‘ಜೋಗಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಮೊದಲಾದವರು ನಟಿಸಿದ್ದರು. ಈ ಸಿನಿಮಾದ ದೊಡ್ಡ ಗೆಲುವಿನ ಹಿಂದೆ ಅನೇಕರ ಶ್ರಮ ಇದೆ. ತಾಯಿಗೆ ಬಳೆ ಮಾಡಿಸಬೇಕು ಎಂದು ಹಣ ಮಾಡಲು ನಗರಕ್ಕೆ ಬರೋ ವ್ಯಕ್ತಿ ಆ ಬಳಿಕ ತಾಯಿ ಮುಖವನ್ನು ನೋಡದೇ ಹೋಗಬೇಕಾಗುತ್ತದೆ. ಭವಾನತ್ಮಕವಾಗಿ ಈ ಸಿನಿಮಾ ಆವರಿಸಿಕೊಂಡಿತ್ತು. ಈ ಚಿತ್ರ ಯಶಸ್ಸು ಕಂಡಿದ್ದು ಏಕೆ ಎಂಬ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದ್ದರು.
‘ಜೋಗಿ’ ಸಿನಿಮಾ 2005ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಶಿವಣ್ಣ ಜೋಗಿ ಹೆಸರಿನ ಪಾತ್ರ ಮಾಡಿದ್ದರು. ಅರುಂಧತಿ ನಾಗ್ ಅವರು ತಾಯಿ ಜೋಗಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಡಿ ಸಿನಿಮಾ ತಾಯಿ-ಮಗನ ಬಾಂಧವ್ಯದ ಬಗ್ಗೆ ಹೇಳುತ್ತದೆ. ಈ ಚಿತ್ರದ ಓಪನಿಂಗ್ ಕಾರ್ಡ್ನಲ್ಲಿ ರಾಜ್ಕುಮಾರ್ ಹಾಗೂ ಪಾರ್ವತಮ್ಮ ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ಹಿಟ್ ಆಯಿತು ಎಂಬುದು ಶಿವರಾಜ್ಕುಮಾರ್ ಅವರ ನಂಬಿಕೆ.
‘ಓಪನಿಂಗ್ ಕಾರ್ಡ್ನಲ್ಲಿ ಅಪ್ಪಾಜಿ-ಅಮ್ಮ ಬಂದಿದ್ದರು. ಆಶೀರ್ವಾದ ಮಾಡಿದರು ಅವರು. ಓಪನಿಂಗ್ ಅಲ್ಲೇ ದೇವರನ್ನು ತೋರಿಸಿದರು. ಅದಕ್ಕೆ ಸಿನಿಮಾ ಹಿಟ್ ಆಯ್ತು’ ಎಂದಿದ್ದಾರೆ ಶಿವರಾಜ್ಕುಮಾರ್. ‘ಅಮ್ಮನ ಶವ ನೋಡೋದೇ ಇಲ್ವ ಎಂಬ ಪ್ರಶ್ನಾರ್ಥಕದಲ್ಲೇ ಸಿನಿಮಾ ಸಾಗುತ್ತದೆ. ಸ್ಮಶಾನದಲ್ಲಿ ಸಿನಿಮಾ ಶೂಟ್ ಮಾಡುತ್ತಿದ್ದೆವು. ಅಲ್ಲಿ ರಿಯಲ್ ಹೆಣ ಬಂತು. ಆಗ ನಾನು ಅಲ್ಲೋಗಿ ಡ್ಯಾನ್ಸ್ ಮಾಡಿದ್ದೆ. ಎಲ್ಲವೂ ರಿಯಲ್ ಆಗಿ ಬಂದಿದೆ’ ಎಂದಿದ್ದಾರೆ ಶಿವಣ್ಣ.
‘ದೇವಸ್ಥಾನದಲ್ಲಿ ಬರುವ ಒಂದು ದೃಶ್ಯವನ್ನು ನೋಡಿ ರಜನಿಕಾಂತ್ ಈಗಲೂ ಮೆಚ್ಚಿಕೊಳ್ಳುತ್ತಾರೆ. ಅದನ್ನು ಹೇಗೆ ಮಾಡಿದೆ ನೀನು ಅನ್ನೋದು ನನಗೆ ಈಗಲೂ ಗೊತ್ತಾಗಲ್ಲ ಎಂದು ಹೇಳುತ್ತಾರೆ’ ಎಂದಿದ್ದಾರೆ ಶಿವರಾಜ್ಕುಮಾರ್ ಅವರು.
ಇದನ್ನೂ ಓದಿ: ಶಿವರಾಜ್ಕುಮಾರ್ ಅಮೆರಿಕ ಹೋಗೋದು ಎಂದು? ಸರ್ಜರಿ ಯಾವಾಗ?; ಮಾಹಿತಿ ನೀಡಿದ ಗೀತಕ್ಕ
ಶಿವರಾಜ್ಕುಮಾರ್ ಅವರಿಗೆ ಈಗ ಅನಾರೋಗ್ಯ ಆಗಿದೆ. ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಡಿಸೆಂಬರ್ 24ರಂದು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅದಕ್ಕೂ ಕೆಲ ದಿನಗಳ ಮೊದಲು ಅವರು ಅಮೆರಿಕಕ್ಕೆ ತೆರಳಲಿಲದ್ದಾರೆ. ಆ ಬಳಿಕ ಶಿವಣ್ಣ ಅವರು ದೀರ್ಘ ಬ್ರೇಕ್ ಪಡೆಯಲಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ‘45’ ಹೆಸರಿನ ಸಿನಿಮಾ ರಿಲೀಸ್ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.