ಖ್ಯಾತ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ

|

Updated on: Feb 18, 2020 | 2:46 PM

ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಕಿಶೋರಿ ಬಲ್ಲಾಳ್ 70ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಕಹಿ’ ಅವರ ಕೊನೆಯ ಸಿನಿಮಾ. ಕಿಶೋರಿ ಬಲ್ಲಾಳ್ ‘ಸ್ವದೇಸ್’ ಹಿಂದಿ ಚಿತ್ರದಲ್ಲಿ ಶಾರುಖ್ ಖಾನ್​ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. ಇತ್ತೀಚೆಗೆ ಇವರ ಪತಿ ಶ್ರೀಪತಿ ಬಲ್ಲಾಳ್ ತೀರಿಕೊಂಡಿದ್ರು. ಸ್ಪರ್ಶ, ನಮ್ಮಣ್ಣ, ಅಕ್ಕ-ತಂಗಿ, ಕೆಂಪೇಗೌಡ, ಗಲಾಟೆ ಚಿತ್ರಗಳ ಮೂಲಕ ಚಿರಪರಿಚಿತರಾಗಿದ್ದರು. ಕಿಶೋರಿ ಬಲ್ಲಾಳ್ ಇತ್ತೀಚೆಗೆ ಬಿದ್ದು ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. […]

ಖ್ಯಾತ ನಟಿ ಕಿಶೋರಿ ಬಲ್ಲಾಳ್  ಇನ್ನಿಲ್ಲ
Follow us on

ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಕಿಶೋರಿ ಬಲ್ಲಾಳ್
70ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡದಲ್ಲಿ ‘ಕಹಿ’ ಅವರ ಕೊನೆಯ ಸಿನಿಮಾ. ಕಿಶೋರಿ ಬಲ್ಲಾಳ್ ‘ಸ್ವದೇಸ್’ ಹಿಂದಿ ಚಿತ್ರದಲ್ಲಿ ಶಾರುಖ್ ಖಾನ್​ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. ಇತ್ತೀಚೆಗೆ ಇವರ ಪತಿ ಶ್ರೀಪತಿ ಬಲ್ಲಾಳ್ ತೀರಿಕೊಂಡಿದ್ರು. ಸ್ಪರ್ಶ, ನಮ್ಮಣ್ಣ, ಅಕ್ಕ-ತಂಗಿ, ಕೆಂಪೇಗೌಡ, ಗಲಾಟೆ ಚಿತ್ರಗಳ ಮೂಲಕ ಚಿರಪರಿಚಿತರಾಗಿದ್ದರು.

ಕಿಶೋರಿ ಬಲ್ಲಾಳ್ ಇತ್ತೀಚೆಗೆ ಬಿದ್ದು ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಉಸಿರಾಟದ ತೊಂದರೆ ಅವರನ್ನು ಬಾಧಿಸುತ್ತಿತ್ತು.  ಇಂದು ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಪಾರ್ಥಿವ ಶರೀರವನ್ನ ಸೇವಾ ಕ್ಷೇತ್ರ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅವರ ಸೊಸೆ ತಿಳಿಸಿದ್ದಾರೆ.

Published On - 2:25 pm, Tue, 18 February 20