ಬಾಲಿವುಡ್ ಬೆಡಗಿ ಸೋನಾಕ್ಷಿ ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡ್ತಾರೆ. ಬಾಲಯ್ಯನ ಜೊತೆ ರೋಮ್ಯಾನ್ಸ್ ಮಾಡಿ ಅಭಿಮಾನಿಗಳನ್ನ ಸಿಹಿ ಸುದ್ದಿ ನೀಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ಆದ್ರೀಗ ಬಾಲಿವುಡ್ ಬೆಡಗಿ ಬಾಲಯ್ಯನ ಜೊತೆ ಸೊಂಟ ಬಳುಕಿಸೋ ಸುದ್ದಿಗೆ ಬ್ರೇಕ್ ಬಿದ್ದಿದೆ.
ಮಾಸ್ ಸಿನಿಮಾಗಳ ಮೂಲಕ ಕಮಾಲ್ ಮಾಡಿ ಬೆಳ್ಳಿಪರದೆ ಮೇಲೆ ಅಬ್ಬರಿಸೋ ಟಾಲಿವುಡ್ ನಟ ಬಾಲಯ್ಯ ಸದ್ಯ ರೂಲರ್ ಆಗಿ ರಂಜಿಸೋಕೆ ರೆಡಿಯಾಗಿದ್ದಾರೆ. ಅಂದಹಾಗೆ ರೂಲರ್ ಆಗಿರೋ ಬಾಲಯ್ಯ ಮುಂದಿನ ಸಿನಿಮಾ ಇತ್ತಿಚೆಗಷ್ಟೇ ಅದ್ಧೂರಿಯಾಗಿ ಸೆಟ್ಟೇರಿದೆ. ಬಾಲಯ್ಯನ 106ನೇ ಸಿನಿಮಾಗೆ ಭರ್ಜರಿ ಸಿದ್ಧತೆ ನಡೀತಿದೆ.
ಅಂದಹಾಗೆ ಸದ್ಯ ಬಾಲಯ್ಯನ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಸೋನಾಕ್ಷಿ ಸೊಂಟ ಬಳುಕಿಸ್ತಾರೆ ಅನ್ನೋ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡ್ತಿದೆ. ಇನ್ನು, ನಿರ್ದೇಶಕ ಬೋಯಪಾಟಿ ಸೀನು ಹಾಗೂ ಚಿತ್ರತಂಡ ಸೋನಾಕ್ಷಿಯನ್ನ ಕರೆ ತರೋ ಪ್ಲಾನ್ ಮಾಡಿದೆಯಂತೆ. ಈಗಾಗ್ಲೇ ಒಂದು ಹಂತದ ಮಾತುಕತೆ ಕೂಡ ಮಾಡಲಾಗಿದೆ ಅನ್ನೋ ಸುದ್ದಿ ಕೇಳಿ ಬಂದಿತ್ತು.
ಆದ್ರೆ, ಸದ್ಯ ಹೀಗೆ ಹರಡಿದ್ದ ಸುದ್ದಿ ಸೋನಾಕ್ಷಿಗೂ ತಲುಪಿ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯಕ್ಕಂತೂ ಸೋನಾಕ್ಷಿ ಬಾಲಯ್ಯನ ಜೊತೆ ರೋಮ್ಯಾನ್ಸ್ ಮಾಡೋ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಸದ್ಯ ಹರಿದಾಡ್ತಿರೋ ಸುದ್ದಿ ಸುಳ್ಳು, ನಾನು ಟಾಲಿವುಡ್ ಸಿನಿಮಾದಲ್ಲಿ ಅಭಿನಯಿಸ್ತಿಲ್ಲ. ಸದ್ಯದಲ್ಲೇ ನನ್ನ ಮುಂದಿನ ಚಿತ್ರದ ಬಗ್ಗೆ ಹೇಳ್ತಿನಿ ಅಂತ ಟ್ವಿಟ್ಟರ್ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.
ಹಾಗಾದ್ರೆ ಈ ಸದ್ಯಕ್ಕಂತೂ ಸೋನಾಕ್ಷಿ ಸ್ಪಷ್ಟನೆ ಕೊಟ್ಟು ಸುಮ್ಮನಾಗಿದ್ದಾರೆ. ಆದ್ರೆ, ಬಾಲಯ್ಯನ ಜತೆ ರೋಮ್ಯಾನ್ಸ್ ಮಾಡೋ ಬೆಡಗಿ ಯಾರು ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗ್ತಿದೆ. ಇದೆಲ್ಲದರ ನಡುವೆ ಸಂಜಯ್ ದತ್ ಕೂಡ ಬಾಲಯ್ಯನ ಎದುರು ವಿಲನ್ ಆಗಿ ಅಬ್ಬರಿಸ್ತಾರೆ ಅನ್ನೋ ಸುದ್ದಿ ಕೂಡ ಸದ್ದು ಮಾಡ್ತಿದೆ. ಹಾಗಾದ್ರೆ ಅದೇನ್ ಕಥೆ ನಿಜವಾಗಿಯೂ ಸಂಜಯ್ ದತ್ ಬಾಲಯ್ಯನ ವಿರುದ್ಧ ಸೆಣಸಾಟಕ್ಕೆ ಇಳೀತಾರಾ ಅಥವಾ ಈ ಸುದ್ದಿ ಕೂಡ ಸುಳ್ಳಾಗುತ್ತಾ ಅನ್ನೋದನ್ನ ಕಾದು ನೊಡ್ಬೇಕಿದೆ.
https://twitter.com/sonakshisinha/status/1206458691517464576?s=20