AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾನ್ವಿ ಸುದೀಪ್ ಬೆನ್ನಿನ ಮೇಲೆ ಮೂಡಿತು ಗಣೇಶನ ಟ್ಯಾಟೂ; ಎಷ್ಟು ಅದ್ಭುತವಾಗಿದೆ ನೋಡಿ

ಸುದೀಪ್ ಪುತ್ರಿ ಸಾನ್ವಿ ಬೆನ್ನಿನ ಮೇಲೆ ಅದ್ಭುತ ಗಣೇಶ ಟ್ಯಾಟೂ ಮೂಡಿದ್ದು, 8 ಗಂಟೆಗಳ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರು ಎಷ್ಟು ದೊಡ್ಡ ಟ್ಯಾಟೂ ಪ್ರೇಮಿ ಎಂಬುದು ಇದರಲ್ಲಿ ಗೊತ್ತಾಗುತ್ತದೆ. ಅವರು ತಮ್ಮದೇ ಆದ ಸಂಗೀತ ಪಯಣದ ಮೂಲಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಸ್ಟಾರ್ ಪುತ್ರಿಯಾಗಿದ್ದರೂ ಸರಳತೆ ಮತ್ತು ಕಲೆಯ ಮೂಲಕ ತಮ್ಮ ಗುರುತನ್ನು ಸ್ಥಾಪಿಸಿದ್ದಾರೆ.

ಸಾನ್ವಿ ಸುದೀಪ್ ಬೆನ್ನಿನ ಮೇಲೆ ಮೂಡಿತು ಗಣೇಶನ ಟ್ಯಾಟೂ; ಎಷ್ಟು ಅದ್ಭುತವಾಗಿದೆ ನೋಡಿ
ಸಾನ್ವಿ
ರಾಜೇಶ್ ದುಗ್ಗುಮನೆ
|

Updated on:May 11, 2026 | 9:44 AM

Share

ಸುದೀಪ್ ಮಗಳು ಸಾನ್ವಿ ಸುದೀಪ್ (Shanvi Sudeep) ಯಾವಾಗಲೂ ತಮ್ಮ ಸರಳತೆಯಿಂದ ಗುರುತಿಸಿಕೊಂಡವರು. ಅವರು ಹೆಚ್ಚು ಹೈಲೈಟ್ ಆಗೋಕೆ ಇಷ್ಟಪಡಲ್ಲ. ಇತ್ತೀಚೆಗೆ ಸಾನ್ವಿ ಅವರು ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಭವ್ಯವಾದ ಗಣೇಶನ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೈದರಾಬಾದ್‌ನ ಜನಪ್ರಿಯ ಟ್ಯಾಟೂ ಸ್ಟುಡಿಯೋದಲ್ಲಿ ಸುಮಾರು 8 ಗಂಟೆಗಳ ಕಾಲ ತಾಳ್ಮೆಯಿಂದ ಕುಳಿತು ಈ ಕಲಾಕೃತಿಯನ್ನು ರಚಿಸಿಕೊಂಡಿದ್ದಾರೆ. ಕೆಂಪು ಮತ್ತು ಕಪ್ಪು ಬಣ್ಣದ ಮಿಶ್ರಣವಿರುವ ಈ ಟ್ಯಾಟೂ ಭವ್ಯವಾಗಿ ಮೂಡಿ ಬಂದಿದೆ.

1. ಟ್ಯಾಟೂ ಹಾಕಿಸಿಕೊಂಡ ಸಾನ್ವಿ ಸುದೀಪ್ 

2. ಬೆನ್ನಿನ ಮೇಲೆ ಮೂಡಿತು ಗಣಪತಿ ಚಿತ್ರ

3. ಟ್ಯಾಟೂಗೆ ಅಭಿಮಾನಿಗಳ ಮೆಚ್ಚುಗೆ

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಟ್ಯಾಟೂ ಕ್ರೇಜ್ ಇದ್ದೇ ಇದೆ. ಇದಕ್ಕೆ ಸಾನ್ವಿ ಕೂಡ ಹೊರತಾಗಿಲ್ಲ. ‘ನಾನು ಟ್ಯಾಟೂ ಹಾಕಿಸಿಕೊಳ್ಳೋಕೆ ಹೋಗ್ತಾ ಇದೀನಿ’ ಎಂದು ಸಾನ್ವಿ ವಿಡಿಯೋ ಹಂಚಿಕೊಂಡಿದ್ದಾರೆ. ನಂತರ ಟ್ಯಾಟೂ ಹಾಕಿಸಿಕೊಂಡ ಜರ್ನಿ ವಿವರಿಸಿದ್ದಾರೆ. ಅವರು ಹೈದರಾಬಾದ್​​ಗೆ ತೆರಳಿ ಟ್ಯಾಟೂ ಹಾಕಿಸಿಕೊಂಡರು. 8 ಗಂಟೆ ಇದಕ್ಕೆ ಬೇಕಾದರೂ ಮಧ್ಯದಲ್ಲಿ ಬ್ರೇಕ್​​ಗಳನ್ನು ಅವರು ಪಡೆದಿದ್ದರು. ಟ್ಯಾಟೂ ಮೂಡಿಬಂದ ರೀತಿ ನೋಡಿ ಅವರೇ ಬೆರಗಾದರು. ಅಭಿಮಾನಿಗಳು ಅವರ ಟ್ಯಾಟೂ ನೋಡಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಗೆಳತಿಯರೊಟ್ಟಿಗೆ ವಿದೇಶಿ ಪ್ರವಾಸದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್

ಸಾನ್ವಿ ಕೇವಲ ಟ್ಯಾಟೂ ಪ್ರೇಮಿಯಲ್ಲ, ಅವರು ಪ್ರತಿಭಾವಂತ ಗಾಯಕಿ ಕೂಡ ಹೌದು. ಬಾಲ್ಯದಿಂದಲೇ ಸಂಗೀತದ ಕಡೆಗೆ ಹೆಚ್ಚಿನ ಒಲವು ಹೊಂದಿರುವ ಇವರು, ಸುದೀಪ್ ನಟನೆಯ ಸಿನಿಮಾಗಳಲ್ಲಿ ಈಗಾಗಲೇ ಹಾಡುವ ಮೂಲಕ ತಮ್ಮ ಕಂಠಸಿರಿಯನ್ನು ಪ್ರದರ್ಶಿಸಿದ್ದಾರೆ. ಪಾಶ್ಚಾತ್ಯ ಸಂಗೀತವಿರಲಿ ಅಥವಾ ದೇಶೀಯ ರಾಗವಿರಲಿ, ಸಾನ್ವಿ ಅದ್ಭುತವಾಗಿ ಹಾಡುತ್ತಾರೆ. ‘ಮಸ್ತ್ ಮಲೈಕಾ..’ ಹಾಡು ಅವರ ಕಂಠದಲ್ಲೇ ಮೂಡಿ ಬಂದಿತ್ತು. ಈ ಹಾಡು ಗಮನ ಸೆಳೆದಿತ್ತು.

ಒಬ್ಬ ಸ್ಟಾರ್ ನಟನ ಮಗಳಾಗಿದ್ದರೂ, ಸಾನ್ವಿ ಅವರು ಎಂದೂ ಕೂಡ ಹಮ್ಮು-ಬಿಮ್ಮು ತೋರಿಸಿದವರಲ್ಲ. ತಮ್ಮದೇ ಆದ ಸ್ವತಂತ್ರ ಹಾದಿಯನ್ನು ರೂಪಿಸಿಕೊಳ್ಳುತ್ತಿರುವ ಅವರು, ಕಲೆ ಮತ್ತು ಸಂಗೀತದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:38 am, Mon, 11 May 26

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ