‘ಭ್ರಮೆಯಲ್ಲಿ ಬದುಕಬೇಡಿ’; ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಶಿವರಾಜ್​ಕುಮಾರ್ ಕೌಂಟರ್

ದೊಡ್ಡ ಬಜೆಟ್ ಹಾಕಿದ ತಕ್ಷಣ ಸಿನಿಮಾ ಹಿಟ್ ಆಗುತ್ತದೆ ಎನ್ನುವುದು ಬ್ರಮೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ. ಪ್ಯಾನ್ ಇಂಡಿಯಾ ಹೈಪ್‌ಗಿಂತ ಸಿನಿಮಾದ ಸರಳ ಕಥೆ ಮತ್ತು ವಿಷಯ ಜನರಿಗೆ ಇಷ್ಟವಾಗುವುದು ಮುಖ್ಯ. ಕುಟುಂಬ ಸಮೇತ ನೋಡುವಂತಹ ಒಳ್ಳೆಯ ಚಿತ್ರಗಳನ್ನು ಪ್ರೇಕ್ಷಕರು ಯಾವಾಗಲೂ ಬೆಂಬಲಿಸುತ್ತಾರೆ ಎಂದು ಶಿವಣ್ಣ ಅಭಿಪ್ರಾಯಪಟ್ಟಿದ್ದಾರೆ.

‘ಭ್ರಮೆಯಲ್ಲಿ ಬದುಕಬೇಡಿ’; ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಶಿವರಾಜ್​ಕುಮಾರ್ ಕೌಂಟರ್
ಶಿವರಾಜ್​ಕುಮಾರ್

Updated on: Oct 09, 2026 | 1:08 PM

ಮುಖ್ಯಾಂಶಗಳು

  • ದೊಡ್ಡ ಬಜೆಟ್ ಸಿನಿಮಾ ಹಿಟ್ ಆಗೋದು ಭ್ರಮೆ
  • ಪ್ಯಾನ್ ಇಂಡಿಯಾ ಟ್ರೆಂಡ್ ಬಗ್ಗೆ ಶಿವಣ್ಣ ನೇರ ಮಾತು
  • ಸಿನಿಮಾಗೆ ಹೈಪ್ ಬೇಕಿಲ್ಲ, ಕಥೆ ಮುಖ್ಯ

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಬೃಹತ್ ಬಜೆಟ್ ಹಾಕಿ ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಿಸಿ ಪ್ಯಾನ್ ಇಂಡಿಯಾ ಹೈಪ್ ಸೃಷ್ಟಿಸುವ ಟ್ರೆಂಡ್ ಚಾಲ್ತಿಯಲ್ಲಿದೆ. ಆದರೆ ಇಂತಹ ಅನೇಕ ಭಾರಿ ಬಜೆಟ್‌ನ ಪ್ರಯೋಗಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತು ಸುಣ್ಣವಾಗಿವೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ನೇರವಾಗಿ ಮಾತನಾಡಿದ್ದಾರೆ.

‘ದೊಡ್ಡ ಬಜೆಟ್ ಹಾಕಿದ ತಕ್ಷಣ ಸಿನಿಮಾ ಭಾರಿ ಹಿಟ್ ಆಗುತ್ತದೆ ಎಂಬುದು ಕೇವಲ ಸುಳ್ಳು ಮತ್ತು ಭ್ರಮೆ. ಸಿನಿಮಾ ಯಶಸ್ವಿಯಾಗಲು ಮುಖ್ಯವಾಗಿ ಕಥೆ ಮತ್ತು ವಿಷಯ ಜನರಿಗೆ ಇಷ್ಟವಾಗಬೇಕು. ಬಜೆಟ್‌ಗಿಂತ ಸಿನಿಮಾದ ಕಥೆ ಪ್ರೇಕ್ಷಕರನ್ನು ಆಕರ್ಷಿಸುವುದು ಅತ್ಯಂತ ಮುಖ್ಯ’ ಎಂದು ಅವರು ಹೇಳಿದ್ದಾರೆ.

‘ಕನ್ನಡ ಚಿತ್ರರಂಗ ಬೆಳೆಯುತ್ತಿಲ್ಲ ಎಂಬ ಸಮಯದಲ್ಲಿ ಪ್ರೇಮದ ಊರಲಿ, ಸಿಲ್ಲಿಲೈಟ್ಸ್, ಬೇಲ್ ನಂತಹ ಸಿನಿಮಾಗಳು ಬಂದಿವೆ. ಜನರು ಚಿತ್ರಮಂದಿರಕ್ಕೆ ಬರಬೇಕಾದರೆ ಅವರಿಗೆ ಸಿನಿಮಾ ಸುಲಭವಾಗಿ ಅರ್ಥವಾಗಬೇಕು. ಕೇವಲ ವೈಭವದ ಪ್ರದರ್ಶನ ನೀಡಿದರೆ ಪ್ರೇಕ್ಷಕರು ಒಪ್ಪುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಇತ್ತೀಚೆಗೆ ಬಿಡುಗಡೆಯಾದ ಬೇಲ್ ಸಿನಿಮಾವನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ. ಏಕೆಂದರೆ ಇಡೀ ಕುಟುಂಬ ಕುಳಿತು ನೋಡುವಂತಹ ಸರಳ ಮನರಂಜನೆ ಮತ್ತು ಉತ್ತಮ ಕಥೆ ಅದರಲ್ಲಿದೆ. ಚಿತ್ರದ ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸಲಾಗಿದ್ದು, ಸರಳವಾಗಿ ಜನರಿಗೆ ತಲುಪುವಂತೆ ಸಿನಿಮಾ ಮಾಡುವುದೇ ನಿಜವಾದ ಯಶಸ್ಸು’ ಎಂದು ಶಿವಣ್ಣ ಉದಾಹರಿಸಿದ್ದಾರೆ.

ಇದನ್ನೂ ಓದಿ: ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ

‘ಕೆಲವೊಮ್ಮೆ ಒಳ್ಳೆಯ ಚಿತ್ರಗಳೂ ಗೆಲ್ಲಲ್ಲ. ಚಿತ್ರತಂಡಗಳು ಕೇವಲ ಪ್ಯಾನ್ ಇಂಡಿಯಾ ಭ್ರಮೆಯಲ್ಲಿ ಬದುಕದೆ ವಾಸ್ತವದಲ್ಲಿದ್ದು ಸಿನಿಮಾ ಮಾಡಬೇಕು. ಕಥೆ ಚೆನ್ನಾಗಿದ್ದು, ಕುಟುಂಬ ಸಮೇತ ನೋಡುವಂತಿದ್ದರೆ ಜನರು ಖಂಡಿತ ಚಿತ್ರಮಂದಿರಕ್ಕೆ ಬರುತ್ತಾರೆ. ಕೇವಲ ಹಣ ಸುರಿದು ಹೈಪ್ ಸೃಷ್ಟಿಸಿದರೆ ಸಿನಿಮಾ ಗೆಲ್ಲುವುದಿಲ್ಲ’ ಎಂದು ಶಿವರಾಜ್‌ಕುಮಾರ್ ಅವರು ಚಲನಚಿತ್ರ ರಂಗಕ್ಕೆ ಕಿವಿಮಾತು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:24 pm, Fri, 9 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us