
ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಈ ಚಿತ್ರದ ಟ್ರೇಲರ್ ನವೆಂಬರ್ 17ರಂದು ರಿಲೀಸ್ ಆಗಲಿದೆ. ದೂರದ ಪಾಟ್ನಾದಲ್ಲಿ ತಂಡ ಈವೆಂಟ್ ಆಯೋಜನೆ ಮಾಡಿದೆ. ಹೀಗಿರುವಾಗಲೇ ಅನೇಕರು ‘ಪುಷ್ಪ 2’ ಚಿತ್ರದ ಪೋಸ್ಟರ್ಗಳನ್ನು ‘ಕೆಜಿಎಫ್’ ಚಿತ್ರದ ಪೋಸ್ಟರ್ಗಳಿಗೆ ಹೋಲಿಕೆ ಮಾಡಿದ್ದಾರೆ. ಇದನ್ನು ಅನೇಕರು ಒಪ್ಪಿದ್ದಾರೆ.
ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ‘ಪುಷ್ಪ’ ಹಾಗೂ ‘ಕೆಜಿಎಫ್’ ಚಿತ್ರದ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ‘ಕೆಜಿಎಫ್’ ಚಿತ್ರಕ್ಕಿಂತ ಪುಷ್ಪ ಉತ್ತಮವಾಗಿ ಮೂಡಿ ಬರುತ್ತದೆ’ ಎಂದು ತೆಲುಗು ಮಂದಿ ಕೊಟ್ಟ ಹೇಳಿಕೆಯೇ ಇದಕ್ಕೆಲ್ಲ ಕಾರಣ. ಈಗ ‘ಕೆಜಿಎಫ್ 2’ ಚಿತ್ರ ಹಾಗೂ ‘ಪುಷ್ಪ 2’ ಚಿತ್ರಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.
‘ಕೆಜಿಎಫ್ 2’ ಚಿತ್ರ ಈಗಾಗಲೇ ರಿಲೀಸ್ ಆಗಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಡಿಸೆಂಬರ್ 5ರಂದು ‘ಪುಷ್ಪ 2’ ಚಿತ್ರ ರಿಲೀಸ್ ಆಗುತ್ತಿದೆ. ಮೊದಲ ದಿನ ಈ ಚಿತ್ರ ಭರ್ಜರಿ ಗಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಕೆಲವರು ಪೋಸ್ಟರ್ ಮಧ್ಯೆ ಹೋಲಿಕೆ ಮಾಡಿದ್ದಾರೆ.
ರಾಕಿ ಗನ್ ಹಿಡಿದು ಬರೋದು, ರಾಕಿ ಸಿಗರೇಟು ಹಚ್ಚಿಕೊಳ್ಳುದು ಸೇರಿ ಅನೇಕ ಪೋಸ್ಟರ್ಗಳ ಜೊತೆ ಪುಷ್ಪ ಪೋಸ್ಟರ್ಗಳನ್ನು ಹೋಲಿಕೆ ಮಾಡಲಾಗುತ್ತಿದೆ. ಇವುಗಳಲ್ಲಿ ಕೆಲವು ಸಾಮ್ಯತೆಗಳು ಕಾಣಿಸಿವೆ. ಹಾಗಂತ ಇದನ್ನು ಮಾಡುತ್ತಿರುವವರು ಕನ್ನಡದವರಲ್ಲ. ಪಕ್ಕಾ ತೆಲುಗು ಮಂದಿಯೇ ಈ ಪ್ರಶ್ನೆ ಕೇಳುತ್ತಿದ್ದಾರೆ ಅನ್ನೋದು ವಿಶೇಷ. ಈ ಬಗ್ಗೆ ಸುಕುಮಾರ್ ಅವರು ಯಾವ ರೀತಿಯ ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: ‘ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಅಂದ್ರು’; ಯಶ್ ಸಹಾಯ ನೆನೆದು ಭಾವುಕರಾದ ‘ಕೆಜಿಎಫ್’ ಚಾಚಾ
‘ಕೆಜಿಎಫ್’ ಹಾಗೂ ‘ಪುಷ್ಪ’ ಚಿತ್ರದ ಒನ್ಲೈನ್ ಸ್ಟೋರಿಯ ಮಧ್ಯೆ ಹೋಲಿಕೆ ಇದೆ. ಕಷ್ಟದಿಂದ ಬರೋ ರಾಕಿ ಭಾಯ್ ನಂತರ ಸಾಮ್ರಾಜ್ಯ ಕಟ್ಟುತ್ತಾರೆ. ಎರಡನೇ ಭಾಗದಲ್ಲಿ ಈ ಸಾಮ್ರಾಜ್ಯವನ್ನು ಆಳುತ್ತಾನೆ. ‘ಪುಷ್ಪ’ ಹಾಗೂ ‘ಪುಷ್ಪ 2’ ಕಥೆ ಕೂಡ ಇದೆ ರೀತಿಯಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Tue, 12 November 24