರು ಅದ್ಭುತ ನಟಿ ಮಾತ್ರವಲ್ಲ, ಉತ್ತಮ ಕಲಾವಿದೆ ಕೂಡಾ ಹೌದು. ನಾಯಕಿ ಪ್ರಧಾನ ಚಿತ್ರಗಳು ಮಾತ್ರವಲ್ಲದೆ ಬಗೆ ಬಗೆ ಪಾತ್ರಗಳನ್ನು ನಿರ್ವಹಿಸುವ ಕನಸು ಇವರಲ್ಲಿದೆ. ಬಹುಭಾಷಾ ನಟಿ ಆಗಿರುವ ಇವರು ಯಾವ ಪಾತ್ರಕ್ಕಾದರೂ ಜೀವ […]

ಬೆಂಗಾಳಿ ಬ್ಯೂಟಿ ಪ್ರಿಯಾಂಕಾ ಉಪೇಂದ್ರ ಹೊಸ ಚಿತ್ರಕ್ಕಾಗಿ ಈ ಕಸರತ್ತು
Follow us on

ಪ್ರಿಯಾಂಕಾ ಉಪೇಂದ್ರ ಕನ್ನಡದ ಸೆನ್ಸೆಷನಲ್ ನಟಿ. ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟ ತಾರೆ. ಚಂದನವನದ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡ ಬೆಂಗಾಳಿ ಬ್ಯೂಟಿ. ಮನ ಅರಳಿಸೋ ಹೂವೇ ಹೂವೇ ಹಾಡಿಗೆ ಹೆಜ್ಜೆ ಹಾಕಿದ ಚೆಲುವೆ.

ಪ್ರಿಯಾಂಕಾ ಉಪೇಂದ್ರ ಒಬ್ಬರು ಅದ್ಭುತ ನಟಿ ಮಾತ್ರವಲ್ಲ, ಉತ್ತಮ ಕಲಾವಿದೆ ಕೂಡಾ ಹೌದು. ನಾಯಕಿ ಪ್ರಧಾನ ಚಿತ್ರಗಳು ಮಾತ್ರವಲ್ಲದೆ ಬಗೆ ಬಗೆ ಪಾತ್ರಗಳನ್ನು ನಿರ್ವಹಿಸುವ ಕನಸು ಇವರಲ್ಲಿದೆ. ಬಹುಭಾಷಾ ನಟಿ ಆಗಿರುವ ಇವರು ಯಾವ ಪಾತ್ರಕ್ಕಾದರೂ ಜೀವ ತುಂಬುವ ಚಾಕಚಕ್ಯತೆ ಹೊಂದಿದ್ದಾರೆ.

ಸದಾ ಒಂದಲ್ಲ ಒಂದು ಸುದ್ದಿಯಲ್ಲಿದ್ದ ಪ್ರಿಯಾಂಕಾ ಈ ಬಾರಿ ಹೊಸದಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಪ್ರಿಯಾಂಕಾ ಅವರ ಫಿಟ್ನೆಸ್​ ಬಗ್ಗೆಯೇ ಸುದ್ದಿ. ಬೆಂಗಾಳಿ ಬೆಡಗಿ ದಿನೇ ದಿನೇ ಫಿಟ್ ಆಗೋಕೆ ಕಾರಣ ಜಿಮ್​ ವರ್ಕೌಟ್ ಅಂತೆ. ಮುಂದಿನ ಚಿತ್ರಕ್ಕೆ ಫಿಟ್ನೆಸ್​ ಅಗತ್ಯವಿರುವುದರಿಂದ ಜಿಮ್​ನ ಮೊರೆ ಹೋಗಿದ್ದಾರೆ ಈ ಚೆಲುವೆ. ಜಿಮ್ ವರ್ಕೌಟ್​ನಲ್ಲಿ ವೇಟ್ ಲಾಸ್ ಎಕ್ಸ್​ಸೈಸ್ ಮತ್ತು ಫಂಕ್ಷನಲ್ ಟ್ರೇನಿಂಗ್ ವರ್ಕೌಟ್​ಗಳ ಕಡೆ ಹೆಚ್ಚಿನ ಗಮನ ಹರಿಸ್ತಾರಂತೆ ಪ್ರಿಯಾಂಕಾ.

ಇನ್ನು ಇವರ ಜಿಮ್​ ವರ್ಕೌಟ್​ನಲ್ಲಿ ಟೈರ್ ಎಕ್ಸ್​ಸೈಜ್ ಕೂಡಾ ಒಳಗೊಂಡಿದೆ. ಇದು ಇವರಿಗೆ ಹೆಲ್ತಿ ಫಿಟ್ನೆಸ್​ ಮೇಂಟೇನ್ ಮಾಡಲು ಸಹಕಾರಿಯಾಗುತ್ತಂತೆ. ಹಾಗೆಯೇ ಡೆಡ್​ ಲಿಫ್ಟ್, ಪುಶ್ಯಪ್ಸ್​, ಡಂಬೆಲ್ಸ್​, ಲೋವರ್ ಬಾಡಿ ಮತ್ತು ಅಪ್ಪರ್ ಬಾಡಿ ವ್ಯಾಯಾಮಗಳು ಇರುತ್ತಂತೆ. ಈ ಎಲ್ಲಾ ಎಕ್ಸಸೈಜ್​ಗಳು ಕ್ಯಾಲೋರಿ ಬರ್ನ್​ ಮಾಡಿ ಆರೋಗ್ಯಕರವಾಗಿ ಫಿಟ್ ಆ್ಯಂಡ್ ಫೈನ್ ಬಾಡಿ ಉಳಿಸಿಕೊಳ್ಳಲು ನೆರವಾಗುತ್ತಂತೆ.

Published On - 2:03 pm, Tue, 12 November 19