
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಈ ಪೈಕಿ ಕೆಲವು ಯಶಸ್ಸು ಕಂಡರೆ ಇನ್ನೂ ಕೆಲವು ಸದ್ದಿಲ್ಲದೆ ಕಳೆದು ಹೋಗುತ್ತವೆ. ಹೊಸ ಪ್ರಯತ್ನಗಳ ಪೈಕಿ ಗೆಲ್ಲೋದು ಕೆಲವು ಮಾತ್ರ. ಈ ಸಾಲಿಗೆ ‘ವಿಡಿಯೋ’ ಸಿನಿಮಾ ಕೂಡ ಸೇರ್ಪಡೆ ಆಗುವ ನಿರೀಕ್ಷೆ ಇದೆ. ಹೊಸ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಮೆಚ್ಚುಗೆ ಪಡೆಯುತ್ತಿದೆ. ಬುಕಿಂಗ್ ಕೂಡ ಉತ್ತಮವಾಗಿಯೇ ಆಗುತ್ತಿದೆ.
‘ವಿಡಿಯೋ’ ಸಿನಿಮಾ ಯೂಟ್ಯೂಬರ್‌ಗಳ ಕಥೆ. ಕನ್ನಡದ ಫೇಮಸ್ ವ್ಲಾಗರ್ಸ್ ಭಯ ಬೀಳಿಸುವ ಜಾಗಕ್ಕೆ ತೆರಳುತ್ತಾರೆ. ಅಲ್ಲಿ ವ್ಲಾಗ್ ಮಾಡಿ ಫೇಮಸ್ ಆಗಬೇಕು ಎಂಬದು ಅವರ ಉದ್ದೇಶ ಆಗಿರುತ್ತದೆ. ಅಲ್ಲಿಗೆ ತೆರಳಿದ ಬಳಿಕ ಏನೆಲ್ಲ ಆಗುತ್ತದೆ ಎಂಬುದೇ ಸಿನಿಮಾದ ಕಥೆ. 6-5=2 ಹೆಸರಿನ ಹಾರರ್ ಸಿನಿಮಾ ಈ ಮೊದಲು ಬಂದು ಹಿಟ್ ಆಗಿತ್ತು. ಅದೇ ಮಾದರಿಯಲ್ಲಿ ಈ ‘ವಿಡಿಯೋ’ ಸಿನಿಮಾ ಮೂಡಿ ಬಂದಿದೆ. ಈ ಚಿತ್ರ ಹಾರರ್ ಪ್ರಿಯರಿಗೆ ಇಷ್ಟ ಆಗುತ್ತಿದೆ.
#VideoTheFilm ends its First Day with a Housefull Show at Victory Cinemas! 🔥👏 pic.twitter.com/P5WGhi8qiD
— Karnataka Talkies (@KA_Talkies) September 11, 2026
ಶ್ರೀನಿಧಿ ಬೆಂಗಳೂರು ಅವರು ‘ವಿಡಿಯೋ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡದ ಖ್ಯಾತ ನಟ ದೀಕ್ಷಿತ್ ಶೆಟ್ಟಿ ಅವರು ಶ್ರೀನಿಧಿ ಶೆಟ್ಟಿ ಪ್ರಯತ್ನಕ್ಕೆ ಹಣ ಹಾಕಿದ್ದಾರೆ. ‘ದೀ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಇದು ಮೂಡಿಬಂದಿದೆ.ಭರತ್, ಜೀವನ್ ಶಿವಕುಮಾರ್, ತೇಜಶ್, ಪ್ರಿಯಾ ಆಚಾರ ಮೊದಲಾದವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
‘ವಿಡಿಯೋ’ ಚಿತ್ರಕ್ಕೆ ಎ ರೇಟಿಂಗ್ ಸಿಕ್ಕಿದೆ. ವಿಶೇಷ ಎಂದರೆ ಸಿನಿಮಾಗೆ ಬೆಂಗಳೂರಿನಲ್ಲಿ ಕಡಿಮೆ ಶೋಗಳು ಸಿಕ್ಕಿವೆ. ಸಿಕ್ಕ ಶೋಗಳೇ ಹೌಸ್‌ಫುಲ್ ಆಗುತ್ತಿವೆ. ಈ ಸಿನಿಮಾದ ಬುಕಿಂಗ್ ಹೀಗೆಯೇ ಮುಂದುವರಿದರೆ ಎರಡನೇ ವಾರದ ವೇಳೆಗೆ ಶೋಗಳ ಸಂಖ್ಯೆ ಹೆಚ್ಚಾಗಬಹುದು.
ಇದನ್ನೂ ಓದಿ: ಟ್ರೇಲರ್ ಇಲ್ಲದೆ ಬರ್ತಿದೆ ‘ಪ್ಯಾರಡೈಸ್’ ಸಿನಿಮಾ; ಪ್ರೇಕ್ಷಕರು ಇದನ್ನು ಒಪ್ಪುತ್ತಾರಾ?
ಸದ್ಯ ಸಾಕಷ್ಟು ನಿರ್ದೇಶಕರು ಹಾಗೂ ಸೆಲೆಬ್ರಿಟಿಗಳು ಸಿನಿಮಾಗೆ ವಿಶ್ ಮಾಡುತ್ತಿದ್ದಾರೆ. ಈ ಸಿನಿಮಾ ಮತ್ತಷ್ಟು ಜನರನ್ನು ತಲುಪಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಈ ಸಿನಿಮಾಗೆ ಉತ್ತಮ ಬುಕಿಂಗ್ ಆಗುತ್ತಿರುವುದು ಬರಗಾದಲ್ಲಿ ಮಳೆ ಬಂದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.