ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್, ಮನೆಯಲ್ಲೇ ಚಿಕಿತ್ಸೆ

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ನಟಿಗೆ ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಶರ್ಮಿಳಾ ಕುಟುಂಬದ ಐವರು ಸದಸ್ಯರಿಗೂ ಕೊರೊನಾ ದೃಢವಾಗಿದೆ ಎಂದು ತಿಳಿದುಬಂದಿದೆ. ನಟಿ ರಾಗಿಣಿಗೆ ಸಿಸಿಬಿ‌ ನೋಟಿಸ್ ಅನ್ನೋ ವಿಚಾರ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಸಿರೋ ಹಿನ್ನೆಲೆ ಕೆಲವು ನಟನಟಿಯರಿಗೆ ಆತಂಕ ಶುರುವಾಗಿದೆ. ಈ ಹಿಂದೆ ಶರ್ಮಿಳಾ ಮಾಂಡ್ರೆ ಬಗ್ಗೆಯೂ ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ರು. ಆ ವೇಳೆ ಶರ್ಮಿಳಾ […]

ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್, ಮನೆಯಲ್ಲೇ ಚಿಕಿತ್ಸೆ
Edited By: ಸಾಧು ಶ್ರೀನಾಥ್​

Updated on: Sep 03, 2020 | 10:58 AM

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ನಟಿಗೆ ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಶರ್ಮಿಳಾ ಕುಟುಂಬದ ಐವರು ಸದಸ್ಯರಿಗೂ ಕೊರೊನಾ ದೃಢವಾಗಿದೆ ಎಂದು ತಿಳಿದುಬಂದಿದೆ.

ನಟಿ ರಾಗಿಣಿಗೆ ಸಿಸಿಬಿ‌ ನೋಟಿಸ್ ಅನ್ನೋ ವಿಚಾರ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಸಿರೋ ಹಿನ್ನೆಲೆ ಕೆಲವು ನಟನಟಿಯರಿಗೆ ಆತಂಕ ಶುರುವಾಗಿದೆ. ಈ ಹಿಂದೆ ಶರ್ಮಿಳಾ ಮಾಂಡ್ರೆ ಬಗ್ಗೆಯೂ ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ರು. ಆ ವೇಳೆ ಶರ್ಮಿಳಾ ನನಗೆ ನಶೆ ನಂಟಿನ ಅಭ್ಯಾಸ ಇಲ್ಲ ಅನ್ನೋ ವಿಡಿಯೋ ಹರಿಯಬಿಟ್ಟಿದ್ರು.

ಈಗ ಕೊರೊನಾ ಪಾಸಿಟಿವ್ ಟ್ವಿಟ್ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತಾ ಕಾದು ನೋಡಬೇಕು.

Loading...
Unable to load recommendations.
Follow Us